Ad image

ನಮ್ಮ ರಾಷ್ಟ್ರಪಿತನ ಕೆಲವು ವಿಶೇಷಗಳು.

Vijayanagara Vani
ನಮ್ಮ ರಾಷ್ಟ್ರಪಿತನ ಕೆಲವು ವಿಶೇಷಗಳು.

*ಜಗತ್ತಿನ ೧೦೦ ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಭಾವಚಿತ್ರ ಇರುವ ಪೋಸ್ಟಲ್ ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿವೆ. ಮೊಟ್ಟ ಮೊದಲು ಬಿಡುಗಡೆಗೊಳಿಸಿದ ದೇಶ ಪೋಲಂಡ್

*ಭಾರತ ಅಂಚೆ ಇಲಾಖೆಯು ಇಲ್ಲಿಯವರೆಗೂ ಗಾಂಧೀಜಿಯ ಭಾವಚಿತ್ರ ಇರುವ ಸುಮಾರು ೪೦ ಕ್ಕೂ ಹೆಚ್ಚು ಸ್ಟಾಂಪ್ ಮತ್ತು ೨೦೦ ಕ್ಕೂ ಹೆಚ್ಚು ಪೋಸ್ಟಲ್ ಎನ್ವಲಪ್‌ಗಳನ್ನು ಬಿಡುಗಡೆಗೊಳಿಸಿದೆ.

* ಸುಮಾರು ೪೦ ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಭಾವಚಿತ್ರ ಇರುವ ನಾಣ್ಯಗಳನ್ನು ಬಿಡುಗಡೆಗೊಳಿಸಿವೆ.

*ಸುಮಾರು ೮೦ ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ವಿವಿಧ ರೀತಿಯ ಪ್ರತಿಮೆಗಳಿವೆ.

* ಗಾಂಧೀಜಿಯವರ ಹೆಸರಿನ ರಸ್ತೆಗಳು ಸುಮಾರು ೪೦ ಕ್ಕೂ ಹೆಚ್ಚು ದೇಶಗಳಲ್ಲಿವೆ‌.

* ಗಾಂಧೀಜಿ ಮರಣ ಹೊಂದಿದ ದಿನ ಶ್ರೀಲಂಕಾ ಸರಕಾರವು ಶೋಕಾಚರಣೆ ಮಾಡಿ ತನ್ನ ರೇಡಿಯೋ ಪ್ರಸಾರವನ್ನು ೨೪ ಗಂಟೆಗಳ ಕಾಲ ಬಂದ್ ಮಾಡಿತ್ತು.

* ಗಾಂಧೀಜಿಯವರು ಬದುಕಿದ್ದಾಗಲೇ ಅವರ ಜೀವನ ಚರಿತ್ರೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ರೋಮನ್ ರೋಲ್ಯಾಂಡ್ ಅವರಿಂದ ಬರೆಯಲ್ಪಟ್ಟಿತ್ತು.

* ಗಾಂಧೀಜಿಯವರು ತಮ್ಮ ಎರಡೂ ಕೈಗಳಿಂದ ಬರೆಯುತ್ತಿದ್ದರು. ಹಿಂದ್ ಸ್ವರಾಜ್ ಪುಸ್ತಕದ ಕೆಲವು ಪುಟಗಳನ್ನು ಎಡಗೈಯಿಂದ ಬರೆದಿದ್ದರು.

* ಗಾಂಧೀಜಿಯುವರು ತಮ್ಮ ಜೀವಮಾನದಲ್ಲೇ ವಿಮಾನದಲ್ಲಿ ಒಂದು ಸಾರಿಯೂ ಪ್ರಯಾಣಿಸಲಿಲ್ಲ.

* ತಮ್ಮ ಸಮಕಾಲೀನ‌ ಜಗತ್ತಿನ ನಾಯಕರಲ್ಲೇ ಅತ್ಯಂತ ಹೆಚ್ಚು ಫೋಟೋಗ್ರಾಫ್‌ಗಳನ್ನು ಹೊಂದಿದ ವ್ಯಕ್ತಿ ಗಾಂಧೀಜಿ.

* ತಮ್ಮ ಜೀವಮಾನದಲ್ಲೇ ಒಮ್ಮೆಯೂ ಗಾಂಧೀಜಿ ಅಮೇರಿಕಾಕ್ಕೆ ಭೇಟಿ ನೀಡಲಿಲ್ಲ. ಆದರೆ ಅಮೇರಿಕಾ ಒಂದರಲ್ಲೇ ಗಾಂಧೀಜಿಯವರ ೩೦ ಕ್ಕೂ ಹೆಚ್ಚು ಪ್ರತಿಮೆಗಳಿವೆ.

