ಜನಪದ ಸಾಹಿತ್ಯಕ್ಕೆ ಶರಣಮ್ಮ ರಾಮಣ್ಣ ರುದ್ರಾಕ್ಷಿ ಕೊಡುಗೆ ಅಪಾರ.

Vijayanagara Vani
ಜನಪದ ಸಾಹಿತ್ಯಕ್ಕೆ ಶರಣಮ್ಮ ರಾಮಣ್ಣ ರುದ್ರಾಕ್ಷಿ ಕೊಡುಗೆ ಅಪಾರ.
ಸಣ್ಣ ಮಾರೆಪ್ಪದೇವದುರ್ಗದ ಪಟ್ಟಣದ ಶಾಂತಿನಗರ ಮಾಳೆ ಗಡ್ಡಿಯಲ್ಲಿ ನಡೆದ ದಿವಂಗತ ಶರಣಮ್ಮ ರಾಮಣ್ಣ ರುದ್ರಾಕ್ಷಿ ಇವರ 17ನೇ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಬುಡುಗ ಜಂಗಮ ಸಮಿತಿ ಅಧ್ಯಕ್ಷರಾದ ಸಣ್ಣಮಾರೆಪ್ಪ ಮಾತನಾಡಿ ದೇವದುರ್ಗ ತಾಲೂಕಿನ ದಿವಂಗತ ಶರಣಮ್ಮ ರಾಮಣ್ಣ ರುದ್ರಾಕ್ಷಿ ಇವರು ಪಾರಂಪರಿಕ ಜಾನಪದ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ತಮ್ಮ ಕಲೆ ಸೇವೆಯ ಮುಖಾಂತರ ನಾಡಿನ ಮನೆ ಮಾತಾಗಿದ್ದು ಇವರ ಸೇವನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ಎರಡು ದಶಕಗಳ ಹಿಂದೆ ಇವರಿಗೆ ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದು ಇವರ ಸಾಧನೆಗೆ ತಂದ ಗೌರವವಾಗಿದೆ ಅಲ್ಲದೆ ರುದ್ರಾಕ್ಷಿ ಕುಟುಂಬವು ಈಗಲೂ ಕೂಡ ಕಲೆ ಸಾಹಿತ್ಯ ಜನಪದ ಹಗಲುವೇಷ ಬೀದಿ ನಾಟಕಗಳು ಪೌರಾಣಿಕ ಕಥೆಗಳನ್ನು ಹಳ್ಳಿ ಗ್ರಾಮಗಳಲ್ಲಿ ಪ್ರದರ್ಶನ ಮಾಡುತ್ತಿದ್ದು ಜನಪದ ಸಾಹಿತ್ಯ ಕಲೆ ಇವರ ಬದುಕಿಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದೇವದುರ್ಗ ಪಟ್ಟಣದ ಕಣ್ಣೂರು ಮಠದ ಕುಮಾರೇಶ್ವರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅಲೆಮಾರಿ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಈರಣ್ಣ ಎಲ್ಲಪ್ಪ ದುರ್ಗಪ್ಪ ಗೋಪಾಲ್ ಶಿವರಾಜ್ ಶರಣಪ್ಪ ರಮೇಶ್ ರುದ್ರಾಕ್ಷಿ ದೃಶ್ಯಮಾಧ್ಯಮದ ವರದಿಗಾರರಾದ ನಾಗರಾಜ್ ಸೋ ಮಕರ ಏಚ್. ಶಿವರಾಜ್ ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ದೇವದುರ್ಗ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಆತ್ಮೀಯರು ವಿವಿಧ ಗ್ರಾಮಗಳ ಜನಪದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article
error: Content is protected !!