Ad image

ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ನೀಡಿ, ಜ್ಞಾನವಂತರನ್ನಾಗಿ ಮಾಡಿ, ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ವೇ! ಶರಣಯ್ಯ ಸ್ವಾಮಿ ಹಿರೇಮಠ ನಾಗನಕಲ್

Vijayanagara Vani
ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ನೀಡಿ, ಜ್ಞಾನವಂತರನ್ನಾಗಿ ಮಾಡಿ, ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ವೇ! ಶರಣಯ್ಯ ಸ್ವಾಮಿ ಹಿರೇಮಠ ನಾಗನಕಲ್
ಕಾರಟಗಿ : ತಾಲೂಕಿನ ಶರಣಬಸವೇಶ್ವರ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಹಂತದ ಎಲ್ ಕೆ ಜಿ, ಯು ಕೆ ಜಿ ಹಾಗೂ ಒಂದನೇ ತರಗತಿಯ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವ ನಿಮಿತ್ಯ ಜ್ಞಾನ ದೇವತೆ ಶಾರದಾಂಬೆಯ ಹಾಗೂ ಶ್ರೀ ಶರಣಬಸವೇಶ್ವರ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಿ ಪುಷ್ಪ ನಮನಗಳನ್ನು ಅರ್ಪಿಸಿ ಬಳಿಕ  ಜ್ಞಾನದೇವತೆ  ಸರಸ್ವತಿಯ ಆಶೀರ್ವಾದದಿಂದ ವಿದ್ಯಾರಂಬಿಸುವ ಒಂದು ಪವಿತ್ರ ಕಾರ್ಯಕ್ರಮವಾದ ಅಕ್ಷರಭ್ಯಾಸವನ್ನು ವೇದಮೂರ್ತಿ ಶ್ರೀ ಶರಣಯ್ಯ ಸ್ವಾಮಿ ಹಿರೇಮಠ್  ನಾಗನಕಲ್ ಇವರ ದಿವ್ಯ ಸಾನಿಧ್ಯದಲ್ಲಿ ಮಕ್ಕಳ ಪಾಲಕರೊಂದಿಗೆ ಹರಿಶಿಣ ಕುಂಕುಮ ಫಲ ತಾಂಬೂಲಾದಿಗಳೊಂದಿಗೆ   ಪೂಜಾ ಕೈಂಕರ್ಯಗಳು  ನೆರವೇರಿಸಿ ಶ್ರೀಗಳಿಂದ ಮಕ್ಕಳಿಗೆ ಅಕ್ಷರಭ್ಯಾಸವನ್ನು ಮಾಡಿಸಿ ಅವರ   ಮಾರ್ಗದರ್ಶನದಲ್ಲಿ  ವಿದ್ಯುಕ್ತವಾಗಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. 
 ಬಳಿಕ ಮಾತನಾಡಿದ ಶ್ರೀಗಳು.ಕರೀಕೆಯನ್ನು ದೇವರ ಮುಡಿಗೇರುಸುತ್ತಿರಿ  ಅದು ಹಸಿರು ಸಂಕೇತವಾಗಿರುತ್ತದೆ, ಇದು ನಿಮ್ಮ ಮಕ್ಕಳ ಭವಿಷ್ಯ ಹಸಿರಾಗುವಂತೆ ಮಾಡುತ್ತದೆ,ಮತ್ತು ವಿದ್ಯೆಯನ್ನು ಕಲಿತವರು ವಿದೇಶಗಳಿಗೆ ತೆರಳಿ ಡಾಕ್ಟರ್ ಇಂಜಿನಿಯರ್, ಹಾಗೂ ಉನ್ನತ ಪದವಿಯೆರಿ ದೇಶವಿದೇಶಗಳಲ್ಲಿ ಹಣವನ್ನು ಸಂಪಾದಿಸಬಹುದು. ಆದರೆ ವಿದ್ಯೆ ಕಲಿಯದವನು ಹದ್ದಿಗಿಂತ ಕಡೆಯಾಗುತ್ತಾನೆ, ಹಾಗೂ ಹಣ ವಿದ್ದರೇನು ವಿದ್ಯೆ ಇಲ್ಲದಿದ್ದರೆ ಅದಕ್ಕಾಗಿ ಮುಖ್ಯವಾಗಿ ವಿದ್ಯೆಯನ್ನು ಕಲಿಯಬೇಕು ಅದರ ಜೊತೆ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು. ಜ್ಞಾನವಂತರಾಗಬೇಕು, ಮತ್ತು ಏಕಾಗ್ರತೆಯನ್ನು ಹೊಂದಬೇಕು. ಮತ್ತು ವಿದ್ಯಾ ಬುದ್ಧಿ ಶ್ರೇಯ ಯಶಸ್ಸು ಪಡೆದು ಜ್ಞಾನವಂತರಾಗಬೇಕು ಎಂದು ಆಶೀರ್ವಚನ ನೀಡಿದರು.
