ಬಳ್ಳಾರಿ ನಗರದ ಕನಕದುರ್ಗಮ್ಮ ದೇವಸ್ಥಾನ ಹತ್ತಿರದ ಕೆಳಸೇತುವೆಯ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳುತ್ತಿದ್ದು, ಸಾರ್ವಜನಿಕ ಸಂಚಾರ ಸುರಕ್ಷತೆ ಹಿತದೃಷ್ಟಿಯಿಂದ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಬೇರೆ ರಸ್ತೆಗಳ ಮೂಲಕ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ.ವಿ.ಜೆ ಅವರು ತಿಳಿಸಿದ್ದಾರೆ.
2023-2024 ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಯೋಜನೆಯಡಿ ಕನಕದುರ್ಗಮ್ಮ ದೇವಸ್ಥಾನ ಹತ್ತಿರದ ಕೆಳಸೇತುವೆಯ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳುತ್ತಿದೆ.
*ವಾಹನಗಳ ಸಂಚಾರ ಮಾರ್ಗ ಬದಲಾವಣೆ ವಿವರ:*
ಗಡಿಗಿ ಚೆನ್ನಪ್ಪ ವೃತ್ತದಿಂದ ದುರ್ಗಮ್ಮ ದೇವಸ್ಥಾನ ಕಡೆಗೆ ಹೋಗುವ ಲಘು ಮೋಟಾರು ವಾಹನಗಳು ಯು.ಬಿ.ಸರ್ಕಲ್, ಹಳೇಕೋರ್ಟ್ ರಸ್ತೆ, ಎಸ್.ಎನ್.ಪೇಟೆ (ಕೂಲ್ ಕಾರ್ನರ್) ವೃತ್ತ, ಎಸ್.ಎನ್.ಪೇಟೆ ಮೇಲ್ಸೇತುವೆಯ ಹಾಗೂ ಕೆಳಸೇತುವೆ, ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜು ರಸ್ತೆ ಅಥವಾ ಗಾಂಧಿನಗರ ಮಾರ್ಕೆಟ್ ರಸ್ತೆಯ ಮೂಲಕ ಸಂಚರಿಸಬಹುದು.
ಹೆಚ್.ಆರ್.ಗವಿಯಪ್ಪ ವೃತ್ತ (ಮೋತಿ) ದಿಂದ ದುರ್ಗಮ್ಮ ದೇವಸ್ಥಾನ ಮುಖಾಂತರ ಸಿರುಗುಪ್ಪ ಕಡೆಗೆ ಹೋಗುವ ಎಲ್ಲಾ ವಿಧದ ಮೋಟಾರು ವಾಹನಗಳು ಅಂಬೇಡ್ಕರ್ ಸರ್ಕಲ್, ಎಸ್.ಪಿ.ಸರ್ಕಲ್ ರಸ್ತೆಯ ಮುಖಾಂತರ ಸಂಚರಿಸಬಹುದು.
ಸಿರುಗುಪ್ಪ ರಸ್ತೆ ಮತ್ತು ಎಸ್.ಪಿ.ಸರ್ಕಲ್ ಹಾಗೂ ಕಪ್ಪಗಲ್ ರಸ್ತೆ, ತಾಳೂರು ರಸ್ತೆ ಕಡೆಯಿಂದ ಹಳೇ ಬಸ್ ನಿಲ್ದಾಣ, ರಾಯಲ್ ಸರ್ಕಲ್ ಕಡೆಗೆ ಹೋಗುವ ಲಘು ಮೋಟಾರು ವಾಹನಗಳು ದುರ್ಗಮ್ಮ ಸರ್ಕಲ್, ಮೋಕಾ ರಸ್ತೆ, ಗಾಂಧಿನಗರ ಮಾರ್ಕೆಟ್, ಬಸವೇಶ್ವರ ತರಕಾರಿ ಮಾರುಕಟ್ಟೆ ಸರ್ಕಲ್ ಮುಖಾಂತರ ಸಂಚರಿಸಬಹುದು.
ಮೋಕಾ ರಸ್ತೆ ಕಡೆಯಿಂದ ಗಡಿಗಿ ಚೆನ್ನಪ್ಪ ವೃತ್ತದ (ರಾಯಲ್ ಸರ್ಕಲ್) ಕಡೆ ಬರುವ ಎಲ್ಲಾ ವಾಹನಗಳು ಎಸ್.ಎನ್.ಪೇಟೆ ಮೇಲ್ಸೇತುವೆ, ಇಂದಿರಾ (ಸಂಗಮ್) ಸರ್ಕಲ್ ಮುಖಾಂತರ ಸಂಚರಿಸಬಹುದು.
ಸಿರುಗುಪ್ಪ ರಸ್ತೆ ಕಡೆಯಿಂದ ಹಳೇ ಬಸ್ನಿಲ್ದಾಣ ಕಡೆ ಬರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳು ಹಾಗೂ ಇತರೆ ಭಾರಿ ವಾಹನಗಳು ಎಸ್.ಪಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಮೋತಿ ಸರ್ಕಲ್ ಮುಖಾಂತರ ಹಾಗೂ ಹಳೇ ಬಸ್ ನಿಲ್ದಾಣದಿಂದ ಸಿರುಗುಪ್ಪ ಕಡೆಗೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳು ಮೋತಿ ಸರ್ಕಲ್, ಎಸ್.ಪಿ.ಸರ್ಕಲ್ ಮುಖಾಂತರ ಸಂಚರಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.