ಸಿರುಗುಪ್ಪ.ಮೇ.22:- ತಾಲೂಕಿನ ತೋಟಗಾರಿಕೆ ಇಲಾಖೆಯು ವಾಣಿಜ್ಯ ಬೆಳೆಗಳ ಸಸಿಗಳನ್ನು ಕಡಿಮೆ ಧರದಲ್ಲಿ ರೈತರಿಗೆ ಪೂರೈಸಲು ತಾಲೂಕಿನ ದೇಶನೂರು ನರ್ಸರಿ ಫಾರಂನಲ್ಲಿ ವಿವಿಧ ಜಾತಿಯ ತಳಿಗಳನ್ನು ಬೆಳೆಸಿದ್ದು, ವಿವಿಧ ಧರಗಳಲ್ಲಿ ಸಸಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಮಳೆಗಾಲ ಆರಂಭವಾಗುತ್ತಿದಂತೆ ರೈತರಿಂದ ವಿವಿಧ ತಳಿಯ ಸಸಿಗಳಿಗೆ ಬೇಡಿಕೆ ಬರುತ್ತದೆ, ಅವುಗಳನ್ನು ಪೂರೈಸುವ ಉದ್ದೇಶದಿಂದ ನರ್ಸರಿಯಲ್ಲಿ ವಿವಿಧ ತಳಿಯ ಸಸಿಗಳನ್ನು ಬೆಳೆಸಲಾಗಿದೆ.
ಸಪೋಟ-8000, ಮಾವು-3000, ನಿಂಬೆ-4೦೦೦, ನುಗ್ಗೆ-6೦೦೦, ಕರಿಬೇವು-8೦೦೦, ಸೀತಫಲ-3೦೦೦, ಪೇರಲಾ-1೦೦೦ ಮತ್ತು ಅಲಂಕಾರಿಕ-8೦೦೦ ಸಸಿಗಳನ್ನು ನರ್ಸರಿ ಫಾರಂನಲ್ಲಿ ಬೆಳೆಸಲಾಗಿದ್ದು, ಸಪೋಟ-ರೂ.56, ಮಾವು-ರೂ.4೦, ನಿಂಬೆ-ರೂ.18, ನುಗ್ಗೆ-ರೂ.10, ಕರಿಬೇವು-ರೂ.18, ಸೀತಾಫಲ-ರೂ.32, ಪೇರಲಾ-ರೂ.45, ಅಲಂಕಾರಿಕ ಗಿಡಗಳು ರೂ. 20/-ರಂತೆ ಸಸಿಗಳಿಗೆ ತೋಟಗಾರಿಕೆ ಇಲಾಖೆ ಧರಗಳನ್ನು ನಿಗಧಿಮಾಡಿದ್ದು, ರೈತರು ನರ್ಸರಿ ಫಾರಂನಲ್ಲಿ ಸಸಿಗಳನ್ನು ನೇರವಾಗಿ ಖರೀದಿಸಲು ಅವಕಾಶವಿರುತ್ತದೆ.
ನಮ್ಮ ಇಲಾಖೆಯ ದೇಶನೂರು ನರ್ಸರಿ ಫಾರಂನಲ್ಲಿ ಸುಮಾರು 41 ಸಾವಿರ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿ, ಅಲಂಕಾರಿಕ ಸಸಿಗಳನ್ನು ಬೆಳಸಲಾಗಿದ್ದು, ರೈತರು ನಮ್ಮ ಫಾರಂನಲ್ಲಿರುವ ಸಸಿಗಳನ್ನು ಖರೀದಿಸಬೇಕೆಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್‌ಬಾಷ ತಿಳಿಸಿದ್ದಾರೆ.