Ad image

ರೋಟರಿ ಯಿಂದ ಮೂರು ವೈದ್ಯರಿಗೆ ವೈದ್ಯ ದಿನಾಚರಣೆ ಅಂಗವಾಗಿ ಸನ್ಮಾನ.

Vijayanagara Vani
ರೋಟರಿ ಯಿಂದ ಮೂರು ವೈದ್ಯರಿಗೆ ವೈದ್ಯ ದಿನಾಚರಣೆ ಅಂಗವಾಗಿ ಸನ್ಮಾನ.
ಗಂಗಾವತಿ: ವೈದ್ಯರು ಕೇವಲ ರೋಗಗಳನ್ನು ಗುಣಪಡಿಸದೇ ರೋಗಿಗಳಲ್ಲಿ ಭರವಸೆಯ ಕಿರಣವನ್ನು ತುಂಬುವ ಕಾರ್ಯ ಮಾಡಬೇಕಿದೆ ಎಂದು ನಗರದ ದಂತ ವೈದ್ಯರು ಸಮಾಜ ಸೇವಾ ಕಾರ್ಯಕರ್ತರಾದ ಡಾ.ಶಿವಕುಮಾರ ಮಾಲೀಪಾಟೀಲ ರವರು ಇಂದು ನಗರದ ಜಯನಗರದಲ್ಲಿರುವ ರೋಟರಿ ಕಾರ್ಯಾಲಯದಲ್ಲಿ ವೈಧ್ಯ ದಿನಾಚರಣೆ ಅಂಗವಾಗಿ ಸನ್ಮಾನ ಸ್ವೀಕರಿಸಿ ನಗರದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ರೋಟರಿ ಸಂಸ್ಥೆ ವಿಶ್ವದಲ್ಲಿಯೇ ಅತ್ಯಂತ ಉತ್ತಮ ಸಮಾಜ ಸೇವಾ ಸಂಸ್ಥೆಯಾಗಿದೆ. ನಗರದಲ್ಲಿ 25 ವರ್ಷಗಳಿಂದ ಗಂಗಾವತಿ ರೋಟರಿ ಸಂಸ್ಥೆ ಉತ್ತಮ ಸೇವಾ ಕಾರ್ಯಗಳನ್ನು ಮಾಡಿ ಪ್ರಶಂಸೆ ಪಡೆದಿದೆ. ಇನ್ನು ಮುಂದೆ ನಗರ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶುಭ ಕೋರಿದರು.ಮತ್ತೊರ್ವ ವೈದ್ಯರಾದ ಡಾ.ಪ್ರವೀಣ ಕುಮಾರ ಹಿರೇಮಠ ರವರ ಸನ್ಮಾನ ಸ್ವೀಕರಿಸಿ ರೋಟರಿ ಸಂಸ್ಥೆ ಪಲ್ಸ್ ಪೋಲಿಯೋ ಲಸಿಖಾಕರಣ ಹಾಗೂ ಕೋವಿಡ್ ಸಂದರ್ಭದಲ್ಲಿ ಜಾಗೃತಿ ಅಭಿಯಾನ ಹೀಗೆ ಹಲವಾರು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಸಲ್ಲಿಸಿದ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ* *ರೋಟರಿ ಸಂಸ್ಥೆ ಸಹಕಾರದೊಂದಿಗೆ ಹಲವಾರು ವೈದ್ಯ ಶಿಬಿರಗಳನ್ನು ಸಾಮಾನ್ಯ ಜನರಿಗೆ ಉಪಯುಕ್ತ ಕಾರ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.ಇನ್ನೋರ್ವ ಸನ್ಮಾನಿತ ವೈದ್ಯರಾದ ಡಾ. ಶಾಹಿನ್  ಸುರಪುರ ರವರು ರೋಟರಿ ಸಂಸ್ಥೆ ಹಲವಾರು ಸೇವಾ ಕಾರ್ಯಗಳಾದ ಪ್ರತೀಭಾ ಪುರಸ್ಕಾರ, ಆರೋಗ್ಯ. ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಗಳನ್ನು ಸಲ್ಲಿಸಿದೆ.ಇಂದು ಸಮಾಜ ಸೇವೆ ಗಳು ಜೊತೆಗೆ ವೈದ್ಯರಿಗೆ ಸನ್ಮಾನ ಮಾಡುತ್ತಿರುವುದು ಸಂತಸ ತಂದಿದೆ ಮತ್ತು ನಮ್ಮ ಸೇವಾ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷರಾದ ಟಿ.ಆಂಜನೇಯ ರವರು.