* ೧೯೯೯ ರಲ್ಲಿ ಟೈಮ್ಸ್ ಮ್ಯಾಗ್ಜೀನ್ ನಡೆಸಿದ ‘ಶತಮಾನದ ವ್ಯಕ್ತಿ’ ಸ್ಪರ್ಧೆಯಲ್ಲಿ ಗಾಂಧೀಜಿಗೆ ಎರಡನೇ ಸ್ಥಾನ. ಮೊದಲ ಸ್ಥಾನ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿದ ಅಲ್ಬರ್ಟ್ ಐನಸ್ಟೀನ್.

* ಗಾಂಧೀಜಿಯವರಿಗೆ ಮುಂದಿನ ಎರಡು ಹಲ್ಲುಗಳು ಹರೆಯದಲ್ಲೇ ಬಿದ್ದು ಹೋಗಿದ್ದವು. ತಿನ್ನುವುದಕ್ಕಾಗಿ ಎರಡು ಹಲ್ಲುಗಳ ಸೆಟ್ ಒಂದನ್ನು ಮಾಡಿಸಿಕೊಂಡಿದ್ದರು. (ದ.ಆಫ್ರಿಕಾದಲ್ಲಿ ಬಿಳಿಯರಿಂದ ದಾಳಿಗೊಳಗಾದಾಗ ಎರಡು ಹಲ್ಲುಗಳು ಉದುರಿದ್ದವು).

* ಅಮೇರಿಕಾದ ಟೈಮ್ ಮ್ಯಾಗ್ಝೀನ್ ೧೯೩೦ ರಲ್ಲಿ ‘ವರ್ಷದ ವ್ಯಕ್ತಿ’ ಎಂದು ಗಾಂಧೀಜಿಯರನ್ನು ಘೋಷಿಸಿ ಮುಖಪುಟದಲ್ಲಿ ಅವರ ಭಾವಚಿತ್ರ ಪ್ರಕಟಿಸಿತ್ತು. ಇಲ್ಲಿಯವರೆಗೂ ಭಾರತದ ಯಾವ ವ್ಯಕ್ತಿಗೂ ಈ ಗೌರವ ಸಂದಿಲ್ಲ.

* ಯಾವುದೇ ಅಧಿಕಾರದಲ್ಲಿಲ್ಲದ ಗಾಂಧೀಜಿ ತೀರಿಕೊಂಡಾಗ ವಿಶ್ವಸಂಸ್ಥೆಯು ತನ್ನ ಎಲ್ಲ ೫೫ ಸದಸ್ಯ ರಾಷ್ಟ್ರಗಳ ಧ್ವಜವನ್ನು ಅರ್ಧಕ್ಕೆ ಇಳಿಸಿ ಶೋಕಾಚರಣೆ ಮಾಡಿತ್ತು. ಇದು ಇತಿಹಾಸದಲ್ಲೇ ಮೊದಲ ಬಾರಿ ಮತ್ತು ಕೊನೆಯ ಬಾರಿ ನಡೆದ ಘಟನೆ. ಮತ್ತೊಬ್ಬರಿಗೆ ಈ ರೀತಿ ಗೌರವ ಸಿಕ್ಕಿಲ್ಲ.

* ಗಾಂಧೀಜಿಯವರು ಯಾವ ದೇಶದ ವಿರುದ್ಧ ಜೀವಮಾನವೀಡಿ ಹೋರಾಡಿದರೋ ಅದೇ ದೇಶದ (ಇಂಗ್ಲೆಂಡಿನ ಲಂಡನ್ ಸ್ಕ್ವೈರ್) ಪಾರ್ಲಿಮೆಂಟ್ ಮುಂದೆ ಗಾಂಧೀಜಿಯ ಪ್ರತಿಮೆ ಸ್ಥಾಪಿಸಲ್ಪಟ್ಟಿದೆ.

*ಜಗತ್ತಿನಲ್ಲೇ ವಿಶ್ವಸಂಸ್ಥೆಯಿಂದ ಆಚರಿಸಲ್ಪಡುವ ಜನ್ಮದಿನ ಕೇವಲ ‘ಗಾಂಧಿ ಜನ್ಮದಿನ’ ಮಾತ್ರ. ವಿಶ್ವಸಂಸ್ಥೆಯು ಗಾಂಧೀ ಜನ್ಮದಿನವನ್ನು ‘ವಿಶ್ವ ಅಹಿಂಸಾ ದಿನ’ ಎಂದು ಘೋಷಿಸಿದೆ.

