ಸಿರುಗುಪ್ಪ:ತಾಲೂಕಿನ ಕರೂರು ಗ್ರಾಮದ ಡಾ.ಬಿ.ಆರ್.ಆಂಬೇಡ್ಕರ್ ವಸತಿಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರೂರು ಹೋಬಳಿ ಘಟಕದವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಶ್ರೀ.ಪಿ.ಖಾಸಿಂ ಸಾಹೇಬ್ ಪ್ರಾಂಶುಪಾಲರು, ಡಾ.ಬಿ.ಆರ್.ಅಂಬೇಡ್ಕರ್ ವಸತಿಶಾಲೆ,ಕರೂರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಿಷ್ಠಿರುದ್ರಪ್ಪ ಇವರು ನೆರವೇರಿಸಿದರು.
ಗಡಿನಾಡಿನಲ್ಲಿ ಕನ್ನಡ ,ವೇಮನ- ಸರ್ವಜ್ಞ ವಿಚಾರಧಾರೆ ಮತ್ತು ಜೈನ ಸಾಹಿತ್ಯ ಈ ವಿಷಯಗಳ ಕುರಿತು ಜ್ಞಾನಭಾರತಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹರೀಶ್ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ.ಮಾಧವರೆಡ್ಡಿ, ರಾಜ್ಯಾಧ್ಯಕ್ಷರು,ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಜಿಲ್ಲಾ ಕಾರ್ಯದಶಿಗಳು, ಕಸಾಪ, ಬಳ್ಳಾರಿ ಜಿಲ್ಲೆ , ಶ್ರೀ.ಗಜೇಂದ್ರ. ತಾಲೂಕು ಗೌರವ ಕಾರ್ಯದಶಿಗಳು, ಕಸಾಪ, ಸಿರುಗುಪ್ಪ, ಶ್ರೀ.ಜೆ.ನರಸಿಂಹಮೂರ್ತಿ ನಿವೃತ್ತ ಶಿಕ್ಷಕರು ಹಾಗೂ ಹಾಸ್ಯಕಲಾವಿದರು, ಸಿರುಗುಪ್ಪ , ಶ್ರೀ. ಚಂದ್ರಶೇಖರ್ ಆಚಾರ್, ಬಳ್ಳಾರಿ ಗ್ರಾಮೀಣ ಘಟಕದ ಕಾರ್ಯದರ್ಶಿ , ಶಿಕ್ಷಣ ಪ್ರೇಮಿಗಳಾದ ಶ್ರೀ ಮೋಹನ್ ರೆಡ್ಡಿ ಇವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಸಾಪ ಕರೂರು ಘಟಕದ ನೂತನ ಅಧ್ಯಕ್ಷರಾಗಿ ಶ್ರೀ.ಬಿ.ನವೀನ್ ರೆಡ್ಡಿ, ಗೌರವ ಕಾರ್ಯದರ್ಶಿಗಳಾಗಿ ಶ್ರೀ.ನೀಲಕಂಠ.ಡಿ.ಕೆ. ಸಂಘಟನಾ ಕಾರ್ಯದರ್ಶಿಗಳಾಗಿ, ಶ್ರೀ.ರಾಮಾಂಜಿನಿ ರೆಡ್ಡಿ, ಇವರು ಪದಗ್ರಹಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರುಗುಪ್ಪ ಕಸಾಪ ಅಧ್ಯಕ್ಷರಾದ ಡಾII ಮಧುಸೂದನ ಕಾರಿಗನೂರು ಇವರು ವಹಿಸಿಕೊಂಡಿದ್ದರು.