ಹರಪನಹಳ್ಳಿ ;- ಪಟ್ಟಣದ ಟಿಎಂಎಇ ಸಂಸ್ಥೆಯ ಪ್ರೌಡಶಾಲೆಯಲ್ಲಿ ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿ ಕುಸುಮ ಜಗದೀಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದು, ಅದರಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ನಿಮಿತ್ಯ ಮಕ್ಕಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾö್ಯಘನೀಯ ಕೆಲಸವಾಗಿದೆ. ತಂಬಾಕು ಸೇವನೆಯಿಂದಾಗಿ ನಮ್ಮ ಶರೀರ ಹಾಗೂ ಜೀವನವೇ ನಾಶವಾಗುವ ಸಂದರ್ಭ ಬರುತ್ತದೆ, ಆ ದುಶ್ಚಟಗಳಿಂದ ದೂರವಿದ್ದು, ನಾವು ಉತ್ತಮ ಪರಿಸರದಲ್ಲಿ ಬೆಳೆಯಬೇಕಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಾಬು ಮಾತನಾಡಿ, ವಿದ್ಯಾರ್ಥಿಗಳು ತಂಬಾಕು ಸೇವನೆಯಿಂದ ಇರಲು ಮತ್ತು ತಮ್ಮ ಪಾಲಕರನ್ನು ತಂಬಾಕು ಸೇವನೆಯಿಂದ ದೂರವಿರಿಸಲು ತಮ್ಮ ಮನೆ ಮತ್ತು ಸುತ್ತಮುತ್ತಲೂ ಜಾಗೃತಿ ವಹಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಯೋಜಕಿ ಅರ್ಪಿತ, ಪಕೀರಮ್ಮ, ದೀಪಿಕಾ, ಶಿಕ್ಷಕರಾದ ಕವಿತಾ, ದಯಾನಂದ ಹಾಗೂ ಮಕ್ಕಳು ಭಾಗವಹಿಸಿದ್ದರು.