ಶಿವಮೊಗ್ಗ.ಮಾ.24 ಭಾರತ ಸರ್ಕಾರ ,ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಶಿವಮೊಗ್ಗ ,ಮೈ ಭಾರತ್, ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಹಾಗೂ ಇನ್ನೋವೇಟರ್ ಯೂಥ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ಮಾ.23 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ 2024-25 ಜರುಗಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಜನಪ್ರಿಯ ಶಾಸಕರಾದ ಶ್ರೀ. ಚನ್ನಬಸಪ್ಪ ರವರು ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಕ್ರೀಡಾಕೂಟದಲ್ಲಿ ಗುಂಪು ಸ್ಪರ್ಧೆಯಲ್ಲಿ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಖೋ ಖೋ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಗುಂಡು ಎಸೆತ ಮತ್ತು 100 ಮೀಟರ್ ಓಟದ ಸ್ಪರ್ಧೆ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದರು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಎಸ್‌ಎಸ್‌ವಿವಿಸಿ ರಿಪ್ಪನ್ ಪೇಟೆ, ಹೊಸನಗರ ತಾಲ್ಲೂಕಿನ ತಂಡವು ಪ್ರಥಮ ಬಹುಮಾನ, ದ್ವೀತಿಯ ಬಹುಮಾನ ಸ್ಟೇಡಿಯಂ ಜೂನಿಯರ್ ಬಾಯ್ಸ್, ಶಿವಮೊಗ್ಗ. ಮಹಿಳೆಯರ ವಿಭಾಗದಲ್ಲಿ ಖೋ.ಖೋ ಪಂದ್ಯದಲ್ಲಿ ಪ್ರಥಮ ಸೇಂಟ್ ಜೋಸೆಫ್ ಅಕ್ಷರಧಾಮ ಐಸಿಎಸ್‌ಸಿ ಸ್ಕೂಲ್, ಶಿವಮೊಗ್ಗ, ದ್ವೀತಿಯ ಕೆಜಿ ಪಿ.ಯು ಕಾಲೇಜು, ವೈಯಕ್ತಿಕ ಮಹಿಳೆಯರ ವಿಭಾಗದಲ್ಲಿ 100 ಮೀ ಓಟದಲ್ಲಿ ಅಮೂಲ್ಯ, ಸಾನ್ವಿ ಮತ್ತು ಗುಂಡು ಎಸೆತದಲ್ಲಿ ಸಿಂಧು, ನಯನ ಹಾಗೂ ವೈಯುಕ್ತಿಕ ಪುರುಷರ ವಿಭಾಗದ ಗುಂಡು ಎಸೆತದಲ್ಲಿ ಲಿಖಿತ್ ನಾಯ್ಕ್, ಶಶಾಂಕ ಮತ್ತು ಬ್ಯಾಡ್ಮಿಟನ್ ಮೇಘರಾಜ್, ಮಂಜುನಾಥ್ ರವರು ಪ್ರಥಮ,ದ್ವೀತಿಯ ಸ್ಥಾನ ಪಡೆದಿರುತ್ತಾರೆ. ವಿಜೇತರಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಎ ಎಸ್ ಪಿ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ , ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಉಲ್ಲಾಸ್ ಕೆ ಟಿ ಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯಕ್ ,ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಇಮ್ರಾನ್, ಇನ್ನೋವೇಟರ್ ಯೂತ್ ಕ್ಲಬ್ ಶೇಕ್ ಅಸೇನ್ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ಸದಸ್ಯರಾದ ಕಿರಣ, ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.