Ad image

ಬಳ್ಳಾರಿಯಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆ ಸುರಕ್ಷಿತ, ಜವಾಬ್ದಾರಿಯುತ ಇಂಟರ್ನೆಟ್ ಬಳಕೆ ಆದ್ಯತೆಯಾಗಬೇಕು: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

Vijayanagara Vani
ಬಳ್ಳಾರಿಯಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆ ಸುರಕ್ಷಿತ, ಜವಾಬ್ದಾರಿಯುತ ಇಂಟರ್ನೆಟ್ ಬಳಕೆ ಆದ್ಯತೆಯಾಗಬೇಕು: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ಫೆ.11
ವಿವಿಧ ಕಚೇರಿಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ಸುರಕ್ಷಿತ, ನೈತಿಕ ಮತ್ತು ಜವಾಬ್ದಾರಿಯುತ ಇಂಟರ್ನೆಟ್ ಬಳಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಸೂಚನಾ ವಿಜ್ಞಾನ ಕೇಂದ್ರ (ಎನ್‌ಐಸಿ) ಹಾಗೂ ಪೊಲೀಸ್ ಇಲಾಖೆ (ಸೈಬರ್ ಸೆಲ್) ಇವರ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಅಂತರ್ಜಾಲ ಜಾಗೃತಿ ಕುರಿತು ಜಿಪಂ ನ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಮತ್ತು ಇಂಟರ್ನೆಟ್‌ನ ಜವಾಬ್ದಾರಿಯುತ, ಸುರಕ್ಷಿತ ಬಳಕೆ ಪ್ರೋತ್ಸಾಹಿಸಲು ಹಾಗೂ ಆನ್‌ಲೈನ್ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೇಫರ್ ಇಂಟರ್ನೆಟ್ ಡೇ ಅನ್ನು ಆಚರಿಸಲಾಗುತ್ತದೆ. ‘ಜೊತೆಯಾಗಿ, ಉತ್ತಮ ಇಂಟರ್ನೆಟ್ ಕಡೆಗೆ’ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿದೆ ಎಂದು ತಿಳಿಸಿದರು.
ಡಿಜಿಟಲ್ ಜಗತ್ತು ಅಭಿವೃದ್ಧಿ ಹೊಂದುತ್ತಿದ್ದAತೆ ಜನರು, ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರು, ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬಳಸಬೇಕು. ಒಳ್ಳೆಯ ಉದ್ದೇಶಕ್ಕಾಗಿ ಅಗತ್ಯವಾದ ಮಾಹಿತಿ ಹೊಂದಲು ಆದ್ಯತೆ ನೀಡಬೇಕು ಎಂದರು.
ಶಿಕ್ಷಣ, ಸಾಮಾಜಿಕ ಸಂವಹನ ಮತ್ತು ವ್ಯವಹಾರಕ್ಕೆ ಹಲವಾರು ಅವಕಾಶಗಳನ್ನು ಇಂಟರ್ನೆಟ್ ಒದಗಿಸಿದೆ. ಇದು ಪ್ರಪಂಚದಾದ್ಯAತ ಜನರನ್ನು ಒಂದುಗೂಡಿಸುವ ಪ್ರಬಲ ಸಾಧನವಾಗಿದೆ. ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಎಷ್ಟು ಉಪಯುಕ್ತವಾಗಿದೆಯೋ ಅದಕ್ಕಿಂತ ಹೆಚ್ಚು ಅಪಾಯವಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ಹಿರಿಯವರಿಗೆ ಎಲ್ಲರೂ ಎಚ್ಚರದಿಂದ ಮುನ್ನಡೆಯಬೇಕು ಎಂದು ಜಿಪಂ ಸಿಇಒ ಅವರು ತಿಳಿಸಿದರು.
ಪ್ಯಾನ್, ಆಧಾರ್ ಅಥವಾ ಬ್ಯಾಂಕ್ ವಿವರಗಳಂತಹ ಸೂಕ್ಷö್ಮ ಮಾಹಿತಿಗಳನ್ನು ಕೇಳುವ ಅಪರಿಚಿತ ದೂರವಾಣಿ ಸಂಖ್ಯೆಗಳಿAದ ಬರುವ ಸುರಕ್ಷಿತವಲ್ಲದ ಯಾವುದೇ ಲಿಂಕ್ ಗಳನ್ನು ಒತ್ತಬಾರದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಮಾತನಾಡಿ, ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆಗಳಿAದ ಜಾಗೃತರಾಗಿರಬೇಕು. ಈ ಕುರಿತು ತಮ್ಮ ನೆರೆ-ಹೊರೆಯವನ್ನು ಎಚ್ಚರಗೊಳಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬರು ತಮ್ಮ ಆನ್‌ಲೈನ್ ಖಾತೆಗಳನ್ನು ರಕ್ಷಿಸಲು ಸ್ಟಾçಂಗ್ ಮತ್ತು ವಿಶಿಷ್ಟವಾದ ಪಾಸ್‌ವರ್ಡ್ಗಳನ್ನು ಬಳಸಬೇಕು. ಕರೆಗಳ ಮೂಲಕ ಸೂಕ್ಷö್ಮ ವಿವರಗಳಾದ ಓಟಿಪಿ, ಆಧಾರ್, ಪಾನ್ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಗಳನ್ನು ಎಂದಿಗೂ ಹಂಚಿಕೊಳ್ಳಬಾರದು. ಅದೇರೀತಿಯಾಗಿ ಆನ್‌ಲೈನ್ ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಮುಖ್ಯವಾಗಿ ತಮ್ಮ-ತಮ್ಮ ಡಿಜಿಟಲ್ ಗುರುತನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ಕಾರ್ಯಾಗಾರದಲ್ಲಿ ರಾಷ್ಟಿçÃಯ ಸೂಚನಾ ವಿಜ್ಞಾನ ಕೇಂದ್ರ (ಎನ್‌ಐಸಿ)ದ ಜಿಲ್ಲಾ ನಿರ್ದೇಶಕ ವೆಂಕಟರಮಣ ಅವರು ಸುರಕ್ಷಿತ ಅಂತರ್ಜಾಲ ಕುರಿತು ಸವಿವರವಾಗಿ ಮಾಹಿತಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಯೋಜನಾ ನಿರ್ದೇಶಕ ವಿನೋದ್ ಕುಮಾರ್, ಮುಖ್ಯ ಲೆಕ್ಕಾಧಿಕಾರಿ ಪರಿಮಳ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share This Article
error: Content is protected !!
";