ಲಾರ್ವಾ ಸಮೀಕ್ಷೆ ಕಾರ್ಯ: ನಗರ ಸ್ವಯಂ ಸೇವಕರ ಆಯ್ಕೆ

Vijayanagara Vani
ಲಾರ್ವಾ ಸಮೀಕ್ಷೆ ಕಾರ್ಯ: ನಗರ ಸ್ವಯಂ ಸೇವಕರ ಆಯ್ಕೆ
ಚಿತ್ರದುರ್ಗಜೂನ್.27:
2024-25ನೇ ಸಾಲಿಗೆ ಜಿಲ್ಲೆಯ ವಿವಿಧ ನಗರ ಪ್ರದೇಶಗಳ ಸಮಸ್ಯಾತ್ಮಕ ವಾರ್ಡ್ಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ಕಾರ್ಯವನ್ನು ನಡೆಸಲು ಅನುಷ್ಟಾನ ಮಾರ್ಗಸೂಚಿ ಪ್ರಕಾರ ಕೇವಲ 100 ದಿನಗಳ ಅವಧಿಗೆ ಮಾತ್ರ ತಾತ್ಕಾಲಿಕವಾಗಿ ನಗರ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು. ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ.
ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರ-09, ಚಳ್ಳಕೆರೆ-2, ಹಿರಿಯೂರು-2, ಹೊಸದುರ್ಗ-2 ರಂತೆ ನಗರ ಸ್ವಯಂ ಸೇವಕರು ನಗರ ಪ್ರದೇಶಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆಯನ್ನು ನಡೆಸಲು, ಪ್ರತಿದಿನ ಕಡ್ಡಾಯವಾಗಿ 100 ಮನೆಗಳಿಗೆ ಬೇಟಿ ನೀಡಿ, ಒಳಾಂಗಣ ಮತ್ತು ಹೊರಾಂಗಣದ ಕೃತಕ ನೀರಿನ ಸಂಗ್ರಹಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆಗೆ ನಡೆಸಲು ದಿನ ಒಂದಕ್ಕೆ ರೂ.200 ಗಳಂತೆ ಆಯ್ಕೆಗೊಂಡ ಸೇವಕರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲಾಗುವುದು.
ಈ ಸಮೀಕ್ಷೆಗೆ ಸೇರ ಬಯಸುವವರು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಆಗಿರಬೇಕು. ತಮ್ಮ ಸ್ವ-ವಿವರಗಳೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಬ್ಯಾಂಕ್ ಪಾಸ್ ಪುಸ್ತಕದ ಮೊದಲನೇ ಪುಟ ಮತ್ತು ಆಧಾರ್ ಕಾರ್ಡ್ನ ನಕಲು ಪ್ರತಿಗಳೊಂದಿಗೆ ಜೂನ್ 29 ರ ಸಂಜೆ 4.30ರೊಳಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಗಳ ಕಚೇರಿ ಆವರಣದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆಗೆ ಖುದ್ದು ಹಾಜರಾಗಬೇಕು. ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡುವುದಿಲ್ಲ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ರೋಗವಾಹಕಗಳ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article
error: Content is protected !!