ವಿಶೇಷ ಲೇಖನ ಅಂಗಾoಗ ದಾನ ಮಾಡಿ ; ಮರಣದ ನಂತರವೂ ಜೀವಿಸಿ….

Vijayanagara Vani
ವಿಶೇಷ ಲೇಖನ ಅಂಗಾoಗ ದಾನ ಮಾಡಿ ; ಮರಣದ ನಂತರವೂ ಜೀವಿಸಿ….
ಜಗತ್ತಿನಲ್ಲಿ ಜನಿಸಿದ ಪ್ರತೀ ಜೀವಿಯೂ ಮರಣ ಹೊಂದಲೇ ಬೇಕು ಇದು ನಿಸರ್ಗ ನಿಯಮ.. ಜಗತ್ತಿನಲ್ಲಿ ಯಾವುದೇ ಸಾಧನೆಗಳನ್ನು ಮಾಡಲು ದೇಹ ಅಗತ್ಯ. ಆದರೆ ಜೀವಿತಾವಧಿಯಲ್ಲಿ ಯಾವುದೇ ಸಾಧನೆ ಮಾಡದೇ ಇದ್ದರೂ ವ್ಯರ್ಥವಾಗಿ ಸಾಯುವ ಬದಲು, ಮರಣದ ನಂತರವಾದರೂ ತಮ್ಮ ಅಂಗಾoಗಗಳನ್ನು ದಾನ ಮಾಡುವುದರ ಮೂಲಕ ಮತ್ತೊಬ್ಬರ ದೇಹದ ಮೂಲಕ ಪ್ರತಿಯೊಬ್ಬರೂ ಸದಾ ಜೀವಂತವಾಗಿರಬಹುದು.
ಪ್ರತಿ ವಷð ಅನೇಕ ಜನರು ಅಂಗಾoಗ ವೈಫಲ್ಯದಿಂದ ಮರಣ ಹೊಂದುತ್ತಿದ್ದು, ಭಾರತದಾದ್ಯಂತ ಪ್ರತಿ ವರ್ಷ ಅಂದಾಜು 5 ಲಕ್ಷ ಅಂಗಾoಗಗಳ ಅಗತ್ಯವಿದೆ. ಆದರೆ ಪ್ರಸ್ತುತ ಕೇವಲ 2-3 ಪ್ರತಿಶತದಷ್ಟು ಬೇಡಿಕೆಯನ್ನು ಮಾತ್ರ ಪೂರೈಸಲಾಗುತ್ತಿದೆ. ಮೆದುಳು ನಿಷ್ಕಿçಯೆಗೊಂಡ ಯಾವುದೇ ವ್ಯಕ್ತಿಯ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಅಂಗಾoಗ ದಾನ ಮಾಡಬಹುದಾಗಿದ್ದು, ಇದು ಕಾನೂನು ಬದ್ದವಾಗಿದೆ. ಯಾವುದೇ ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಅಂಗಾoಗ ಮತ್ತು ಅಂಗಾoಶ ದಾನ ಮಾಡಬಹುದಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಂಗಾoಗ ದಾನ ಮಾಡಲು ಇದುವರೆಗೆ 483 ಜನ ನೊಂದಾಯಿಸಿಕೊoಡಿದ್ದು, ಇದರಲ್ಲಿ 18 ವರ್ಷದಿಂದ 60 ವರ್ಷ ಮೇಲ್ಪಟ್ಟ ವಯೋಮಿತಿಯವರೂ ಕೂಡಾ ಇದ್ದು, ನೋಂದಣಿ ಮಾಡಿದವರಲ್ಲಿ ಮಹಿಳೆಯರ ಸಂಖ್ಯೆಯೇ ಅತ್ಯಧಿಕವಾಗಿರುವುದು ವಿಶೇಷವಾಗಿದೆ.
ಜಿಲ್ಲೆಯಲ್ಲಿ ಅಂಗಾoಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರಲ್ಲಿ, 283 ಸಂಖ್ಯೆಯ ಹೃದಯ, 209 ಕರುಳು 278 ಕಿಡ್ನಿ, 243 ಲಿವರ್, 221 ಶ್ವಾಸಕೋಶ, 211 ಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಲು ನೋಂದಾಯಿಸಿಕೊAಡಿದ್ದು, ಇದರ ಜೊತೆಗೆ ಈ ಅಂಗಗಳ ಅಂಗಾoಶಗಳಾದ ರಕ್ತನಾಳಗಳು 179, ಮೂಳೆ 167, ಕಾರ್ಟಿಲೇಜ್ 167, ಎರಡು ಕಣ್ಣುಗಳ ಕಾರ್ನಿಯಾ 433, ಹೃದಯದ ಕವಾಟಗಳು 188 ಮತ್ತು 177 ಸಂಖ್ಯೆಯ ಚರ್ಮವನ್ನೂ ಕೂಡಾ ದಾನವಾಗಿ ನೀಡಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.
