ಬಳ್ಳಾರಿ,ಜ.19
ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ಬಲಕುಂದಿ ಗ್ರಾಮದ ಶ್ರೀ ಬನ್ನಿಮಹಂಕಾಳಮ್ಮ ದೇವಸ್ಥಾನದ ವಾರ್ಷಿಕ ರಥೋತ್ಸವವು ಜ.29 ರಂದು ನಡೆಯಲಿದ್ದು, ಇದರ ಅಂಗವಾಗಿ ಸಿರುಗುಪ್ಪ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಜ.20 ರಂದು ಸಂಜೆ 04 ಗಂಟೆಗೆ ಬನ್ನಿಮಹಂಕಾಳಮ್ಮ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಿದ್ಧತಾ ಮತ್ತು ಶಾಂತಿ ಸಭೆಯನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ನೈರ್ಮಲಿಕರಣ, ಸ್ವಚ್ಚತೆ, ಬಂದೋಬಸ್ತ್, ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ದೇವರ ದರ್ಶನ, ಧಾರ್ಮಿಕ ಕಾರ್ಯಗಳು ಇತ್ಯಾದಿ ಕೆಲಸ ಕಾರ್ಯಗಳ ಕುರಿತು ವಿವಿಧ ಇಲಾಖೆಗಳಿಂದ ಕ್ರಮ ಅನುಸರಿಸಬೇಕಾಗಿರುವ ಕುರಿತು ಚರ್ಚಿಸಬೇಕಾಗಿರುತ್ತದೆ. ಅಧಿಕಾರಿಗಳು ಮತ್ತು ಸಾರ್ವಜನಿಕರು ತಪ್ಪದೇ ಭಾಗವಹಿಸಬೇಕು ಎಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ. =========