Ad image

5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

Vijayanagara Vani
5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ
oplus_0

ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಪೂರೈಸಿದರೆ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ಕ್ಷೇತ್ರವು ಸಂಪೂರ್ಣ ಹಳ್ಳಿಗಳಿಂದ ಕೂಡಿದ್ದು ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ರಸ್ತೆ ಸುಧಾರಣೆ ಮೂಲ ಸೌಕರ್ಯ ಒದಗಿಸುವುದು   ಅತ್ಯಂತ ಅವಶ್ಯಕವಾಗಿರುವದರಿಂದ  ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದು  ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

- Advertisement -
Ad imageAd image

ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ ಗ್ರಾಮದಿಂದ ಮಲ್ಕಾಪುರ ಗ್ರಾಮದವರೆಗಿನ ಸುಮಾರು ೫ ಕೋಟಿ ರೂ, ವೆಚ್ಚದ  ರಸ್ತೆ  ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರಸ್ತೆ, ಕುಡಿಯುವ ನೀರು, ನೀರಾವರಿ, ಶಾಲೆ ಕಟ್ಟಡ, ಸಮುದಾಯ ಭವನ, ಯಾತ್ರಿ ನಿವಾಸ, ಸೇತುವೆ ಹೀಗೆ ಅನೇಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರದ ಜನತೆಗಾಗಿ ಇರುವ ಯೋಜನೆಗಳನ್ನು ಜನರಿಗೆ ತಲುಪುವಂತೆ ಮಾಡುವುದು ನನ್ನ ಕರ್ತವ್ಯ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಪಾರ ಕಾಳಜಿ ನನಗಿದೆ ಎಂದರು.

ಕಾಮಗಾರಿಯಲ್ಲಿ ಲೋಪ ಕಾಣಬಾರದು. ಉತ್ತಮ ರೀತಿಯಲ್ಲಿ, ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರು ಮುಂದಾಗಬೇಕು. ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದ ಸ್ವಚ್ಛತೆ ಇಲ್ಲದಿದ್ದರೆ. ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ ಹೀಗಾಗಿ  ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯವನ್ನು ಬದಿಗೊತ್ತಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. .

ಮುಖಂಡರಾದ ಮಾಜಿ ಜಿಪಂ ಸದಸ್ಯ ಬಾಬುರಾವ ಮಲ್ಕಾಪುರ, ಸುರೇಶ ಮಾಶೆಟ್ಟಿ,   ಕುಶಲರಾವ ಶರಣಪ್ಪನೋರ,  ಚಂದ್ರಯ್ಯಾ ಸ್ವಾಮಿ, ಗುರುನಾಥ ಬಗದಲ್, ಓಂಕಾರ ಮಜಗೆ, ಜೋಸೇಫ ಕೊಡ್ಡೆಕರ್,  ಶಿವಕುಮಾರ ನಾಗಲಗಿದ್ದಿ,  ರಾಹುಲ ಮೋರೆ, ಶಿವು ಸುಲ್ತಾನಪುರ,  ಸಂಗಮೇಶ ಹಳ್ಳಿ, ಬಾಬುರಾವ ನಾಗಲಗಿದ್ದಿ, ಶಾಮಣ್ಣಾ, ಲೋಕೇಶ ಜೈನಾಪುರೆ, ಭದ್ರು ಸ್ವಾಮಿ ರಾಜಕುಮಾರ ಕೋಳಿ, ತುಕಾರಮಾ ಕಲಾಲ, ಆಕಾಶ ಕೋಟೆ, ಮಾರ್ಟಿನ್, ಸಂಜುಕುಮಾರ, ವಿಜಯಕುಮಾರ ಗುಮ್ಮಾ, ತುಕಾರಾಮ, ಧನರಾಜ ಭಾಲ್ಕಿ , ರಾಜಕುಮಾರ ರೆಡ್ಡಿ  ಮತ್ತಿತರರು ಉಪಸ್ಥಿತರಿದ್ದರು.

Share This Article
error: Content is protected !!
";