Ad image

ಎಐಎಸ್ಎಫ್ ಸಂಘಟನೆಯಿಂದ ಖಾಸಗಿ ಶಾಲೆಗಳಲ್ಲಿ  ಡೊನೇಷನ್ ಹಾವಳಿ ತಡೆಯುವಂತೆ  ಆಗ್ರಹಿಸಿ ಪ್ರತಿಭಟನೆ.

Vijayanagara Vani
ಎಐಎಸ್ಎಫ್ ಸಂಘಟನೆಯಿಂದ ಖಾಸಗಿ ಶಾಲೆಗಳಲ್ಲಿ  ಡೊನೇಷನ್ ಹಾವಳಿ ತಡೆಯುವಂತೆ  ಆಗ್ರಹಿಸಿ ಪ್ರತಿಭಟನೆ.
ಗಂಗಾವತಿ: ನಗರ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಲು ಸಾಲಾಗಿ  ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚುತ್ತಿದ್ದು ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಕ್ಷಣದ ವ್ಯಾಪಾರಿಕರಣ ಡೊನೇಶನ್ ಮೂಲಕ ಜರುಗುತ್ತಿದ್ದು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಂಪೂರ್ಣ  ಕಡಿವಾಣ ಹಾಕಬೇಕೆಂದು ಒಕ್ಕಾಯಿಸಿ ಎಐಎಸ್ಎಫ್ ಸಂಘಟನೆಯ ಕಾರ್ಯಕರ್ತರು ಗುರುವಾರದಂದು ಶಿಕ್ಷಣ ಇಲಾಖೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯದ್ಯಕ್ಷ ಎಸ್ ಎಂ ಹಿರೇಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ ಕೆ ಜಿ ಯು ಕೆ ಜಿ ಯಿಂದ 50ರಿಂದ 60 ಸಾವಿರ ರೂಪಾಯಿ ಡೊನೇಶನ್ ಪಡೆದುಕೊಳ್ಳುತ್ತಿದ್ದು ಶಿಕ್ಷಣದ ವ್ಯಾಪಾರಿಕರಣ ಬಹುತೇಕ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅವ್ಯವತವಾಗಿ ಜರಗುತ್ತಿದ್ದು ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸುತ್ತಿಲ್ಲ. ತಕ್ಷಣವೇ ಇಲಾಖೆಯ ಅಧಿಕಾರಿಗಳು ಶಿಕ್ಷಣದ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಿಕ್ಷಣದ ಶುಲ್ಕ ವಿವರಗಳನ್ನು ನಾಮಪಲಕದಲ್ಲಿ ಹಾಕಬೇಕು ಎಂದು ತಿಳಿಸಿದರು. ಈ ಕುರಿತು ನಿರ್ಲಕ್ಷ ಧೋರಣೆ ಅನುಸರಿಸದಲ್ಲಿ ಇಲಾಖೆ ಮುಂದೆ ಹೋರಾಟವನ್ನು ನಡೆಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎ. ಹುಲುಗಪ್ಪ. ಜಿಲ್ಲಾ ಕಾರ್ಯದರ್ಶಿ ಎ ಎಲ್ ತಿಮ್ಮಣ್ಣ. ಈರಮ್ಮ. ಮಾರಪ್ಪ.ಸೇರಿದಂತೆ ಸಂಘಟನೆಯ ಸದಸ್ಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Share This Article
error: Content is protected !!
";