Ad image

371 (ಜೆ) ಅನುಷ್ಠಾನಕ್ಕೆ ತಾರತಮ್ಯ ವಿರೋಧಿಸಿ ಇಂದು ಪ್ರತಿಭಟನೆ,

Vijayanagara Vani
371 (ಜೆ) ಅನುಷ್ಠಾನಕ್ಕೆ ತಾರತಮ್ಯ ವಿರೋಧಿಸಿ ಇಂದು ಪ್ರತಿಭಟನೆ,
ಸಿಂಧನೂರು: ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ,ವಿವಿಧ ಹುದ್ದೆಗಳ ನೇಮಕಾತಿ ಮುಂಬಡ್ತಿಯಲ್ಲಿ ಸರ್ಕಾರದಿಂದ ಆಗುತ್ತಿರುವ ತಾರತಮ್ಯ ನೀತಿ ವಿರೋಧಿಸಿ ಜೂನ್ 11 ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಪಕ್ಷಾತೀತವಾಗಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ 371 (ಜೆ) ಹೋರಾಟ ಸಮಿತಿಯ ಸಂಚಾಲಕ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಖಾಸಗಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬೆಳಿಗ್ಗೆ ಪ್ರತಿಭಟನೆ ಮೆರವಣಿಗೆ ನಗರದ ಪ್ರವಾಸಿ ಮಂದಿರದಿಂದ ಸಾಗಿ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ನಂತರ ತಹಶೀಲ್ದಾರ್ ಕಛೇರಿಗೆ ಸಾಗಿ ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. 
ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ವಿದ್ಯಾರ್ಥಿಗಳು, ನ್ಯಾಯವಾದಿಗಳು, ಮಠಾಧೀಶರು, ಹಾಲಿ ಮಾಜಿ ಶಾಸಕರು,  ಜನಪ್ರತಿನಿಧಿಗಳು, ಪಾಲಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸೇರಿದಂತೆ ಪ್ರತಿಯೊಬ್ಬರೂ ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ನಮ್ಮ ಭಾಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಪ್ರತಿಭಟಿಸಿ ಹೋರಾಟದ ಕಾವು ಸರ್ಕಾರಕ್ಕೆ ಮುಟ್ಟುವಂತೆ ಸಹಕರಿಸಲು ಮನವಿ ಮಾಡಿದರು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ವೃಂದ ಮಿಕ್ಕುಳಿದ ವೃಂದ ಇರಬಾರದು  ರ್ಯಾಂಕ್ ಆಧರಿಸಿ ನೇಮಕಾತಿ ನೀಡಬೇಕು. ಹೀಗಿರುವ ತಾರತಮ್ಯ ತಿದ್ದುಪಡಿ ಮಾಡಬೇಕು. ಮಂಗಳವಾರ ನಡೆಯುವ ಪ್ರತಿಭಟನೆಗೆ ನಗರದ ವೈದ್ಯರು, ಇಂಜಿಯರ್, ಗುತ್ತಿಗೆದಾರರು, ರೈತ ಕಾರ್ಮಿಕರು, ಮಹಿಳೆಯರು, ಮತ್ತು ಅವರಿವರು ಎನ್ನದೇ ಪ್ರತಿಯೊಬ್ಬರೂ ಭಾಗವಹಿಸಿ ಎಂದರು.
ಮುಖಂಡರಾದ ಅಶೋಕಗೌಡ ಗದ್ರಟಗಿ, ಬಸವರಾಜ ನಾಡಗೌಡ, ಎಚ್.ಎನ್.ಬಡಿಗೇರ, ಎಂ.ದೊಡ್ಡಬಸವರಾಜ, ವೈ.ನರೇಂದ್ರನಾಥ, ನಿರುಪಾದೆಪ್ಪ ಜೋಳದರಾಶಿ, ಆರ್.ಸಿ.ಪಾಟೀಲ್ ನಾರಾಯಣಪ್ಪ ಬೆಳಗುರ್ಕಿ, ಮೌನೇಶ ಜಾಲವಾಡಗಿ, ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Share This Article
error: Content is protected !!
";