ಎ.ಐ.ಟಿ.ಯು.ಸಿ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಪ್ರತಿಭಟನೆ

Vijayanagara Vani
ಎ.ಐ.ಟಿ.ಯು.ಸಿ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಪ್ರತಿಭಟನೆ
ಮಾನ್ವಿ:ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಎ.ಐ.ಟಿ.ಯು.ಸಿ ಸಂಯೋಜಿತ ತಾಲೂಕು ಘಟಕದಿಂದ ಪಟ್ಟಣದ ಬಸವ ವೃತ್ತದಿಂದ ಶಾಸಕರ ಭವನದವರೆಗೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಾಮೂಹಿಕ ಪ್ರತಿಭಟನೆ ನಡೆಸಿ ಶಾಸಕ ಹಂಪಯ್ಯ ನಾಯಕರವರಿಗೆ ಪ್ರತಿನಿಧಿಗಳ ಮೂಲಕ ಮನವಿ ಸಲ್ಲಿಸಿ ತಾ.ಅಧ್ಯಕ್ಷೆ ಕಾಂ. ಚನ್ನಮ್ಮ ಗುತ್ತೆದಾರ ಮಾತನಾಡಿ ರಾಜ್ಯದಲ್ಲಿ ರಾಜ್ಯ ಸರಕಾರವು ಶಿಕ್ಷಣ ಇಲಾಖೆಯ ಮೂಲಕ ೪ ವರ್ಷದೊಳಗಿನ ಮಕ್ಕಳಿಗೆ ಕೆ.ಕೆ.ಆರ್.ಡಿ.ಪಿ.ಯಡಿ ಶಿಕ್ಷಣವನ್ನು ನೀಡುವುದಕ್ಕೆ ರಾಜ್ಯ ಸರಕಾರ ನೇಮಿಸಿರುವ ರಾಜ್ಯ ಶಿಕ್ಷಣ ನೀತಿ ಅಯೋಗವು ವರದಿ ನೀಡುವ ಮುಂಚೆಯೇ ಹೊಸದಾಗಿ ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ. ಯನ್ನು ಪ್ರಾರಂಭಿಸಲು ಹೋರಾಟಿರುವುದರಿಂದ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಪರಿಣಾಮವಾಗಲಿದೆ. ಹಾಗೂ ೩ರಿಂದ ೬ ವರ್ಷದ ಮಕ್ಕಳು ಶಿಕ್ಷಣ ಇಲಾಖೆಯ ಶಾಲೆಗಳಿಗೆ ದಾಖಲಾದಲ್ಲಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಅದರಿಂದ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ. ಯು.ಕೆ.ಜಿ. ತರಗತಿಗಳನ್ನು  ಪ್ರಾರಂಭಿಸಬೇಕು. ಕೂಡಲೆ ಸರಕಾರ ಮಕ್ಕಳ ತಜ್ಞರು, ವೈದ್ಯರು,ಶಿಕ್ಷಣ ತಜ್ಞರು, ನಮ್ಮ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ವರದಿಯನ್ನು ಪಡೆದು ಕ್ರಮ ಕೈಗೊಳ್ಳಬೇಕು.ವರದಿ ಬರುವ ವರೆಗೂ ಶಿಕ್ಷಣ ಇಲಾಖೆಯು ಇ.ಸಿ.ಸಿ.ಡಿ ಯನ್ನು ಪ್ರಾರಂಭಿಸುವ ಹಾಗೆ ಸೂಚಿಸಬೇಕು ಹಾಗೂ ದೇಶದಲ್ಲಿ ಮಕ್ಕಳ ಸಂರಕ್ಷಣೆಗಾಗಿ ಇರುವ ಐ.ಸಿ.ಡಿ.ಸಿ.ಯೋಜನೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿದರು. 
ತಾ.ಗೌರವಾಧ್ಯಕ್ಷರಾದ ಕಾಂ.ಸಿದ್ರಾಮಯ್ಯಸ್ವಾಮಿ, ಜಿ.ಕಾರ್ಯದರ್ಶಿ ಕಾಂ.ಲಲಿತ ಸಾಲಿ, ಸಿರವಾರ ತಾ.ಅಧ್ಯಕ್ಷೆ ರಾಜೇಶ್ವರಿ, ಕಾಂ.ಸರಸ್ವತಿ, ಕಾಂ.ಕೃಷ್ಣವೇಣಿ, ಕಾಂ.ಸಣ್ಣಮ್ಮ, ಕಾಂ.ಸಣ್ಣಮ್ಮ, ಕಾಂ.ಮAಜುಳಾಪೋತ್ನಾಳ್, ಕಾಂ.ಯಲ್ಲಮ್ಮ ಜಾನೇಕಲ್, ಕಾಂ.ಪುಟ್ಟಮ್ಮ ಕಲ್ಲೂರು, ಕಾಂ.ರೇಣುಕಾ ಅರೋಲಿ, ಕಾಂ.ಭಾಗ್ಯಮ್ಮ ಕುರ್ಡಿ, ನಾಗಮ್ಮ , ಸರಸ್ವತಿ ಸೇರಿದಂತೆ ಇನ್ನಿತರರು ಇದ್ದರು
ಮಾನ್ವಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಎ.ಐ.ಟಿ.ಯು.ಸಿ ಸಂಯೋಜಿತ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
WhatsApp Group Join Now
Telegram Group Join Now
Share This Article
error: Content is protected !!