Ad image

ನಗರದಲ್ಲಿ ಪೋಲಿಸ್ ಅಧಿಕಾರಿಗಳಿಂದ ನಗರದ ಪ್ರಮೂಖ ರಸ್ತೆಯಲ್ಲಿ ಪಥ ಸಂಚಲನ

Vijayanagara Vani
ನಗರದಲ್ಲಿ ಪೋಲಿಸ್ ಅಧಿಕಾರಿಗಳಿಂದ ನಗರದ ಪ್ರಮೂಖ ರಸ್ತೆಯಲ್ಲಿ ಪಥ ಸಂಚಲನ

ಸಿರುಗುಪ್ಪ:ಸೆಪ್ಟಂಬರ್. 15 ರಂದು ಮುಸ್ಲಿಂ ಬಾಂಧವರು ಆಚರಿಸುವ ಈದ್ ಮಿಲಾದ್ ಹಬ್ಬ ಹಾಗೂ ವಿಹೆಚ್‌ಪಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭ ರಾಣಿ ತಿಳಿಸಿದರು.
ನಗರದಲ್ಲಿ ಪಥ ಸಂಚಲನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆಪ್ಟೆಂಬರ್ 16ರಂದು ನಡೆಯುವ ಈದ್ ಮಿಲಾದ್, 17ರಂದು ನಡೆಯಲಿರುವ ಹಿಂದೂ ಮಹಾಸಭಾ ಗಣಪತಿಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದ್ದು.ವಿಹೆಚ್‌ಪಿ ಸಂಘಟನೆಯವರು ವಿಸರ್ಜನೆಗಾಗಿ ಗಣೇಶ ಮೂರ್ತಿಯನ್ನು ನಿಟ್ಟೂರು ನರಸಿಂಹ ಮೂರ್ತಿಯವರ ಬಯಲು ಜಾಗದಿಂದ ಬಳ್ಳಾರಿ ಸಿಂಧನೂರು ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಾಗಿ, ದೇಶನೂರು ರಸ್ತೆಯ ಸೌದಾಗಾರ ಮಸೀದಿಯ ಮುಂದುಗಡೆಯಿಂದ ಹಾದು ಹೋಗಿ ತುಂಗಾಭದ್ರಾ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಈದ್ ಮಿಲಾದ್ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆಗೆ ಭದ್ರತೆ ಒದಗಿಸಲು ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 02 ಜನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 05 ಜನ ಡಿವೈಎಸ್‌ಪಿ, 14 ಜನ ಸಿಪಿಐ/ಪಿಐ, 33 ಪಿಎಸ್‌ಐ, 45 ಎಎಸ್‌ಐ, 404 ಜನ ಸಿಬ್ಬಂದಿ ಹಾಗೂ 295 ಜನ ಗೃಹ ರಕ್ಷಕ ದಳ ಸಿಬ್ಬಂದಿ, ಒಟ್ಟಾರೆಯಾಗಿ 798 ಜನ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಮತ್ತು ಕ್ಯೂಆರ್‌ಟಿ, 02ಡ್ರೋಣ್, 1 ಐ ಆರ್.ಬಿ, 4 ಕೆಎಸ್ಆರ್‌ಪಿ, 05 ಡಿಎಆರ್ ವ್ಯಾನ್ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಒದಗಿಸಲಾಗುತ್ತದೆ ಎಂದುಹೆಳಿದರು.

Share This Article
error: Content is protected !!
";