Ad image

ಸಾಮಾಜಿಕ ಪರಿಶೋಧನೆ ತರಬೇತಿ

Vijayanagara Vani
ಸಾಮಾಜಿಕ ಪರಿಶೋಧನೆ ತರಬೇತಿ
ಮಡಿಕೇರಿ ಜು.10ಸರ್ಕಾರದ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮಸಭೆ ಅತ್ಯವಶ್ಯಕ ಎಂದು ಕೊಡಗು ಜಿ.ಪಂ. ಉಪ ಕಾರ್ಯದರ್ಶಿ ಧನರಾಜು ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯ ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. ಇಂತಹ ಯೋಜನೆಗಳು ಮತ್ತು ಅದಕ್ಕೆ ವಿನಿಯೋಗಿಸಿದ ಹಣವು ಸೂಕ್ತವಾಗಿ ಬಳಕೆಯಾಗಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವುದು ಸಾಮಾಜಿಕ ಪರಿಶೋಧನೆಯ ಆದ್ಯ ಕರ್ತವ್ಯವಾಗಿದೆ.
ಇಂತಹ ವರದಿಗಳನ್ನು ಗ್ರಾಮಸಭೆಯ ಮೂಲಕ ಪರಿಶೀಲಿಸುವುದು ತಾಲೂಕು ನೋಡಲ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಗ್ರಾಮಸಭೆಯನ್ನು ಕೈಗೊಳ್ಳುವ ಬಗೆ ಮತ್ತು ವರದಿಗಳನ್ನು ಪರಿಶೀಲಿಸುವ ಕುರಿತು ತರಬೇತಿ ಹಮ್ಮಿಕೊಂಡಿದ್ದು, ಇದರ ಉಪಯೋಗವನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲ್ಪಟ್ಟ ತಾಲೂಕು ಮಟ್ಟದ ಅಧಿಕಾರಿಗಳು ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ 15 ನೇ ಹಣಕಾಸು ಯೋಜನೆಯ ಬಗ್ಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಮಹಾತ್ಮಗಾಂಧಿ ನರೇಗಾ ಯೋಜನೆಯ ಕುರಿತು ತಾಲೂಕು ವ್ಯವಸ್ಥಾಪಕರಾದ ಸತೀಶ್, ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಪಾತ್ರ ಕುರಿತು ಜಿಲ್ಲಾ ಐಇಸಿ ಸಂಯೋಜಕ ಪವನ್ ಕುಮಾರ್, ಪಿ.ಎಂ.ಪೆಷಣ್ ಅಭಿಯಾನ್ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಕುರಿತಂತೆ ಸಾಮಾಜಿಕ ಪರಿಶೋಧನೆಯ ಜಿಲ್ಲಾ ವ್ಯವಸ್ಥಾಪಕರಾದ ಪ್ರೀತಂ ಪೆನ್ನಪ್ಪ ಮಾಹಿತಿ ನೀಡಿದರು. ಸ್ವಚ್ಛ ಭಾರತ್ ಮಿಷನ್ (ಗ್ರಾ.) ಜಿಲ್ಲಾ ಸಮಾಲೋಚಕಿ ಹರ್ಷಿತ ಎ.ಆರ್.ಪ್ರಾರ್ಥಿಸಿದರು.
ಜಿ.ಪಂ.ಸಹಾಯಕ ಕಾರ್ಯದರ್ಶಿ ಅಬ್ದುಲ್ ನಾಬಿ, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್ ಇತರರು ಇದ್ದರು.

Share This Article
error: Content is protected !!
";