ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರ ಪರಿಷ್ಕೃತ ಪ್ರವಾಸ ಕಾರ್ಯಕ್ರಮ

Vijayanagara Vani
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರ ಪರಿಷ್ಕೃತ ಪ್ರವಾಸ ಕಾರ್ಯಕ್ರಮ
ಬಳ್ಳಾರಿ,ಆ.12
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಆ.15, 16 ಮತ್ತು 17 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
ಆ.15 ರಂದು ಬೆಳಿಗ್ಗೆ 11.30 ಗಂಟೆಗೆ ಹೊಸಪೇಟೆಯಿಂದ ಹೊರಟು, ಮಧ್ಯಾಹ್ನ 02 ಗಂಟೆಯಿ0ದ ಸಂಜೆ 05.30 ಗಂಟೆಯವರೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರು ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ನಂತರ ಬಳ್ಳಾರಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡುವರು.
ಆ.16 ರಂದು ಕಾಯ್ದಿರಿಸಲಾಗಿದೆ.
ಆ.17 ರಂದು ಬೆಳಿಗ್ಗೆ 09 ಗಂಟೆಗೆ ರಾಯಲ್ ಫೋರ್ಟ್ ಹೋಟೆಲ್‌ನಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸುವರು.
ನಂತರ ಬೆಳಿಗ್ಗೆ 10.30 ಗಂಟೆಯಿ0ದ ಮಧ್ಯಾಹ್ನ 01.30 ಗಂಟೆಯವರೆಗೆ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಸಭಾ ಭವನದಲ್ಲಿ ಏರ್ಪಡಿಸಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನಂತರ ಮಧ್ಯಾಹ್ನ 03 ಗಂಟೆಯಿ0ದ ಸಂಜೆ 06 ಗಂಟೆಯವರೆಗೆ ಜಿಲ್ಲಾ ಪಂಚಾಯತ್‌ನ ನಜೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲೆಯ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.
ಸಂಜೆ 06 ಗಂಟೆಗೆ ಬಳ್ಳಾರಿಯಿಂದ ಕೇಂದ್ರಸ್ಥಾನ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!