ಬಳ್ಳಾರಿ,ಜ.04
ಸಿರುಗುಪ್ಪ ಪಟ್ಟಣದ ವಕ್ಫ್ ಸಂಸ್ಥೆ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ಸಮಿತಿಯ ಸಾಮಾನ್ಯ ಸದಸ್ಯರ ದಾಖಾಲಾತಿ ನೋಂದಣಿ ಪ್ರಕ್ರಿಯೆಯು ಜನವರಿ 06 ರಿಂದ ಜನವರಿ 31 ರವರೆಗೆ ನಡೆಯಲಿದೆ ಎಂದು ಸಿರುಗುಪ್ಪ ಪಟ್ಟಣದ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ನ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಜನವರಿ 06 ರಿಂದ ಜನವರಿ 20 ರವರೆಗೆ ಬೆಳಿಗ್ಗೆ 10:30 ಗಂಟೆಯಿoದ ಮಧ್ಯಾಹ್ನ 2:30 ಗಂಟೆ ರ ಅವಧಿಯಲ್ಲಿ ಹೊಸ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆ ವಿತರಣೆ ಮಾಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ 2 ಇತ್ತೀಚಿನ ಭಾವಚಿತ್ರಗಳು ಹಾಗೂ ರೂ.600/- ಶುಲ್ಕ ಹಾಗೂ ಅಧಿಕೃತ ವಿಳಾಸದ 02 ಗುರುತಿನ ಚೀಟಿಗಳೊಂದಿಗೆ ಜನವರಿ 20 ರೊಳಗೆ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ರ ಕಚೇರಿಗೆ ಸಲ್ಲಿಸಬೇಕು.
ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಜನವರಿ 25 ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬoಧಿಸಿದoತೆ ಆಕ್ಷೇಪಣೆ ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಜನವರಿ 27 ರಿಂದ ಜನವರಿ 28 ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2.30 ಗಂಟೆ ರೊಳಗೆ ಸಲ್ಲಿಸಬಹುದು.
ಆಕ್ಷೇಪಣೆಗಳ ವಿಚಾರಣೆ ಜನವರಿ 29 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:30 ಗಂಟೆ ರೊಳಗೆ ನಡೆಸಲಾಗುತ್ತದೆ. ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಜನವರಿ 31 ರಂದು ಮಧ್ಯಾಹ್ನ 3 ಗಂಟೆಗೆ ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ರ ಕಚೇರಿಯಲ್ಲಿ ಪ್ರಕಟಿಸಲಾಗುವುದು.
ಈಗಾಗಲೇ 2019-20ರಲ್ಲಿ ಸದಸ್ಯತ್ವ ಪಡೆದಿರುವ ಸಾಮಾನ್ಯ ಸದಸ್ಯರು ಒಟ್ಟು ಶುಲ್ಕ ರೂ.1000 (ಒಂದು ಸಾವಿರ ರೂಪಾಯಿ), ಆಧಾರ್ ಕಾರ್ಡ್ ಪ್ರತಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಮುಸ್ಲಿಂ ಈದ್ಗಾ ಮತ್ತು ಖಬರಸ್ತಾನ್(ಸುನ್ನಿ) ನೋಂದಣಿ ಅಧಿಕಾರಿಗಳ ಕಚೇರಿಯು ಸರ್ಕಾರಿ ರಜಾದಿನಗಳಲ್ಲಿಯೂ ಸಹ ಕಾರ್ಯನಿರ್ವಹಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.