Ad image

ಸಾಲಭಾದೆ : ಪತಿಸಾವು ಪತ್ನಿ ಮಕ್ಕಳು ಪ್ರಾಣಪಾಯದಿಂದ ಪಾರು

Vijayanagara Vani
ಸಾಲಭಾದೆ : ಪತಿಸಾವು ಪತ್ನಿ ಮಕ್ಕಳು ಪ್ರಾಣಪಾಯದಿಂದ ಪಾರು

ಕೊಟ್ಟೂರು ಪಟ್ಟಣದ ಎಸ್ ಬಿ ಐ ಬ್ಯಾಂಕಿನ ಸೇವಾ ಪ್ರತಿನಿಧಿ ಚಂದ್ರಯ್ಯ ಎಂಬುವರು ಹಂಪಿಯ ಸ್ನಾನಘಟ್ಟದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ . ಪತ್ನಿ ಮಕ್ಕಳ ಸಮೇತ ಕೊಟ್ಟೂರಿನಿಂದ ಹಂಪಿಗೆ ತೆರಳಿ ಅಲ್ಲಿರುವ ಸ್ನಾನಘಟ್ಟದ ಬಳಿ ಕುಟುಂಬ ಸಮೇತ ವಿಷ ಸೇವಿಸಿದ್ದಾರೆ. ಅದೃಷ್ಟವಶಾತ್ ಪತ್ನಿ ಮತ್ತು ಇಬ್ಬರು ಮಕ್ಕಳು ಬದುಕುಳಿದಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಖಾಸಗಿಯಾಗಿ ಸಾಲ ಮಾಡಿಕೊಂಡಿದ್ದು ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article
error: Content is protected !!
";