ಕೋವಿಡ್ 19 ಸಮಯದಲ್ಲಿ ಇಡೀ ವ್ಯವಸ್ಥೆಯನ್ನು ಪರೀಕ್ಷೆಗೆ* *ಒಳಪಡಿಸಿದ ವೈದ್ಯಕೀಯ ಸಮುದಾಯದ ಸೇವೆಯನ್ನು ಶ್ಲಾಘಿಸಿದರು. ಕೋವಿಡ್ 19 ಸಮಯದಲ್ಲಿ ವೈದ್ಯರು ಹಗಲಿರಳು ಕೆಲಸ ಮಾಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ನಮ್ಮ ವೈದ್ಯಕೀಯ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದದ್ದು. ರೋಗಿಗಳಿಗೆ ಔಷಧೋಪಚಾರದ ಜೊತೆ ಧೈರ್ಯ ತುಂಬಿ ಅವರನ್ನು ಉತ್ತಮ ಆರೋಗ್ಯವಂತರಾಗಿ ಮಾಡಿರುವುದು ತುಂಬಾ ಸಂತೋಷದ ಸಂಗತಿ ಎಂದು ವೈದ್ಯರನ್ನು ಮತ್ತು ವೃತ್ತಿಯನ್ನು  ಶ್ಲಾಘಿಸಿದರು.ಜನಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಶ್ರಮವನ್ನು ಹಾಗೂ ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ವರ್ಷದ ಒಂದು ದಿನವಾದರೂ ಜನತೆಗೆ ನಾವು ತಿಳಿಬಯಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.ಕಾರ್ಯದರ್ಶಿಗಳಾದ ವಾಸು ಕೊಳಗದರವರು ನಮ್ಮ ರೋಟರಿ ಗಂಗಾವತಿ ನಗರದಲ್ಲಿ 25 ವರ್ಷಗಳ ರಜತ ಮಹೋತ್ಸವ ವರ್ಷಾಚರಣೆ ಯಲ್ಲಿದೆ.ಈ ಸಂಧರ್ಭದಲ್ಲಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವಾ ಮನೋಭಾವ ಹೊಂದಿರುವ ಆಯ್ದ ಕೆಲವು ವೈದ್ಯರನ್ನು ನಾವು ಸನ್ಮಾನಿಸಿ ಗೌರವಿಸುತ್ತೇವೆ ಎಂದು ತಿಳಿಸಿದರು.ಕಾರ್ಯಕ್ರಮ ಪ್ರಾರಂಭದಲ್ಲಿ ಹಿರಿಯ ಸದಸ್ಯರಾದ ಅಜಿತ್ ರಾಜ ಸುರಾನ ಪ್ರಾರ್ಥನೆ ಮಾಡಿದರು.ಮಾಜಿ ಅಧ್ಯಕ್ಷರಾದ ದೊಡ್ಡಯ್ಯ ಜನಾದ್ರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮಾಜಿ ಅಧ್ಯಕ್ಷರಾದ ಶ್ರೀಧರ್ ನಾಯಕ ಅತಿಥಿಗಳ ಪರಿಚಯ ಮಾಡಿದರು.ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳಾದ ಡಾ. ವೀರನಗೌಡ,ಪ್ರಕಾಶ್ ಚೋಪ್ರ ಉಗಮ ರಾಜ, ಸಲಾಹುದ್ದೀನ್ ಸುರಪುರ,ಸುರೇಶ್ ಬಂಬ, ದಿಲೀಪ್ ಮೋತ, ಮಂಜುನಾಥ, ನಾಗೇಶ್ವರರಾವ್, ಸುರೇಶ್ ಸೋಳಂಕಿ, ಅರಿಕೇರಿ ವೀರೇಶ, ಛತ್ರಮಾ, ಮನೋಹರ್ ಸಿಂಗ್, ಪ್ರಹ್ಲಾದ್ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು

Share This Article
error: Content is protected !!
";