ಬಳ್ಳಾರಿ ಮೇ 03 : ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಿಲ್ಲಾಧ್ಯಾಂತ ರೈತರು ಸರ್ಕಾರದಿಂದ ಆರಂಭಿಸಲಾದ ಖರೀದಿ ಕೇಂದ್ರಕ್ಕೆ ತಂದಿರುವ ಜೋಳವನ್ನು ತುಂಬಲು ಖಾಲಿ ಚೀಲಗಳನ್ನು ಕೇಳಿದರೆ, ಅಧಿಕಾರಿಗಳು ಖಾಲಿ ಚೀಲ ಇಲ್ಲ ಎಂದು ಹೇಳುತ್ತಿದ್ದಾರೆ ಇದರಿಂದ ಕಳೆದ ತಿಂಗಳು ಟ್ರಾಕ್ಟರ್ ಬಂಡಿ ಆಟೋದಲ್ಲಿ ತಮ್ಮ ಮಾಲುಗಳೊಂದಿಗೆ ಬಂದ ರೈತರು ಅದೇ ಗಾಡಿಯಲ್ಲಿ ಒಂದು ವಾರದಿಂದ ಅನ್ ಲೋಡ್ ಆಗದೇ ಅಲ್ಲೇ ನಿಂತಿವೆ, ರೈತರು ತಮ್ಮ ಊರಿಗೆ ಹೋಗಿ ಮತ್ತೆ ಬರಲು ಏನಿಲ್ಲ ಎಂದರೂ ದಿವಸಕ್ಕೆ ನೂರಾರು ರೂಪಾಯಿ ಖರ್ಚು ಆಗುತ್ತಿದೆ, ಈ ಖರ್ಚನ್ನು ಭರಿಸುವವರು ಯಾರೂ ಎಂಬುದು ರೈತರ ಯಕ್ಷ ಪ್ರಶ್ನೆಯಾಗಿದೆ,
ಕಾರಣ ಮಾರುಕಟ್ಟೆಗೆ ಬಂದ ಕೃಷಿ ಉತ್ಪನ್ನಗಳನ್ನು ಅನ್ ಲೋಡ್ ಮಾಡಲು ಅದಷ್ಟ ಬೇಗ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮಾರುಕಟ್ಟೆ ಸಮಿತಿ ಖಾಲಿ ಚೀಲಗಳ ವ್ಯವಸ್ಥೆ ಮಾಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಿದ್ದಾರೆ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಸುತ್ತ ಮುತ್ತಲ ಹಳ್ಳಿಗಳ ನೂರಾರು ರೈತರಿಂದ ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ತಿಮ್ಮಪ್ಪ ಕೊಳಗಲ್ಲು, ಶ್ರೀರಾಮುಲು, ಮಾರೆಣ್ಣ, ಎರ್ರಿಸ್ವಾಮಿ, ಗಂಗಾ ದವಡೆಕರ್ ಸೇರಿದಂತೆ ಹಲವಾರು ರೈತರಿದ್ದರು.