ಬಳ್ಳಾರಿ ಜೂ 2: ಸಕಾಲಕ್ಕೆ ಮುಂಗಾರು ಮಳೆ ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಷ್ಟೇ ಅಲ್ಲದೆ ಬಿತ್ತನೆ ಕಾರ್ಯ ಕೂಡ ಶುರು ಮಾಡಿದ್ದಾರೆ ಸಕಾಲಕ್ಕೆ ಅವರಿಗೆ ಕೃಷಿ ಇಲಾಖೆಯಿಂದ ಉತ್ತಮ ತಳಿಯ ಬೀಜಗಳನ್ನು ನೀಡಬೇಕು ಮತ್ತು ಇತ್ತೀಚೆಗೆ ತುಂಗಭದ್ರ ಜಲಾಶಯದ 19 ಗೇಟ್ ದುರಸ್ತಿಗೆ ಬಂದಿದ್ದು ಅದನ್ನು ಇಲ್ಲಿಯವರೆಗೂ ಸಹ ಬದಲಾಯಿಸಿರುವುದಿಲ್ಲ ಅದನ್ನು ಶೀಘ್ರವಾಗಿ ಬದಲಾಯಿಸಿ ಜಲಾಶಯದಲ್ಲಿ ನೀರಿನ ಸಂಗ್ರಹಕ್ಕೆ ಅನುವು ಮಾಡಿಕೊಡಬೇಕೆಂದು ಎಂದು ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗನಕಲ್ ಕೃಷ್ಣ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಬಳ್ಳಾರಿ ಜಿಲ್ಲಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಶೀಘ್ರದಲ್ಲಿ ತುಂಗಭದ್ರ ಡ್ಯಾಮ್ ಗೇಟ್ ಸರಿಪಡಿಸಲಾಗುವುದು ಎಂದು ಇತ್ತೀಚೆಗೆ ಜಲಾಶಯಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರೈತರಿಗೆ ಭರವಸೆಯನ್ನು ನೀಡಿದ್ದರು. ಆದರೆ ಇಲ್ಲಿವರೆಗೂ ಸಹ 19ನೇ ಗೇಟ್ ಅನ್ನು ದುರಸ್ತಿಗೊಳಿಸಿವುದಿಲ್ಲ ಎಂದು ಸಚಿವರ ಮೇಲೆ ಕೆಂಡಕಾರಿದರು
ಆ ಗೇಟನ್ನು ಈ ವರ್ಷ ಸರಿಪಡಿಸುತ್ತಾರೆ ಇಲ್ಲ ಮುಂದಿನ ವರ್ಷ ಸರಿಪಡಿಸುತ್ತಾರೂ ಎಂದು ರೈತರಿಗೆ ತಿಳಿಸಬೇಕು ರೈತರು ಅಂತಕದಲ್ಲಿ ಇದ್ದಾರೆ, ಈ ವಿಷಯ ಮಳೆ ಚೆನ್ನಾಗಿ ಬರುವುದರಿಂದ ರೈತರು ತೊಗರಿ, ಮೆಕ್ಕೆಜೋಳ ಬೀಜವನ್ನು ರೈತರು ಬೀತನೆ ಮಾಡಿದ್ದಾರೆ, ಆದ್ದರಿಂದ ಜೂನ್-25 ರಿಂದ ರೈತರಿಗೆ ನೀರು ಬಿಟ್ಟರೆ ರೈತರಿಗೆ ಅನುಕೂಲವಾಗಲಿದೆ. ಮುಂಗಾರು ಮಳೆ ಚೆನ್ನಾಗಿ ಬಂದಿರುವುದರಿAದ ಇದರ ಲಾಭವನ್ನು ಪಡೆಯಲು ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ಕಳಪೆ ಬೀಜ ನೀಡುವುದು ಮತ್ತು ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುವುದು ಕಂಡು ಬಂದಿದೆ. ಇದನ್ನು ಜಿಲ್ಲಾಡಳಿತ ತಡೆಯಬೇಕೆಂದು ಈ ಸಂದರ್ಭದಲ್ಲಿ ಕೃಷ್ಣ ಮನವಿ ಮಾಡಿದರು. ರೈತರು ಗುತ್ತಿಗೆ ಭೂಮಿಗಳನ್ನು ಮಾಡುವುದಕ್ಕೆ ರೈತರುಗಳು ಆತಂಕಕ್ಕೆ ಒಳಗಾಗಿರುತ್ತಾರೆ. ನೀರು ಬಿಡುತ್ತಾರೋ ಇಲ್ಲವೆಂದು ಗೊಂದಲ ಸೃಷ್ಠಿಯಾಗಿದ್ದು, ಇದನ್ನು ಕೂಡಲೇ ಪತ್ರಿಕಾಗೋಷ್ಠಿಯನ್ನು ಕರೆದು ರೈತರಿಗೆ ತಿಳಿಸಬೇಕೆಂದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ
ಬೈಲೂರು ವೀರೇಶ್ ತಿಪ್ಪೇಸ್ವಾಮಿ ನೀಲಕಂಠ ಬೇವಿನ ಗಿಡದ ಇರಿ ಸ್ವಾಮಿ ಗಾದಿಲಿಂಗ ಸೇರಿದಂತೆ ಇತರ ರೈತರುಗಳು ಇದ್ದರು.