Ad image

ತಾಲೂಕಿನಾದ್ಯಂತ 9ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ:

Vijayanagara Vani
ತಾಲೂಕಿನಾದ್ಯಂತ 9ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ:

ಸಿರುಗುಪ್ಪ.- ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿಯವರೆಗೆ 9ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಕಾರ್ಯ ಮುಗಿದಿದ್ದು, ಹಚ್ಚೊಳ್ಳಿ, ಸಿರುಗುಪ್ಪ, ಕರೂರು, ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಳೆಯಾಶ್ರಿತ ಜಮೀನುಗಳಲ್ಲಿ ಹತ್ತಿ ಬಿತ್ತನೆ ಕಾರ್ಯ ನಡೆದಿದ್ದು, ಶನಿವಾರವೂ ತಾಲೂಕಿನಾದ್ಯಂತ ಮಳೆಯಾಶ್ರಿತ ಪ್ರದೇಶದಲ್ಲಿ ಹತ್ತಿ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ ಬೆಳೆಯ ಬಿತ್ತಿನ ಕಾರ್ಯ ಜೋರಾಗಿ ನಡೆದಿದೆ.
ತಾಲೂಕಿನಲ್ಲಿ ಒಟ್ಟು 90,101 ಹೆಕ್ಟೇರ್ ಕೃಷಿ ಯೋಗ್ಯ ಜಮೀನು ಇದ್ದು, ಇದರಲ್ಲಿ ಮುಂಗಾರಿನಲ್ಲಿ 60ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ, ಮೆಕ್ಕೆಜೋಳ, ಜೋಳ, ಸಜ್ಜೆ, ನವಣೆ, ಕಬ್ಬು, ತೊಗರಿ ಬೆಳೆಯನ್ನು ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹೊಂದಿದ್ದು, ಇಲ್ಲಿಯವರೆಗೆ ಸುಮಾರು 10-12ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಕಾರ್ಯ ಮುಗಿದಿದ್ದು, ಇನ್ನುಳಿದಂತೆ ವಿವಿದ ಬೆಳೆಗಳ ಬಿತ್ತನೆ ಕಾರ್ಯ ಮುಗಿದಿದ್ದು, ತುಂಗಭದ್ರ ನದಿ ಮತ್ತು ವೇದಾವತಿ ಹಗರಿನದಿ ಹಾಗೂ ದೊಡ್ಡಹಳ್ಳ, ಹಿರೇಹಳ್ಳ, ಕೆಂಚಿಹಳ್ಳದ ನೀರನ್ನು ಬಳಸಿ ಮುಖ್ಯವಾಗಿ ಭತ್ತ ಬೆಳೆಯುವ ರೈತರು ಈಗಾಗಲೆ ಭತ್ತದ ಸಸಿಮಡಿಗಳನ್ನು ಬೆಳೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬೀಜ ಬಿತ್ತನೆ ಮಾಡುವ ರೈತರು ಬೀಜೋಪಚಾರ ಮಾಡಿ ಬಿತ್ತನೆಯನ್ನು ಮಾಡಬೇಕು, ಇದರಿಂದ ಬೆಳೆಗಳಿಗೆ ಬರುವ ರೋಗವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹಚ್ಚೊಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಾಲಾಜಿನಾಯ್ಕ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಇಲ್ಲಿಯವರೆಗೆ 9ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಮುಖ್ಯವಾಗಿ ರೈತರು ಹತ್ತಿ ಬೀಜವನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಅಲ್ಲದೆ ವಿವಿಧ ಬೆಳೆಗಳ ಬೀಜಗಳನ್ನು ರೈತರು ನಾಟಿ ಮಾಡಿದ್ದು, ಶನಿವಾರವೂ ರೈತರು ಬೀಜ ನಾಟಿಕಾರ್ಯದಲ್ಲಿ ತೊಡಗಿದ್ದಾರೆಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ತಿಳಿಸಿದರು.
 ಸಿರುಗುಪ್ಪ: ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಹತ್ತಿಬೀಜ ನಾಟಿಯಲ್ಲಿ ತೊಡಗಿರುವ ರೈತ ಮಹಿಳೆಯರು
. ಸಿರುಗುಪ್ಪ: ತಾಲೂಕಿನ ಹಚ್ಚೊಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಕಾರ್ಯದಲ್ಲಿ ತೊಡಗಿರುವ ರೈತರು.
 ಸಿರುಗುಪ್ಪ: ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಬಿತ್ತನೆಗಾಗಿ ಬೀಜೋಪಚಾರ ಮಾಡುತಿರುವ ರೈತ.

- Advertisement -
Ad imageAd image
Share This Article
error: Content is protected !!
";