ಪದವಿ, ಸ್ನಾತಕೋತ್ತರ ಪದವಿ, ವೃತಿ ಶಿಕ್ಷಣಗಳ ಪದವಿ ಪಡೆದರೂ ಕೂಡಾ ನಾವು ಎಣಿಸಿದ ಉದ್ಯೋಗ ದೊರೆತಿಲ್ಲ ಎಂದು ನಿರುದ್ಯೋಗಿಯಾಗಿ ಕಾಲ ಕಳೆಯುವ ಯುವಕರ ನಡುವೆ, ಐ.ಟಿ.ಐ ವೃತ್ತಿ ಶಿಕ್ಷಣ ಪಡೆದು, ಕುರಿ ಸಾಕಾಣಿಕೆ ನಡೆಸುತ್ತಿರುವ ಯುವಕನೊಬ್ಬ, ಸರ್ಕಾರದ ನರೇಗಾ ಯೋಜನೆಯ ನೆರವು ಪಡೆದು ತನ್ನ ಕುರಿ ಸಾಕಾಣಿಕೆ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಂಡಿರುವ ಯಶಸ್ವಿ ಸಾಧನೆಯ ಕಥೆ ಇಲ್ಲಿದೆ..
ಮೂಲತಃ ಸಿದ್ದಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಗದ್ದೆ ಗ್ರಾಮದ 19 ವರ್ಷದ ನಂದನ್ ಈ ಯಶಸ್ವಿ ಸಾಧನೆಯ ಯುವಕ. ಇವರ ತಂದೆ ತಾಯಿ ಯವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ಕೂಡಾ ತಮ್ಮ ನಾಲ್ವರು ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದ್ದು, ಎಲ್ಲಾ ಮಕ್ಕಳು ಸಹ ತಮ್ಮ ಸ್ವಂತಿಕೆಯನ್ನು ಕಂಡುಕೊAಡಿದ್ದಾರೆ. ಅವರಲ್ಲಿ ನಂದನ್ ತನ್ನ ಐ.ಟಿ.ಐ ಶಿಕ್ಷಣದ ನಂತರ ಕೊರೋನಾ ವೈರಸ್ ಆವರಿಸಿದ ಸಮಯದಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದಾಗ, ಎರಡು ಕುರಿ ಮರಿಗಳಿಂದ ಕುರಿ ಸಾಕಾಣಿಕೆಯನ್ನು ಆರಂಭದಲ್ಲಿ ಹವ್ಯಾಸವನ್ನಾಗಿ ಆರಂಭಿಸಿದರು.
ಕುರಿ ಸಾಕಾಣಿಕೆ ಕೈಗೊಂಡ ನಂದನ್ಗೆ ಇನ್ನೂ ಹೆಚ್ಚಿನ ಕುರಿಗಳನ್ನು ಸಾಕುವ ಮೂಲಕ ಆರ್ಥಿಕವಾಗಿ ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದನ್ನು ಮನಗಂಡು, ಹೆಚ್ಚಿನ ಸಂಖ್ಯೆಯ ಕುರಿಗಳನ್ನು ಸಾಕಾಣಿಕೆ ಮಾಡಲು ನಿರ್ಧರಿಸಿದರು. ಆದರೆ ಹೆಚ್ಚಿನ ಸಂಖ್ಯೆಯ ಕುರಿಗಳನ್ನು ಸಾಕಲು ಶೆಡ್ನ ಅವಶ್ಯಕತೆಯಿದ್ದ ಕಾರಣ, ನರೇಗಾ ಯೋಜನೆಯಡಿ ಕುರಿ ಸಾಕಾಣಿಕ ಶೆಡ್ಗೆ ಸಹಾಯಧನ ದೊರೆಯುವ ಬಗ್ಗೆ ತಿಳಿದು, 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಂಜೂರಾದ ಸುಮಾರು 70,000 ರೂ ವೆಚ್ಚದಡಿ ಸುವ್ಯವಸ್ಥಿತವಾದ ಶೆಡ್ ನಿರ್ಮಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳ ಸಾಕಾಣಿಕೆಗೆ ಮುಂದಾಗಿದ್ದಾರೆ.
ನರೇಗಾದಡಿ ಶೆಡ್ ನಿರ್ಮಿಸಿಕೊಂಡ ನಂತರ ಕುರಿಗಳಿಗೆ ಸೂಕ್ತ ರಕ್ಷಣೆ ದೊರೆತಿದ್ದು, ಇದರಿಂದ ಕುರಿಗಳು ಹಾವು ಹುಳು ಹುಪ್ಪಡಿಗಳಿಂದ ಸುರಕ್ಷಿತವಾಗಿದ್ದು, ಆರೋಗ್ಯದಿಂದಿವೆ. ಅಲ್ಲದೇ ಈ ಶೆಡ್ ಕುರಿಗಳ ಸ್ವಚ್ಛತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕೂಡಾ ಅನುಕೂಲವಾಗಿರುತ್ತದೆ. ಪ್ರಸ್ತುತ ಇವರ ಶೆಡ್ನಲ್ಲಿ 19 ಕುರಿಗಳು ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಸಾಕಲು ಈ ಶೆಡ್ ನಿಂದ ಅನುಕೂಲವಾಗಲಿದೆ ಎನ್ನುತ್ತಾರೆ ನಂದನ್..
ಪ್ರಸ್ತತ ಸಾಕಾಣಿಕೆ ಮಾಡುತ್ತಿರುವ ಕುರಿಗಳನ್ನು ಆಗಾಗ್ಗೆ ಮಾರಾಟ ಮಾಡುವ ಮೂಲಕ ಆದಾಯ ಪಡೆಯುತ್ತಿರುವ ಇವರು, ಕುರಿಗಳ ಗೊಬ್ಬರದಿಂದಲೇ ವಾರ್ಷಿಕ 35 ರಿಂದ 40 ಸಾವಿರ ಆದಾಯವನ್ನು ಪಡೆಯುತ್ತಿದ್ದಾರೆ.
ಐಟಿಐ ಎಲೆಕ್ಟಿçಕಲ್ ಉತ್ತೀರ್ಣರಾಗಿರುವ ಇವರು ದೈನಂದಿನ ಕೆಲಸದೊಂದಿಗೆ ಕುರಿ ಸಾಕಣೆ ಕೈಗೊಂಡಿರುವುದರಿ0ದ, ಸ್ವಂತ ಊರಿನಲ್ಲಿಯೇ ಉತ್ತಮ ಆದಾಯದ ಜೊತೆಗೆ ಸ್ವ ಉದ್ಯೋಗವನ್ನು ಪಡೆದ ಖುಷಿ ನಮಗಿದೆ ಎನ್ನುವ ನಂದನ್, ಒಳ್ಳೆಯ ವಿದ್ಯಾಭ್ಯಾಸ ಪಡೆದು ಉದ್ಯೋಗಕ್ಕಾಗಿ ನಗರದೆಡೆಗೆ ಮುಖ ಮಾಡುವ ಯುವಕರ ನಡುವೆ, ಎಲೆಕ್ಟಿçಕಲ್ ಕೆಲಸದ ಜೊತೆಗೆ ಕೃಷಿಯಲ್ಲಿಯೂ ಅಭಿರುಚಿ ಹೊಂದಿ ಏನಾದರೂ ಹೊಸತನ ಕಾಣಬೇಕೆಂಬ ಹಂಬಲದಿ0ದ ಬದುಕು ಕಟ್ಟಿಕೊಂಡಿದ್ದಾರೆ…