Ad image

10ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಮತ್ತು ಬೆಂಗಳೂರಿನ ತೇಜಸ್ವಿನಿ ಪ್ರಥಮಸ್ಥಾನ

Vijayanagara Vani
10ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಮತ್ತು ಬೆಂಗಳೂರಿನ ತೇಜಸ್ವಿನಿ ಪ್ರಥಮಸ್ಥಾನ
 ಬಳ್ಳಾರಿ. ಆ. 3: ನಗರದ ವಿಜ್ ಡಮ್ ಲ್ಯಾಂಡ್ ಶಾಲೆಯ ಆವರಣದಲ್ಲಿ ಬಿ.ಸಿ.ಆರ್.ಎಫ್ ತಂಡ ಆಯೋಜಿಸಿದ್ದ ಜೆ.ಎಸ್.ಡಬ್ಲ್ಯೂ. ಸ್ಟೀಲ್ ಸಿಟಿ ರನ್ 2025 4ನೇ ಆವೃತ್ತಿಗೆ ಭಾನುವಾರ ಬೆಳಿಗ್ಗೆ 6 ಗಂಟೆಗೆ ಜಿಂದಾಲ್ ಕಂಪನಿಯ ಸಿಇಒ ಮುರಗನ್ ಚಾಲನೆ ನೀಡಿದರು.
 ಈ ಮ್ಯಾರಥಾನ್ ಓಟದಲ್ಲಿ 14 ರಾಜ್ಯಗಳ ಮತ್ತು ಸ್ಥಳೀಯರು ಸೇರಿ ಒಟ್ಟು ನಾಲ್ಕು ಸಾವಿರ ಓಟಗಾರರು ಈ ಓಟದಲ್ಲಿ ಭಾಗವಹಿಸಿದ್ದರು. 3, 5 ಹಾಗೂ 10 ಕಿಲೋ‌ಮೀಟರ್ ಓಟದಲ್ಲಿ 4 ಸಾವಿರ ಓಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಿ ಸಂತಸ ವ್ಯಕ್ತಿ ಪಡಿಸಿದರು.
ಬಿ.ಸಿ.ಆರ್.ಎಫ್ ಆರೋಗ್ಯವೇ ಮಹಾಭಾಗ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ ಈ ಮ್ಯಾರಥಾನ್ ಓಟಕ್ಕೆ ಇಂದು ನಾಲ್ಕನೇ ವರ್ಷದ ಸಂಭ್ರಮ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ದೇಹವನ್ನು ದಂಡಿಸುವ ಕೆಲಸ ಮಾಡಬೇಕು, ಇದರಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆರೋಗ್ಯ ಉತ್ತಮವಾಗಿದ್ದಲ್ಲಿ ಏನಾದ್ರೂ ಸಾಧನೆ ಮಾಡಬಹುದು ಎಂದು ಬಿ.ಸಿ.ಆರ್.ಎಫ್ ತಂಡದ ಅಧ್ಯಕ್ಷ ಡಾ.ಸೋಮನಾಥ ತಿಳಿಸಿದರು.
ಬಳ್ಳಾರಿ ಸೈಕ್ಲಿಂಗ್ ಅಂಡ್ ರನ್ನಿಂಗ್ ಕ್ಲಬ್ ಹಾಗೂ ಜಿಂದಾಲ್ ಸ್ಟೀಲ್ ಸಿಟಿ ರನ್ನಿಂಗ್
ಅಂತರಾಷ್ಟ್ರೀಯ ಕ್ರೀಡಾಪಟು ವಿ‌. ಸುದೀಶ್ನ ಮಾತನಾಡಿ, ಜಿಲ್ಲಾ, ತಾಲೂಕು, ವಲಯ ಮಟ್ಟದಲ್ಲಿ ಇಂತಹ ಓಟದ ಸ್ಪರ್ಧೆಗಳನ್ನು ಮಾಡುವುದರ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದರು.
64 ವರ್ಷದ ಶಶಿಕಾಂತ ಬೆಂದ್ರೆ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಯಲ್ಲಿ ಇಂತಹ ಓಟಗಳನ್ನು ಆಯೋಜನೆ ಮಾಡಿ ಯುವಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬಹುದು ಎಂದರು. ಹಿರಿಯ ವಯಸ್ಕರಾದ 64 ವರ್ಷದ ಬೆಳಗಾವಿಯ ರೈತ ಬಸಪ್ಪ ಅವರು 10 ಕಿಲೋಮೀಟರ್ ಓಟದಲ್ಲಿ ಭಾಗವಹಿಸಿ, ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.
