ಬಳ್ಳಾರಿಯಲ್ಲಿ ವಿಜೃಂಭಣೆಯಿoದ ನಡೆದ ಶ್ರೀಕೃಷ್ಣ ಜಯಂತ್ಯೋತ್ಸವ ಶ್ರೀಕೃಷ್ಣನ ನ್ಯಾಯ-ನೀತಿ ಸಾರವನ್ನು ಪ್ರತಿಪಾದಿಸೋಣ: ಸಂಸದ ಈ.ತುಕಾರಾಂ

Vijayanagara Vani
ಬಳ್ಳಾರಿಯಲ್ಲಿ ವಿಜೃಂಭಣೆಯಿoದ ನಡೆದ ಶ್ರೀಕೃಷ್ಣ ಜಯಂತ್ಯೋತ್ಸವ ಶ್ರೀಕೃಷ್ಣನ ನ್ಯಾಯ-ನೀತಿ ಸಾರವನ್ನು ಪ್ರತಿಪಾದಿಸೋಣ: ಸಂಸದ ಈ.ತುಕಾರಾಂ
ಬಳ್ಳಾರಿ,
ಸಾಧನೆಯ ಹಾದಿಯಲ್ಲಿ ಜೀವನ ಸಾಗಿಸಲು ಶ್ರೀಕೃಷ್ಣನ ನ್ಯಾಯ-ನೀತಿಯ ಸಾರವನ್ನು ನಾವೆಲ್ಲರೂ ಪ್ರತಿಪಾದಿಸೋಣ ಎಂದು ಸಂಸದ ಈ.ತುಕಾರಾಂ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮoದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತ್ಯೋತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದ್ವಾಪರ ಯುಗದ ಮಹಾನ್ ಪುರುಷರಾದ ಶ್ರೀಕೃಷ್ಣನ ಆಶಾಕಿರಣ ಮತ್ತು ಮನೋಭಾವನೆಯನ್ನು ಪಾಲಿಸಿದರೆ, ಪ್ರತಿಯೊಬ್ಬರೂ ಯಶಸ್ಸಿನ ಹೆಜ್ಜೆ ಗುರುತನ್ನು ಕಾಣಬಹುದು ಎಂದು ತಿಳಿಸಿದರು.
ಭೂಮಿ ಮೇಲೆ ಜನಿಸಿ ಸಾಧನೆಗೈದ ಮಹಾತ್ಮರ ಸವಿನೆನಪಿಗಾಗಿ ಹಾಗೂ ಪ್ರತಿ ಸಮುದಾಯದ ಏಳಿಗೆಗಾಗಿ ಘನ ಸರ್ಕಾರವು ಎಲ್ಲಾ ಮಹನೀಯರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ನಾವೆಲ್ಲರೂ ಸಾಧಕರ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಸಮಾಜದ ಕಾರ್ಯಗಳು ಮನ್ನಣೆಗೆ ಬರಬೇಕೆಂದರೆ ಉತ್ತಮ ಕಾರ್ಯಗಳ ಜೊತೆಗೆ ಮಹಾನ್ ವ್ಯಕ್ತಿಗಳ ಜೀವನ-ಸಾಧನೆ ಕುರಿತು, ಹಳ್ಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹನೀಯರ ತತ್ವಾದರ್ಶಗಳನ್ನು ಸಾರಬೇಕು ಎಂದು ಪ್ರತಿಪಾದಿಸಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಅಧರ್ಮ ವಿರುದ್ಧ ನ್ಯಾಯದ ಜಯ ಸಾಧಿಸಲು ಶ್ರೀ ಕೃಷ್ಣ ಪರಮಾತ್ಮನು ಜನಿಸಿದ್ದು, ಧರ್ಮದ ಉಳಿವಿಗಾಗಿ ಶ್ರಮಿಸಿದರು ಎಂದು ತಿಳಿಸಿದರು.
ಭಗವದ್ಗೀತೆಯಲ್ಲಿ ಜೀವನದ ಸಾರಾಂಶ ಅಡಗಿದ್ದು, ಅವುಗಳನ್ನು ಭಕ್ತಿ ಭಾವನೆಯಿಂದ ಅನುಸರಿಸಿ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಮಾತನಾಡಿ, ಸಮಾಜದಲ್ಲಿನ ಅಂಕುಡೊoಡು ತಿದ್ದಿ, ಜನಸಾಮಾನ್ಯರನ್ನು ಕತ್ತಲಿನಿಂದ ಬೆಳಕಿನೆಡೆಗೆ, ಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯಲು ಮಹಾನ್ ವ್ಯಕ್ತಿಗಳು ಜನಿಸಿದ್ದು, ಅವರನ್ನು ದಾರಿದೀಪವಾಗಿ ಇರಿಸಿಕೊಂಡು, ಸುಸ್ಥಿರ ಸಮಾಜ ನಿರ್ಮಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬರೂ ಶ್ರೀ ಕೃಷ್ಣನ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಎಸ್‌ಜಿಟಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕರಾದ ಅಮಾತಿ ಬಸವರಾಜ ಅವರು ಶ್ರೀಕೃಷ್ಣನ ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬಳ್ಳಾರಿಯ ಲಕ್ಮೀ ಕಲಾಕ್ಷೇತ್ರ ತಂಡದ ಸಮೂಹ ನೃತ್ಯವು ಮನಮೋಹಕವಾಗಿ ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
*ಮೆರವಣಿಗೆ:*
ಶ್ರೀ ಕೃಷ್ಣ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಶ್ರೀಕೃಷ್ಣನ ಮೂರ್ತಿಯೊಂದಿಗೆ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಿ0ದ ಆರಂಭಗೊ0ಡು ವಿವಿಧ ಕಲಾ ತಂಡಗಳ ವಾದ್ಯಗಳೊಂದಿಗೆ ಗಡಿಗಿ ಚೆನ್ನಪ್ಪ ವೃತ್ತ, ಸ್ಟೇಷನ್ ರಸ್ತೆ, ಹೆಚ್.ಆರ್.ಗವಿಯಪ್ಪ ವೃತ್ತದ ಮುಖಾಂತರ ಜೋಳದರಾಶಿ ದೊಡ್ಡನಗೌಡ ರಂಗಮ0ದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿ ಬಂದು ಸಂಪನ್ನಗೊ0ಡಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆಯ ಸಭಾನಾಯಕ ಪಿ.ಗಾದೆಪ್ಪ, ವಕ್ಫ್ ಬೋರ್ಡ್ನ ಅಧ್ಯಕ್ಷ ಹುಮಾಯನ್ ಖಾನ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!