 ನಂತರ ಹಂಪಯ್ಯ ಮಾಸ್ಟರ್ ಮಾತನಾಡಿ ತರ ಅನೇಕ ಯೋಜನೆಗಳು ಅನುದಾನಗಳನ್ನು ಸರ್ಕಾರಿ ಶಾಲೆಗೆ ನೀಡುತ್ತಿದೆ ಅದನ್ನು ಸದುಉಪಯೋಗ ಪಡಿಸಿಕೊಳ್ಳಬೇಕಾಗಿದೆ,ಇ ಹಿಂದೆ ನಮ್ಮ ತಂದೆ ತಾಯಿಗಳು ವಿದ್ಯಾಭ್ಯಾಸ ಕಲಿಸಲು ಗುರುಗಳ ಬಳಿ ತೆರಳಿ ನಮ್ಮ ಮಕ್ಕಳಿಗೆ ನಾಲ್ಕು ಅಕ್ಷರದ   ಜೊತೆಗೆ ಸಂಸ್ಕಾರವನ್ನು ಕಲಿಸಿ ಎಂದು ಬಿಟ್ಟು ಬರುತ್ತಿದ್ದೆವು. ಇಂತಹ ಅಕ್ಷರಭ್ಯಾಸ ಕಾರ್ಯಕ್ರಮವು  ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಮಾತ್ರ ಮಾಡುತ್ತಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ ಇದೆ ಮೊದಲಿಗೆ ಎಂದು ಭಾವಿಸಿದ್ದೇನೆ.ಈ  ಶಾಲೆ ನೆನಪಾಗುವುದು ಅರಳಿ ಬಸಪ್ಪನವರು ಸ್ವರ್ಗಸ್ಥರಾದರೂ ಅವರ ವ್ಯಕ್ತಿತ್ವ ತಾಳ್ಮೆ ಉದಾರತೆ ಸಂಸ್ಕಾರ ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಡೆಯುವಂತಹ ಈ ಶರಣಬಸವೇಶ್ವರ ಸಂಸ್ಥೆಯಲ್ಲಿ ಅರಳಿ ಬಸಪ್ಪನವ್ರು ಆರ್ಥಿಕವಾಗಿ ದುರ್ಬಲವಾಗಿರುವ ಬಸವಣ್ಣ ಕ್ಯಾಂಪಿನ  ಮಗುವಿಗೆ ಉಚಿತವಾಗಿ ಶಿಕ್ಷಣ ನೀಡಿ ಆ ಮಗು ಎಸ್ ಎಲ್ ಸಿ ಯಲ್ಲಿ ಎರಡನೇ ರಾಂಕ್ ಪಡೆದು ಶಾಲೆ ಮತ್ತು ಪಾಲಕರಿಗೆ ಕೀರ್ತಿ ತಂದಿದೆ. ಶರಣಬಸವೇಶ್ವರ ಶಾಲೆ ಶಿಸ್ತಿನ ಮತ್ತು ಸಂಸ್ಕಾರ ನೀಡುವ  ಶಾಲೆಯಾಗಿದೆ. ಮಗುವಿಗೆ ಮನೆ ಮತ್ತು ಶಾಲೆಯಿಂದ ಉತ್ತಮ ಸಂಸ್ಕಾರ ನೀಡಬೇಕಾಗಿದೆ ಎಂದರು, ಇದೇ ಸಂದರ್ಭದಲ್ಲಿ ವೇದಮೂರ್ತಿ ಶರಣಯ್ಯ ಸ್ವಾಮಿ ಹಿರೇಮಠ ಇವರಿಗೆ ರೈತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಿ ಅವರಿಂದ ಆಶೀರ್ವಾದ ಪಡೆದರು.
 ನಂತರ ಶಾಲಾ ಆಡಳಿತ ಮಂಡಳಿಯ ಜಗದೀಶ್ ಅವರಾದಿ. ಮಲ್ಲಪ್ಪ ಕೊಟ್ಟಿಗಿ, ರುದ್ರೇಶ್ ಗಣಚಾರಿ, ಚಂದ್ರಶೇಖರ್ ಸೋಮ್ಲಾಪುರ್, ಮಲ್ಲಿಕಾರ್ಜುನ ಹಿಂದುಪುರ್. ಮತ್ತಿತರ ಆಡಳಿತ ಮಂಡಳಿಯ ಸದಸ್ಯರು. ಮುಖ್ಯ ಗುರುಗಳಾದ ಅಮರೇಶ್ ಪಾಟೀಲ್, ಮಹಾಂತೇಶ್ ಗದ್ದಿ, ಇಬ್ರಾಹಿಂ, ಮೆಹಬೂಬ್ ಕೀಲೆದಾರ್, ಗಿರೀಶ್, ವೀರೇಶ್ ಮ್ಯಾಗೇರಿ.ಲಿಂಗರಾಜ್ ಮೂಲಿಮನಿ, ಸೇರಿದಂತೆ ಶಿಕ್ಷಕಿಯರು  ಹಾಗೂ ಸಿಬ್ಬಂದಿ ವರ್ಗ. ವಿದ್ಯಾರ್ಥಿ ಈ ವಿದ್ಯಾರ್ಥಿನಿಯರ ಪಾಲಕರು ಭಾಗವಹಿಸಿದ್ದರು.
Share This Article
error: Content is protected !!
";