10 ಕೀಲೋ ಮೀಟರ್ ಓಟ ಸಾಂಗ್ಲಿಯ ಚೈತನ್ಯ ಹಾಗೂ ತೇಜಸ್ವಿನಿ ಪ್ರಥಮಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ 10 ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಅವರು 30 ನಿಮಿಷ 1 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದರೆ, ಮಹಿಳೆಯ ವಿಭಾಗದಲ್ಲಿ ಬೆಂಗಳೂರಿನ ತೇಜಸ್ವಿನಿ 37 ನಿಮಿಷ 10 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದು ವಿಶೇಷ.
ಬಿ.ಸಿ.ಆರ್.ಎಫ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರು ಕೆಲಸ ಮಾಡಿದರು.ಅಭ್ಯರ್ಥಿಗಳಿಗೆ ಕುಡಿಯುವ ನೀರು, ಒ.ಆರ್.ಎಸ್, ಟಿಫನ್ ವ್ಯವಸ್ಥೆ ಮಾಡಲಾಗಿತ್ತು. ಬಳ್ಳಾರಿಯ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳದ ಸಿಬ್ಬಂದಿಗಳು,ತುರ್ತುಪರಿಸ್ಥಿತಿಗೆ ಅಂಬುಲೇನ್ಸ್ ವ್ಯವಸ್ಥೆ ಮಾಡಲಾಗಿತ್ತು.
*5.5 ಲಕ್ಷ ನಗದು ಹಣ ಬಹುಮಾನ*
3 ಹಾಗೂ 5 ಮತ್ತು 10 ಕಿಲೋ ಮೀಟರ್ ಗಳ ಓಟದಲ್ಲಿ ವಿವಿಧ ವಯಸ್ಸಿನ ವರ್ಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ.ಮುಖ್ಯವಾಗಿ ಬಳ್ಳಾರಿ ನಗರದ ಅಭ್ಯರ್ಥಿಗಳಿಗೆ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ನಗದುಹಣ ಹಾಗೂ ಪ್ರಮಾಣಪತ್ರ ನೀಡಿದರು‌.ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಮೆಡಲ್ ಗಳನ್ನು ವಿತರಣೆ ಮಾಡಿದರು.
*ಓಟದಲ್ಲಿ ಭಾಗವಹಿಸಿದ ಗಣ್ಯರು*
10 ಹಾಗೂ 5 ಕೀಲೋ ಮೀಟರ್ ಓಟದಲ್ಲಿ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ, ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಸಿಪಿಐ ಸುಭಾಷ್ ಚಂದ್ರ, ಪಿಎಸ್ಐ ಕಾಳಿಂಗ ಓಟದಲ್ಲಿ ಭಾಗವಹಿಸಿದ್ದರು.
ಬಿ.ಸಿ.ಆರ್.ಎಫ್ ತಂಡದ ಸದಸ್ಯರಾದ ಸಂದೀಪ್, ಪ್ರಶಾಂತ, ಸಾಗರ, ವಿಕಾಸ್, ಓಂ, ಡಾ.ಸುಂದರ್, ಡಾ.ತಿಪ್ಪಾರೆಡ್ಡಿ, ಜೋಸ್ನ, ಗಿರೀಶ್ ಕುಮಾರ್ ಗೌಡ, ಮತ್ತು ಬಿಸಿಆರ್ ತಂಡದ 200 ಕ್ಕಿಂತ ಹೆಚ್ಚಿನ ಸ್ವಯಂ ಸೇವಕರು‌ ಭಾಗವಹಿಸಿದ್ದರು.

Share This Article
error: Content is protected !!
";