ಪ್ರಜಾಪ್ರಭುತ್ವದ ಉಳುವಿಗೆ ಮತದಾನವೆಂಬ ಅಸ್ತ್ರವೇ ಶಕ್ತಿ : ವಿ.ಎಸ್ ಚಕ್ರವರ್ತಿ ಅಭಿಮತ*

Vijayanagara Vani
ಪ್ರಜಾಪ್ರಭುತ್ವದ ಉಳುವಿಗೆ ಮತದಾನವೆಂಬ ಅಸ್ತ್ರವೇ ಶಕ್ತಿ : ವಿ.ಎಸ್ ಚಕ್ರವರ್ತಿ ಅಭಿಮತ*
ದೇಶದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಮತದಾರರ ಪಾತ್ರ ಮುಖ್ಯವಾಗಿದೆ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಹಾಗೂ  ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಲು ಮತದಾನ ಮಾಡುವುದು ಪವಿತ್ರ ಕರ್ತವ್ಯ ಹಾಗೂ ಮಹತ್ವದ್ದಾಗಿದೆ ಎಂದು ವಿದ್ಯಾಶಾಲೆಯ ಕಾರ್ಯದರ್ಶಿ ವಿ.ಎಸ್ ಚಕ್ರವರ್ತಿ ತಿಳಿಸಿದರು. ಅವರು ಪಟ್ಟಣದ ವಿದ್ಯಾವಸತಿ ಶಾಲೆಯಲ್ಲಿ ಸ ಜರುಗಿದ  ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಗತ್ತಿನಲ್ಲಿಯೇ ಅತಿದೊಡ್ಡ ಸಂವಿಧಾನ ಹೊಂದಿರುವ ಭಾರತದಲ್ಲಿ ಚುನಾವಣೆ ಪಾತ್ರ ಮಹತ್ವದ್ದಾಗಿದೆ. ಪ್ರತಿ ವಿದ್ಯಾರ್ಥಿಯು ಹಳ್ಳಿಗಳಲ್ಲಿ ಮತದಾನದ ಬಗ್ಗೆ ತಿಳಿಹೇಳಬೇಕು. ಎಲ್ಲರೂ ಸಾಮಾಜಿಕವಾಗಿ ತಮ್ಮ ಕರ್ತವ್ಯನಿರ್ವಹಿಸಬೇಕು,ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಜವಾಬ್ದಾರಿ ಅರಿತು ಕಾರ್ಯ ಮಾಡಬೇಕು ಎಂದರು.
ನಂತರ  ಮುಖ್ಯಗುರು ಪ್ರಸಾದ್ ಮಾತನಾಡಿ18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆ ಮತ ಚಲಾಯಿಸುವುದು ಅತ್ಯಗತ್ಯ. ಈ ದೇಶದ ಬೆಳವಣಿಗೆಗೆ ಉತ್ತಮ ನಾಯಕನ ಆಯ್ಕೆ ಮತದಾರನ‌ ಜವಾಬ್ದಾರಿ. ನೋಟಿಗೆ ಬೆಲೆ ಕೊಡದೆ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಮತದಾನ ಮಾಡಬೇಕು. ನಮ್ಮ ಮತ ನಮ್ಮ ಹಕ್ಕು ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳಬೇಡಿ ಎಂಬ ತತ್ವ, ನಿಷ್ಠೆ ಕಲಿಸಲು ಶಾಲೆಯಲ್ಲಿ ಮತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಅನೇಕ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ನಂತರ ಮಕ್ಕಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದರವಿ ಕುಮಾರ್ ಸರ್. (ಆಡಳಿತ ಮಂಡಳಿ ),ಮುಖ್ಯಗುರುಗಳಾದಪ್ರಸಾದ್ ,ಶಿಕ್ಷಕರಾದ ಬಸವನಗೌಡ ಡಿ,ಹುಲುಗಪ್ಪ,ರಾಜು,ಭುವನೇಶ್ವರಿ,ಪೂಜಾ, ಮಂಗಳ ಗೌರಿ,ಕುಸುಮ, ಗೀತಾ,ಅನುಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!