ಬಳ್ಳಾರಿ,ಫೆ.07
ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರ ತೆಕ್ಕಲಕೋಟೆಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳುತ್ತಿರುವುದರಿಂದ ಫೆ.10 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ತೆಕ್ಕಲಕೋಟೆ ಪಟ್ಟಣದ ಗ್ರಾಮಗಳಾದ ಹೆರಕಲ್, ನಿಟ್ಟೂರು, ಉಡೆಗೋಳ, ನಡವಿ, ರುದ್ರಪಾದ ಮತ್ತು ಮಣ್ಣೂರು ಸೂಗುರು ಗ್ರಾಮದ ಐಪಿ ಸೆಟ್ ಫೀಡರ್ಸ್ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ.
*ಸೂಚನೆ:*
ತುರ್ತು ನಿರ್ವಾಹಣೆ ಕಾರ್ಯ ಮುಗಿಯುವವರೆಗೂ ಅಥವಾ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ಕೆಲಸಗಳನ್ನು ಮಾಡಬಾರದು ಎಂದು ಸಿರುಗುಪ್ಪ ಜೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.