Ad imageAd image

ಶಿಕ್ಷಣ ಇಲಾಖೆಯಿಂದ ಶಾಲಾ ದಾಖಲಾತಿ ಆಂದೋಲನ: ಮೂಕಪ್ಪ ಕಟ್ಟಿಮನಿ

Vijayanagara Vani

ಮಾನ್ವಿ:ಪಟ್ಟಣದ ಕೋನಾಪುರ ಪೇಟೆ ಸರಕಾರಿ ಉನ್ನತಿಕರಿಸಿದ ಮಾದರಿಯ ಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯದ ವತಿಯಿಂದ ಹಮ್ಮಿಕೊಂಡ ಶಾಲಾ ದಾಖಲಾತಿ ಆಂದೋಲನ ೨೦೨೪-೨೫ ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯಗುರು ಮೂಕಪ್ಪ ಕಟ್ಟಿಮನಿ ಚಾಲನೆ ನೀಡಿ ಮಾತನಾಡಿ ಸರಕಾರವು ನಮ್ಮ ಶಾಲೆಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಅಂಗ್ಲ ಮಾಧ್ಯಮದಲ್ಲಿ ಶಿಕ್ಷಣನೀಡುವುದಕ್ಕೆ ಅನುಮತಿ ನೀಡಿರುವುದರಿಂದ ಪಾಲಕರು ತಮ್ಮ ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳನ್ನು ಎಲ್.ಕೆ.ಜಿ, ೫ ವರ್ಷ ಮೇಲ್ಪಟ್ಟ ಮಕ್ಕಳನ್ನು ಯು.ಕೆ.ಜಿ ಗೆ ೬ವರ್ಷ ಮೇಲ್ಪಟ್ಟ ಮಕ್ಕಳನ್ನು ೧ ನೇ ತರಗತಿಗೆ ದಾಖಲಾತಿಯನ್ನು ಪಡೆಯ ಬಹುದಾಗಿದೆ ಹಾಗೂ ಶಾಲೆಯಲ್ಲಿ ೧ ರಿಂದ ೮ ನೇ ತರಗತಿಯವರೆಗೆ ಇಂಗ್ಲೀಷ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದಕ್ಕೆ ದಾಖಲಾತಿ ಪಡೆದು ಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಶಿಕ್ಷಕರು ಶಾಲೆಯ ಹತ್ತಿರದ ಮನೆ ಮನೆಗಳಿಗೆ ತೆರಳಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಕೋರಿದರು.
ಶಾಲೆಯ ಶಿಕ್ಷಕರಾದ ಸುರೇಶ ಕುರ್ಡಿ,ಶಾಬಾನ ಸುಲ್ತಾನ,ಅನುರಾಧ,ಅನುಪಮ,ಶೈಲಾಜಾ, ವನಜಾಕ್ಷೀ ಸೇರಿದಂತೆ ಇನ್ನಿತರರು ಇದ್ದರು.

- Advertisement -
Ad imageAd image

 ಕೋನಾಪುರ ಪೇಟೆ ಸರಕಾರಿ ಉನ್ನತಿಕರಿಸಿದ ಮಾದರಿಯ ಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮನೆ ಮನೆಗಳಿಗೆ ತೆರಳಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಕೋರಿದರು.

WhatsApp Group Join Now
Telegram Group Join Now
Share This Article
error: Content is protected !!