* ಗಾಂಧೀಜಿಯವರು ಕುಷ್ಠರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು‌. ತಮ್ಮ ಆಶ್ರಮದಲ್ಲಿ ಪರಚುರೆ ಶಾಸ್ತ್ರಿ ಎಂಬ ವ್ಯಕ್ತಿಯ ಕುಷ್ಠರೋಗವನ್ನು ಶುಶ್ರೂಷೆ ಮಾಡಿದ್ದರು. ಈ ನೆನಪಿಗಾಗಿ ಭಾರತ ಸರ್ಕಾರ ‘ಕುಷ್ಠರೋಗ ದಿನ’ ಎಂದು ಆಚರಿಸುತ್ತದೆ‌.

* ಗಾಂಧೀಜಿಯಿಂದ ಪ್ರೇರಣೆಗೊಂಡು ನಾಲ್ಕು ಖಂಡಗಳ ಸುಮಾರು ೨೦ ಕ್ಕೂ ಹೆಚ್ಚು ದೇಶಗಳಲ್ಲಿ ಮಾನವ ಹಕ್ಕುಗಳ ಹೋರಾಟಗಳು ನಡೆದಿವೆ‌

* ಸುಮಾರು ೬ ಬಾರಿ ನೊಬೆಲ್ ನಾಮಿನೇಟ್ ಗೊಂಡಿರುವ ಗಾಂಧೀಜಿಗೆ ನೊಬೆಲ್ ಸಿಗಲಿಲ್ಲ. ಕೊನೆಗೆ ನೊಬೆಲ್ ಸಂಸ್ಥೆ ಈ ವಿಷಯವಾಗಿ ಕ್ಷಮೆ ಕೇಳಿ ‘ಅವರು ನೊಬೆಲ್ ಗಿಂತ ದೊಡ್ಡವರು’ ಎಂದು ಹೇಳಿತು.

*ಗಾಂಧೀಜಿಯವರನ್ನು ಒಮ್ಮೆಯೂ ಭೇಟಿಯಾಗದ ನೆಲ್ಸನ್ ಮಂಡೇಲಾ (ದ.ಆಫ್ರಿಕಾದ ಗಾಂಧಿ) ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ (ಅಮೇರಿಕಾದ ಗಾಂಧಿ) ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ‌.

* ದ.ಆಫ್ರಿಕಾದ ಜೈಲಿನಲ್ಲಿ ನೇಕಾರ ಕೆಲಸ ಆರಿಸಿಕೊಂಡ ಗಾಂಧೀಜಿಯವರು ಎರಡು ತುದಿ ಚೂಪಾಗಿರುವ ಟೋಪಿ ಒಂದನ್ನು ಹೊಲಿದರು. ಅದೇ ಮುಂದೆ ಗಾಂಧಿ ಟೋಪಿ ಎಂದು ಪ್ರಸಿದ್ಧವಾಗಿ ಈಗಲೂ ಚಾಲ್ತಿಯಲ್ಲಿದೆ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಮತ್ತು ಅವರ ಸಾವಿರಾರು ಸಹಚರರು ತಮ್ಮ ಪ್ರಸಿದ್ಧ ವಾಷಿಂಗ್ಟನ್ ಯಾತ್ರೆಯಲ್ಲಿ ಗಾಂಧಿ ಟೋಪಿ ಧರಿಸಿ ಹೋರಾಟಕ್ಕೆ ಇಳಿದಿದ್ದರು. ಆದರೆ ಗಾಂಧೀಜಿಯವರಿಗೆ ನಾವು ನಿಮ್ಮ ವಿರುದ್ಧ ಸಿದ್ಧಾಂತಿಗಳು ಎಂದು ತಿಳಿಸಲು ಕೆಲವರು ಗಾಂಧಿ ಟೋಪಿಗೆ ವಿರುದ್ಧವಾದ ಬಣ್ಣದ (ಕಪ್ಪು ಬಣ್ಣದ) ಟೋಪಿ ಧರಿಸಿ ಕೆಲವು ದಾರಿ ತಪ್ಪಿದವರು ಹಾರಾಟ, ಚೀರಾಟ ಮಾಡಿದರು. ಈಗಲೂ ಮಾಡುತ್ತಿದ್ದಾರೆ.

#ನಮ್ಮ_ಬಾಪು_ನಮ್ಮ_ಹೆಮ್ಮೆ ನಂದೀಶ ಶಿಕ್ಷಕರು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು

Share This Article
error: Content is protected !!
";