ಚಿತ್ರದುರ್ಗಅ.14:
ಜೀವನದಲ್ಲಿ ದೃಷ್ಠಿ ಬಹು ಮುಖ್ಯ. ಯಾವುದೇ ಒಂದು ವಸ್ತು, ಬಣ್ಣ, ಸನ್ನಿವೇಶ ಅರ್ಥ ಮಾಡಿಕೊಳ್ಳಬೇಕಾದರೆ ದೃಷ್ಢಿ ಬೇಕೇ ಬೇಕು. ನಾವೆಲ್ಲರೂ ಕಣ್ಣಿನ ದೃಷ್ಠಿ ಕಾಪಾಡಿಕೊಳ್ಳುವ ಬಗ್ಗೆ ಜಾಗೃತೆವಹಿಸಬೇಕು ಎಂದು ಜಿಲ್ಲಾಸ್ಪತ್ರೆ ಹಿರಿಯ ನೇತ್ರ ತಜ್ಞೆ ಡಾ.ಐ.ಎಂ.ಶಿಲ್ಪಾ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಅಧೀನದ ಸರ್ಕಾರಿ ಬಿ.ಎಸ್‌ಸಿ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ದೃಷ್ಠಿ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಟ್ಡಿದ ಮಕ್ಕಳಲ್ಲಿ ಅನೇಕ ಕಾರಣಗಳಿಂದ ಹುಟ್ಟು ಕುರುಡು ಉಂಟಾಗುವ ಸಾಧ್ಯತೆಗಳು ಇರುತ್ತವೆ. ಯಾವುದೇ ನ್ಯೂನತೆಗಳನ್ನು ಹುಟ್ಟಿದ ಹನ್ನೆರೆಡು ವರ್ಷಗಳಲ್ಲಿ ಬಹಳಷ್ಟು ತೊಂದರೆಗಳನ್ನು ಸೂಕ್ತ ಚಿಕಿತ್ಸೆ ನೀಡುವುದರ ಮುಖಾಂತರ ಸರಿಪಡಿಸಬಹುದಾಗಿದೆ. ಯಾವುದೇ ಮಗು ದೃಷ್ಠಿಗೆ ಸಂಬ0ಧಿಸಿದ ತೊಂದರೆ ಇರುವುದು ಕಂಡುಬAದಲ್ಲಿ ಹತ್ತಿರದ ತಜ್ಞ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರೆ ಗುಣವಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದ ಅವರು, ಮೊಬೈಲ್ ವೀಕ್ಷಣೆ ಮಕ್ಕಳಿಗೆ ಅತಿಯಾದ ಅಭ್ಯಾಸ ಮಾಡಿಸುತ್ತಿದ್ದಾರೆ ಅದು ಕಡಿಮೆಯಾಗಬೇಕು ಎಂದು ಸಲಹೆ ನೀಡಿದರು.
ನೇತ್ರತಜ್ಞರಾದ ಡಾ.ಪ್ರದೀಪ್ ಮಾತನಾಡಿ, ವಿಟಮಿನ್ “ಎ” ಅನ್ನಾಂಗ ಹೆಚ್ಚಾಗಿರುವ ಹಣ್ಣುಗಳು ತರಕಾರಿಗಳನ್ನು ಸೇವಿಸಿ ಕಣ್ಣಿನ ದೃಷ್ಠಿ ಚೆನ್ನಾಗಿಟ್ಟುಕೊಳ್ಳಬಹುದು. ಆದ್ದರಿಂದ ಉತ್ತಮ ಆರೈಕೆ ಮಾಡಿ ಎಲ್ಲೆಂದರಲ್ಲಿ ಸಿಗುವ ಔಷಧಿಗಳನ್ನು ಬಳಸದೆ ನಿಗದಿತ ಔಷಧಿ ಅಂಗಡಿಗಳಲ್ಲಿ ಸಿಗುವ ಔಷಧಿಗಳನ್ನು ಉಪಯೋಗಿದುವುದರಿಂದ ಕಣ್ಣಿಗೆ ಅಡ್ಡ ಪರಿಣಾಮಗಳು ಉಂಟಾಗಿ ದೃಷ್ಠಿಗೆ ಸಮಸ್ಯೆ ಆಗಬಹುದು ಆದ್ದರಿಂದ ಜಾಹೀರಾತು ನೀಡುವ ವಸ್ತುಗಳನ್ನು ಬಳಸಿ ದೃಷ್ಠಿ ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅನುಸೂಯಮ್ಮ, ನಗರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನರೀಕ್ಷಣಾಧಿಕಾರಿ ಟಿ.ಶ್ರೀನಿವಾಸಮೂರ್ತಿ, ನೇತ್ರಾಧಿಕಾರಿ ಕೆ.ಸಿ.ರಾಮು, ಜಿಲ್ಲಾ ಮಾನಸಿಕ ರೋಗ ವಿಭಾಗದ ಕನ್ಸಲ್ಟೆಂಟ್ ಶ್ರೀಧರ್, ಜಿಲ್ಲಾ ಬ್ರೆöನ್ ಹೆಲ್ತ್ ಕನ್ಸಲ್ಟೆಂಟ್ ಶರತ್ ಹಾಗೂ ನರ್ಸಿಂಗ್ ಕಾಲೇಜಿನ ಬೋಧಕ ವರ್ಗದವರು, ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.