ವಿಜಯನಗರ(ಹೊಸಪೇಟೆ), ಜು.02(ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಅವಾಸ್ (ನಗರ) 2.0 ಯೋಜನೆಯನ್ನು ‘ಸರ್ವರಿಗೂ ಸೂರು’ ಒದಗಿಸಲು ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಬಡವರು ಕೊಳಚೆ ನಿವಾಸಿಗಳನ್ನು ಒಳಗೊಂಡAತೆ ಮಧ್ಯಮ ವರ್ಗದವರಿಗೆ ಸಹಾಯಧನ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.
ನಗರದ ಸ್ಥಳೀಯ ನಿವಾಸಿಗಳಾದ ಒಂಟಿ ಮಹಿಳೆಯರು, ಅಂಗವಿಕಲರು, ಹಿರಿಯ ನಾಗರಿಕರು, ತೃತೀಯ ಲಿಂಗಿಗಳು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರು, ಅಲ್ಪಸಂಖ್ಯಾತ ವರ್ಗದವರು, ಸ್ವಚ್ಛತಾ ಕಾರ್ಮಿಕರು, ಪಿಎಂ ಸ್ವನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ಬದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಗುರುತಿಸಿದ ಕುಶಲಕರ್ಮಿಗಳು, ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಕೈಗಾರಿಕರು, ವಲಸೆ ಬಂದ ಕುಟುಂಬದವರು ತಮ್ಮ ಅರ್ಜಿಗಳನ್ನು https://pmay-urban.gov.in ವೆಬ್‌ಸೈಟ್ ನಲ್ಲಿ ಸ್ವತಃ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದೇ ಜುಲೈ.15 ರೊಳಗಾಗಿ ಸಲ್ಲಿಸಿದ ದಾಖಲಾತಿಗಳನ್ನು ಆಯಾ ನಗರದ ಸಂಸ್ಥೆಗಳ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ನಗರ ಸಂಸ್ಥೆಗಳ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.