ಸಿರುಗುಪ್ಪ.ಜು.೧೨:- ಇಷ್ಟಲಿಂಗಪೂಜೆಯು ಲಿಂಗಾಯಿತ ದರ್ಮದಲ್ಲಿ ಮಹತ್ವವಾದ ಆಚರಣೆಯಾಗಿದೆ, ಇದು ದೇವರನ್ನು ಸಾಕಾರ ರೂಪದಲ್ಲಿ ಪೂಜಿಸುವುದಕ್ಕಿಂತ ಹೆಚ್ಚಾಗಿ ತನ್ನೊಳಗೆ ನೆಲೆಸಿರುವ ದೈವವತ್ವವನ್ನು ಪೂಜಿಸುವುದಾಗಿದೆ. ಈ ಪೂಜೆಯು ಪ್ರತಿಯೊಬ್ಬರು ತನ್ನ ಆತ್ಮ ಲಿಂಗದೊAದಿಗೆ ಐಕ್ಯತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಆಧ್ಯಾತ್ಮಿಕ ಬೆಳವಣಿಗೆಗೆ ಮತ್ತು ಮಕ್ಷದ ಕಡೆಗೆ ಕೊಂಡ್ಯೊಯ್ಯುವ ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ರೀಶೈಲ ಪೀಠದ ಶ್ರೀ ೧೦೦೮ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆಯ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿ ಆಶೀರ್ವಚನ ನೀಡಿದ ಶ್ರೀಗಳು ಇಷ್ಟಲಿಂಗವು ದೇಹದೊಳಗಿರುವ ದೈವತ್ವದ ಸಂಕೇತವಾಗಿದೆ, ಇದನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನಳೊಗೆ ನೆಲೆಸಿರುವ ದೈವತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇಷ್ಟಲಿಂಗ ಪೂಜೆಯಿಂದ ಮನಸ್ಸನ್ನು ಏಕಾಗ್ರತೆ ಗೊಳಿಸಲು ಸಹಾಯವಾಗುತ್ತದೆ, ಲಿಂಗದ ಮೇಲೆ ಗಮನ ಕೇಂದ್ರೀಕರಿಸುವುದರಿAದ ವ್ಯಕ್ತಿಯು ತನ್ನ ಆಲೋಚನೆಗಳನ್ನು ನಿಯಂತ್ರಿಸಲು ಹಾಗೂ ಧ್ಯಾನದ ಸ್ಥಿತಿಯನ್ನು ತಲುಪಲು ಸಾರ್ಧಯವಾಗುತ್ತದೆ. ಇಷ್ಟಲಿಂಗ ಪೂಜೆಯಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲ, ಎಲ್ಲರು ಸಮಾನವಾಗಿ ಪೂಜಿಸಬೇಹುದು, ಇದು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುತ್ತದೆ. ನಿರಂತರ ಇಷ್ಟಲಿಂಗ ಪೂಜೆಯಿಂದ ವ್ಯಕ್ತಿಯು ಆದ್ಯಾತ್ಮಿಕವಾಗಿ ಬೆಳೆಯುತ್ತಾನೆ, ಮೋಕ್ಷದ ಕಡೆಗೆ ಸಾಗುತ್ತಾನೆ. ಇಷ್ಟಲಿಂಗ ಪೂಜೆಯು ವ್ಯಕ್ತಿಯ ತನ್ನ ಕಾಯಕದಲ್ಲಿ ನಿಷ್ಟೆಯಿಂದರಲು ಪ್ರೇರೇಪಿಸುತ್ತದೆ. ಇಷ್ಟಲಿಂಗ ಪೂಜೆಯು ಬಸವಣ್ಣನವರ ತತ್ವಗಳ ಆಧಾರದ ಮೇಲೆ ನಿಂತಿದೆ ಆದ್ದರಿಂದ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆಯನ್ನು ಮಾಡಿ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಪಡೆಯಬೇಕೆಂದು ಹೇಳಿದರು.
ರೌಡಕುಂದಿ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಚಾರ್ಯ ಸ್ವಾಮೀಜಿ, ಬೆಂಗಳೂರು ಶಿವಗಂಗಾಕ್ಷೇತ್ರದ ಷ.ಬ್ರ ಡಾ|| ಮಲಯ ಶಾಂತಮುನಿ ಶಿವಾಚಾರ್ಯರು ಇದ್ದರು, ವಿವಿಧ ಗ್ರಾಮಗಳ ಭಕ್ತರು ಇಷ್ಟಲಿಂಗಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.