ರಾಯಚೂರು,ಜೂ.05 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ (4 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳು ಸೇರಿ) ತೊಗರಿ-2799.20ಕ್ವಿಂ, ಸಜ್ಜೆ- 72.63ಕ್ವಿಂ ಭತ್ತ-768ಕ್ವಿಂ, ಹೆಸರು-28.45ಕ್ವಿಂ, ಮೆಕ್ಕೆಜೋಳ-17.60ಕ್ವಿಂ ಹಾಗೂ ಸೂರ್ಯಕಾಂತಿ-43.60ಕ್ವಿAಟಾಲ ಸೇರಿ ಒಟ್ಟು:3729.48 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಮುಂದುವರೆದು ಇಂದಿನವರೆಗೆ ಜಿಲ್ಲೆಯಲ್ಲಿ ಮೇಲಿನ ಎಲ್ಲಾ ಬಿತ್ತನೆ ಬೀಜಗಳು ಸೇರಿ ಒಟ್ಟು 1933.66 ಕ್ವಿಂಟಾಲ್ ನÀಷ್ಟು ವಿತರಣೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರಾಯಚೂರು ತಾಲೂಕಿನಲ್ಲಿ ತೊಗರಿ – 153.40ಕ್ವಿಂ, ಭತ್ತ-208ಕ್ವಿಂ ಹಾಗೂ ಹೆಸರು-1.45 ಕ್ವಿಂಟಾಲ ಸೇರಿ ಒಟ್ಟು 363.75 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 136ಕ್ವಿಂ ನಷ್ಟು ವಿತರಣೆಯಾಗಿರುತ್ತದೆ. ಮಾನವಿ ತಾಲೂಕಿನಲ್ಲಿ ತೊಗರಿ – 68.80ಕ್ವಿಂ, ಭತ್ತ-85ಕ್ವಿಂ ಹಾಗೂ ಹೆಸರು-1.80ಕ್ವಿಂಟಾಲ ಸೇರಿ ಒಟ್ಟು 155.60 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 80.85 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ದೇವದುರ್ಗ ತಾಲೂಕಿನಲ್ಲಿ ತೊಗರಿ – 65ಕ್ವಿಂ, ಭತ್ತ-258.80ಕ್ವಿಂ ಹಾಗೂ ಹೆಸರು-7.20 ಕ್ವಿಂಟಾಲ ಸೇರಿ ಒಟ್ಟು 331ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 173.55 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ. ಸಿರವಾರ ತಾಲೂಕಿನಲ್ಲಿ ತೊಗರಿ–445.60ಕ್ವಿಂ, ಭತ್ತ-80 ಕ್ವಿಂ, ಸಜ್ಜೆ-1.80 ಕ್ವಿಂ, ಸೂರ್ಯಕಾಂತಿ – 3.30ಕ್ವಿಂ ಹಾಗೂ ಹೆಸರು-3ಕ್ವಿಂಟಾಲ ಸೇರಿ ಒಟ್ಟು 535.95 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ ಮತ್ತು ಹೆಸರು ಸೇರಿ 276.20 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಲಿಂಗಸುಗೂರು ತಾಲೂಕಿನಲ್ಲಿ ತೊಗರಿ–749ಕ್ವಿಂ, ಸಜ್ಜೆ–10.74ಕ್ವಿಂ, ಸೂರ್ಯಕಾಂತಿ-4.20ಕ್ವಿA ಹಾಗೂ ಹೆಸರು -3.00 ಕ್ವಿಂಟಾಲ ಸೇರಿ ಒಟ್ಟು 766.94 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಸೇರಿ 548.69 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಮಸ್ಕಿ ತಾಲೂಕಿನಲ್ಲಿ ತೊಗರಿ–856ಕ್ವಿಂ, ಭತ್ತ-85ಕ್ವಿಂ, ಸಜ್ಜೆ–28.95ಕ್ವಿಂ, ಸೂರ್ಯಕಾಂತಿ-15ಕ್ವಿA, ಮೆಕ್ಕೆಜೋಳ-4.00ಕ್ವಿಂ ಹಾಗೂ ಹೆಸರು-3.60ಕ್ವಿಂಟಾಲ ಸೇರಿ ಒಟ್ಟು 992.55 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ ಸೇರಿ 500.83 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
ಸಿಂಧನೂರು ತಾಲೂಕಿನಲ್ಲಿ ತೊಗರಿ–267.60ಕ್ವಿಂ, ಭತ್ತ-245ಕ್ವಿಂ, ಸಜ್ಜೆ–27.99ಕ್ವಿಂ, ಸೂರ್ಯಕಾಂತಿ-21.10ಕ್ವಿA, ಮೆಕ್ಕೆಜೋಳ-13.60ಕ್ವಿಂ ಹಾಗೂ ಹೆಸರು-8.40ಕ್ವಿಂ ಕ್ವಿಂಟಾಲ ಸೇರಿ ಒಟ್ಟು 583.69 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಭತ್ತ, ತೊಗರಿ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಹೆಸರು ಸೇರಿ 217.54ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ರಾಯಚೂರು ಹಾಗೂ ಸಹಕಾರಿ ಸಂಘಗಳಲ್ಲಿ 10673 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 99018.29 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 109691.72 ಮೆಟ್ರಿಕ್ ಟನ್‌ನಷ್ಟು ಇಲ್ಲಿಯವರೆಗೆ ರಸಗೊಬ್ಬರ ದಾಸ್ತಾನು ಲಭ್ಯವಿದೆ.