ಬಳ್ಳಾರಿ,ಜೂ.07 : ಜೆಲ್ಲೆಯಲ್ಲಿ ಮಳೆ ಜೋರಾಗಿ ಬಂದಿದ್ದರಿಂದ ಹಳ್ಳಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ಇತ್ತ ನಗರದ ಮಿಲ್ಲರ್ ಪೇಟೆ ವರಬಸಪ್ಪ ಗುಡಿ ರಾಜ ಕಾಲುವೆಗಳು, ಚರಂಡಿಗಳು ತುಂಬಿ ಉಕ್ಕೆ ಹರಿದು ಮನೆಗಳಿಗೆ ನುಗ್ಗಿ ಪರಿತಪಿಸುವಂತೆ ಮಾಡಿದೆ ಮತ್ತು ವಿವಿಧ ಭಾಗಗಳಲ್ಲಿ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ಜನರ ಅಸ್ತವ್ಯಸ್ತಗೊಂಡಿದೆ.
ವಿವಿಧ ಭಾಗಗಳಲ್ಲಿ ಮಳೆಯಿಂದ ಚರಂಡಿಗೆ ಮತ್ತು ರಾಜವಿ ಕಾಲುವೆಗಳಿಗೆ ನೀರು ತುಂಬಿ ರಸ್ತೆಗೆ ಹರಿಯುತ್ತಿದ್ದು ಮತ್ತು ವಿವಿಧ ಸಮಸ್ಯೆಗಳನ್ನು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ನಗರ ಶಾಸಕ ಆಪ್ತರು ಸ್ಥಳಕ್ಕೆ ಧಾವಿಸಿ ಸಮಸ್ಯೆಗೆ ಸ್ಪಂದಿಸುವಲ್ಲಿ ಮುಂದಾಗಿದ್ದಾರೆ