Ad image

ಬ್ಯಾಕ್ ಲಾಗ್ ಹುದ್ದೆ ಕೂಡಲೇ ಭರ್ತಿ ಮಾಡುವಂತೆ ಎಸ್ ಸಿ, ಎಸ್ ಟಿ ನಿರುದ್ಯೋಗಿಗಳಿಂದ ಮನವಿ

Vijayanagara Vani
ಬ್ಯಾಕ್ ಲಾಗ್ ಹುದ್ದೆ ಕೂಡಲೇ ಭರ್ತಿ ಮಾಡುವಂತೆ ಎಸ್ ಸಿ, ಎಸ್ ಟಿ ನಿರುದ್ಯೋಗಿಗಳಿಂದ ಮನವಿ

ಕಂಪ್ಲಿ: , ಕರ್ನಾಟಕ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಬಳ್ಳಾರಿ ಜಿಲ್ಲಾ ಎಸ್ ಸಿ ಎಸ್ ಟಿ ನಿರುದ್ಯೋಗಿಗಳ ಸಂಘದಿಂದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು!

- Advertisement -
Ad imageAd image

ಮನವಿ ಸಲ್ಲಿಸಿದ ನಂತರ ಮಾತನಾಡಿದ ಬಳ್ಳಾರಿ ಜಿಲ್ಲಾ ಎಸ್ ಸಿ ಎಸ್ ಟಿ ನಿರುದ್ಯೋಗಿಗಳ ಸಂಘದ ಜಿಲ್ಲಾಧ್ಯಕ್ಷರಾದ ಬಾಪಯ್ಯನವರ ವೆಂಕಟೇಶ್ ರವರು ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬದೇ ಇರುವುದರಿಂದ ದಲಿತ ಸಮುದಾಯದ ಅಭ್ಯರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದು ನಿಗದಿತ ವಯಸ್ಸು ಮೀರುತ್ತಿರುವ ಆತಂಕದಲ್ಲಿದ್ದು ಸರ್ಕಾರ ಕೂಡಲೇ ನಾನಾ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದರು,

ಮನವಿ ಸ್ವೀಕರಿಸಿದ ಕೆ ಎಸ್ ಪಿ ಸಿ ಎ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ತಮ್ಮ ಮನವಿ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಸುಗಾಲಿ ವೆಂಕಟೇಶ್ ನಾಯ್ಕ, ಎಸ್. ಗಿರಿಮಲ್ಲಪ್ಪ, ತಿಮ್ಮಯ್ಯ, ಬಿ ಮಂಜುನಾಥ್, ಪಿಟಿ ವೀರಮಲ್ಲಪ್ಪ, ಎನ್ ದೇವಣ್ಣ, ಕೆ. ತಿಪ್ಪಣ್ಣ, ಸಿ, ಲಿಂಗಪ್ಪ, ರಾಮಂಜಿನಿ,ರಾಮಚಂದ್ರ ಛಲವಾದಿ ಉಪಸ್ಥಿತಿಯಲ್ಲಿದ್ದರು

Share This Article
error: Content is protected !!
";