ನರೇಗಾ ಕಾರ್ಮಿಕರ ಬೇಡಿಕೆಗಳನ್ನು ಈಡೆರಿಸಬೇಕೆಂದು ಮನವಿ

Vijayanagara Vani
ನರೇಗಾ ಕಾರ್ಮಿಕರ ಬೇಡಿಕೆಗಳನ್ನು ಈಡೆರಿಸಬೇಕೆಂದು ಮನವಿ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಬುದುವಾರ ಕಾರ್ಮಿಕರ ದಿನಾಚರಣೆಯೆಂದು ಮನವಿ ಸಲ್ಲಿಸುವ ಮೂಲಕ ಕಾರ್ಮಿಕರ ದಿನಾಚರಣೆಯನ್ನು ಅಚರಿಸಲಾಯಿತು.

ಈ ಮೇಲ್ಕಾಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಜಯನಗರಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಾರ್ಮಿಕರಾದ ನಾವುಗಳು ತಮ್ಮಲ್ಲಿ ವಿನಂತಿಸಿ ಕೊಳ್ಳುವುದೆಂದರೆ ಮೇ ೦೧-೨೦೨೪ರಂದು ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ಸಂಬAಧಿಸಿ ಪ್ರಮುಖ ಬೇಡಿಕೆಗಳನ್ನು ಈಡಿರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತೇವೆ ಎಂದರು.

ಪ್ರಮುಖ ಬೇಡಿಕೆಗಳು ;-

ನರೇಗಾದಡಿಯಲ್ಲಿ ಕೆಲಸ ಮಾಡಿದ ಬಾಕಿ ಕೂಲಿ ಹಣವನ್ನುಕೂಡಲೇ ಬಿಡುಗಡೆ ಮಾಡಬೇಕು.ಹೈದ್ರಾಬಾದ್ ಕರ್ನಾಟಕ ಪ್ರದೇಶವು ಬಿಸಿಲಿನ ಪ್ರಮಾಣ ಹೆಚ್ಚಿದ್ದು, ನರೆಗಾ ಎರಡು ಹಂತದ ಎನ್.ಎಮ್.ಎಮ್.ಎಸ್ ಹಾಜರಾತಿ ಕಡ್ಡಾಯ ಮಾಡಿದ್ದು ಒಂದೆ ಹಂತ ಮಾಡಬೇಕು.ರಾಜ್ಯದಲ್ಲಿ ಈಗಾಗಲೇ ಎಪ್ರೀಲ್ ತಿಂಗಳಲ್ಲಿ ನರೆಗಾ ಕೆಲಸ ಮಾಡುವಾಗ ಎರಡು ಜನಸಾವನಪ್ಪಿದ್ದು, ಸರಕಾರ ಕೊಡುವ ಎರಡು ಲಕ್ಷ ಸಾಲುತ್ತಿಲ್ಲ ಅದನ್ನು ಐದು ಲಕ್ಷಕ್ಕೆ ಹೆಚ್ಚಿಸಬೇಕು.

ಎನ್.ಎಮ್.ಎಮ್.ಎಸ್ ತಂತ್ರಾAಶದಲ್ಲಿ ಒಮ್ಮೆ ಹಾಜರಾತಿ ಹಾಕಿದರೆ ಡಿಲೀಟ್ ಮಾಡಲು ಅವಕಾಶವಿಲ್ಲ, ಡಿಲೀಟ್ ಆಪ್ಸನ್ ಕೊಡಬೇಕುನರೆಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರ ಕಾರ್ಡ ಕೊಡಬೇಕು.ಈ ಎಲ್ಲಾ ಹಕ್ಕೋತ್ತಾಯವನ್ನು ಕರ್ನಾಟಕದ ನರೇಗಾ ಕಾರ್ಮಿಕರಾದ ನಾವು ಒಕ್ಕೋರಲಿನಿಂದ ಒಂದೆ ಧ್ವನಿಯಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದರು.

ಈ ವೇಳೆ ಗ್ರಾಮೀಣ ಕೂಲಿ ಕಾರ್ಮಿಕರ ತಾಲೂಕು ಸಂಚಾಲಕಿ ತೋಗರಿಕಟ್ಟಿ ಭಾಗ್ಯಮ್ಮ, ಕೆ.ಬೀಮಪ್ಪ, ಜಿ.ಮಂಗಳಾ, ಎಸ್.ರೇಖಾ, ಜಿ.ನಿಜಲಿಂಗಪ್ಪ, ಟಿ.ರಾಜಪ್ಪ, ನಿಂಗಪ್ಪ,ಟಿ.ರಾಮರೆಡ್ಡಿ, ಮಂಜಪ್ಪ, ಟಿ.ನಾಗರಾಜ, ಹೆಚ್.ಕೆಂಚಮ್ಮ, ಟಿ.ಲಲಿತಾ, ಟಿ.ಮಲ್ಲಮ್ಮ ರೆಡ್ಡಿ, ಎ.ರವಿ, ಜಿ.ಹನುಮಂತಪ್ಪ, ಎ.ಪ್ರಕಾಶ್, ಜ್ಯೋತಿ, ಬಿ.ಗಣೇಶ್, ಹೊನ್ನಮ್ಮ, ವೈ.ಸವಿತಾ, ಸುನೀತಾ ಸೇರಿದಂತೆ ಆನೇಕರು ಬಾಗವಹಿಸಿದ್ದರು.೦೧,ಹೆಚ್.ಆರ್.ಪಿ.ಪೋಟೋ,೦೩- ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆಯೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸುವ ಮೂಲಕ ಕಾರ್ಮಿಕರ ದಿನಾಚರಣೆಯನ್ನು ಅಚರಿಸಲಾಯಿತು.

 

 

 

WhatsApp Group Join Now
Telegram Group Join Now
Share This Article
error: Content is protected !!