ಮೂತ್ರಪಿಂಡ ಮತ್ತು ಯಕೃತ್ತನ್ನು ಜೀವಂತ ದಾನಿಗಳು ಮೂಲಕ ಮತ್ತೊಬ್ಬರಿಗೆ ಕಸಿ ಮಾಡಬಹುದಾಗಿದ್ದು, ಹೃದಯ, ಶ್ವಾಸಕೋಶ ಮತ್ತು ಮೇದೋಜೀರಕ ಗ್ರಂಥಿಯ ದಾನಗಳನ್ನು ಮೆದುಳು ಮರಣ ಹೊಂದಿದ ದಾನಿಗಳ ಮೂಲಕ ಮಾತ್ರ ಪಡೆಯಬಹುದಾಗಿದೆ.
ಜೀವಂತ ದಾನಿಯು, ತನ್ನ ಹತ್ತಿರದ ಸಂಬoಧಿ ಅಥವಾ ದೂರದ ಸಂಬoಧಿ, ಸಂಗಾತಿ, ಮಗ-ಮಗಳು, ಸಹೋದರ-ಸಹೋದರಿ, ಪೋಷಕರು, ಅಜ್ಜಿ-ತಾತ ಮತ್ತು ಮೊಮ್ಮಕ್ಕಳು ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಅಂಗಾoಗ ದಾನ ಮಾಡಬಹುದಾಗಿದ್ದು, ಇವರು ತಮ್ಮ ಅಂಗಾoಗ ದಾನ ಮಾಡಲು ರಾಜ್ಯ ಅಧಿಕಾರ ಸಮಿತಿಯಿಂದ ಅನುಮೋದನೆ ಪಡೆಯಬೇಕು.
ಮೃತ ದಾನಿಯು ಸಾಮಾನ್ಯವಾಗಿ ತಲೆಗೆ ಮಾರಣಾಂತಿಕ ಗಾಯವನ್ನು ಅನುಭವಿಸಿ, ಅವನ/ ಅವಳ ಮೆದುಳು ಮರಣ ಹೊಂದಿದೆ ಎಂದು ಘೋಷಿಸಿದರೆ, ದಾನಿಗಳ ಕುಟುಂಬವು ದಾನಕ್ಕೆ ಒಪ್ಪಿಗೆ ನೀಡಲು ಆಯ್ಕೆ ಮಾಡಬಹುದು. ಅಂಗಾoಗಗಳನ್ನು ಪಡೆದ ನಂತರ ದಾನಿಯ ದೇಹವನ್ನು ಗೌರವಯುತವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಮತ್ತು ದಾನಿಯ ಅಂಗಗಳನ್ನು, ಅದನ್ನು ಸ್ವೀಕರಿಸುವ ರೋಗಿ ದಾಖಲಾಗಿರುವ ಆಸ್ಪತ್ರೆಗಳಿಗೆ ನಿಗಧಿತ ಅವಧಿಯೊಳಗೆ ತಲುಪುವಂತೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ.
ನೀ ನಾರಿಗಾದೇಯೋ ಎಲೆ ಮಾನವ ಎಂಬ ನುಡಿಗೆ ತದ್ದಿರುದ್ದವಾಗಿ, ಯಾವುದೇ ವ್ಯಕ್ತಿ ತನ್ನ ಮರಣದ ನಂತರವೂ ಅಂಗಾoಗ ದಾನದ ಮೂಲಕ ಹಲವರ ಜೀವ ಉಳಿಸುವ ಮತ್ತು ಹಲವು ಮಂದಿಯ ಜೀವಕ್ಕೆ ಬೆಳಕಾಗಬಹುದಾದ ಕಾರ್ಯಕ್ಕೆ ಪ್ರತಿಜ್ಞೆ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ತನ್ನ ದೇಹವನ್ನು, ಹಲವಾರು ಜೀವಗಳನ್ನು ಉಳಿಸುವ ಸಾರ್ಥಕ ಬದುಕನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ 24*7 ಕಾರ್ಯ ನಿರ್ವಹಿಸುವ ಜೀವ ಸಾರ್ಥಕತೆ ಮೊ.ಸಂಖ್ಯೆ 98450 06768 ನ್ನು ಅಥವಾ ಸಮೀಪದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾoಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ಕಡಿಮೆ ಇದೆ. ಆರೋಗ್ಯ ಇಲಾಖೆಯ ಮೂಲಕ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿoದ ಆರಂಭಗೊoಡು ಜಿಲ್ಲಾಸ್ಪತ್ರೆಯ ವರೆಗೂ ಕೂಡಾ ಅಂಗಾoಗ ದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಮೂಡನಂಬಿಕೆಗಳಿಗೆ ಒಳಪಟ್ಟು ಅಂಗಾoಗ ದಾನದಂತಹ ಮಹಾನ್ ಕಾರ್ಯದಿಂದ ಹಿಂದೆ ಸರಿಯಬಾರದು. ವ್ಯಕ್ತಿಯು ಸಹಜ ಸಾವಿನ ನಂತರ ಅತನ ಅಂಗಾoಗಗಳಿoದ 8 ಜನರ ಜೀವ ಉಳಿಸಬಹುದು ಮತ್ತು ಅಂದಾಜು 50 ಜನರ ಜೀವಕ್ಕೆ ಬೆಳಕಾಗಬಹುದು.; ಡಾ.ಅರ್ಚನಾ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ.
WhatsApp Group Join Now
Telegram Group Join Now
Share This Article
error: Content is protected !!