Ad image

ರಿಮ್ಸ್ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ; ಅತ್ಯುತ್ತಮ ಸಾಧನೆ ಆಡಳಿತ ವರ್ಗದಿಂದ ಹರ್ಷ

Vijayanagara Vani
ರಿಮ್ಸ್ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ; ಅತ್ಯುತ್ತಮ ಸಾಧನೆ ಆಡಳಿತ ವರ್ಗದಿಂದ ಹರ್ಷ

ರಾಯಚೂರು,ಆ.29 ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಜೂನ್ ತಿಂಗಳಲ್ಲಿ ಜರುಗಿದ ಬಿ.ಎಸ್.ಸಿ ನರ್ಸಿಂಗ್ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ರಿಮ್ಸ್ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು, ಈ ಸಾಧನೆಗೆ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

- Advertisement -
Ad imageAd image

ಪರೀಕ್ಷೆಗೆ ಹಾಜರಾದ ಒಟ್ಟು 59ವಿದ್ಯಾರ್ಥಿಗಳಲ್ಲಿ 58ವಿದ್ಯಾರ್ಥಿಗಳು 98 ಪ್ರತಿಶತದೊಂದಿಗೆ ತೇರ್ಗಡೆಯಾಗಿದ್ದಾರೆ.

ಕಾಲೇಜಿಗೆ ಕುಮಾರಿ ರಾಧಿಕ (300 ಕ್ಕೆ 241 ಅಂಕ) ಪ್ರಥಮ ಸ್ಥಾನ, ಕುಮಾರಿ ನಾಝಿಯಾ ಕೌಸರ್ (300 ಕ್ಕೆ 239 ಅಂಕ) ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕುಮಾರಿ ಸಂಗೀತ (300 ಕ್ಕೆ 236 ಅಂಕ) ಮತ್ತು ಕುಮಾರಿ ಸ್ವಾತಿ. ಕೆ (300 ಕ್ಕೆ 236 ಅಂಕ) ತೃತೀಯ ಸ್ಥಾನ ಹಂಚಿಕೊ0ಡಿದ್ದಾರೆ.

59 ವಿದ್ಯಾರ್ಥಿಗಳಲ್ಲಿ, ಶ್ರೇಷ್ಠ ಶ್ರೇಣಿ 1, ಅತ್ಯುತ್ತಮ ಶ್ರೇಣಿ 11, ಉತ್ತಮ ಶ್ರೇಣಿ 33, ಸರಾಸರಿ ಶ್ರೇಣಿ 10, ಕೆಳ ಸರಾಸರಿ ಶ್ರೇಣಿ 03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ರಿಮ್ಸ್ ನಿರ್ದೇಶಕರಾದ ಡಾ.ಬಿ.ಎಚ್.ರಮೇಶ್, ಪ್ರಾಂಶುಪಾಲರು ಡಾ.ಬಸವರಾಜ ಎಂ.ಪಾಟೀಲ್, ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಕೆ.ಆರ್.ದುರುಗೇಶ್, ಆರ್ಥಿಕ ಸಲಹೆಗಾರರಾದ ಹನುಮೇಶ ನಾಯಕ, ವೈದ್ಯಕೀಯ ಅಧೀಕ್ಷಕರಾದ ಡಾ.ಭಾಸ್ಕರ ಕೆಂಪೇಗೌಡ, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ವಿಜಯ ಶಂಕರ, ಒಪೆಕ್ ವಿಶೇಷಾಧಿಕಾರಿ ಡಾ.ನಾಗರಾಜ ಗದ್ವಾಲ್, ಸಂಘವಿ ಲಯೆಸನ್ ಅಧಿಕಾರಿ ಡಾ.ಅರವಿಂದ, ಸ್ಥಾನಿಕ ವೈದ್ಯಧಿಕಾರಿ ಡಾ.ಶಾಮಣ್ಣ ಮಾಚನೂರ, ಶುಶ್ರೂಶಕ ಅಧೀಕ್ಷಕರರಾದ ಸುಲೋಚನಾ ಎನ್, ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಶ್ರೀಶೈಲ್ ಶಂಕರಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀನಿವಾಸ ಎಮ್, ಶೈಕ್ಷಣಿಕ ಸಂಯೋಜಕ ಧರಮ್ ಸಿಂಗ್, ತರಗತಿ ಶಿಕ್ಷಕ ಸಿದ್ರಾಮಪ್ಪ ಸಜ್ಜನ್, ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಹಾಸ್ಟೆಲ್ ಸಿಬ್ಬಂದಿಗಳು, ಶುಶ್ರೂಷಕರ ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

Share This Article
error: Content is protected !!
";