ಜ್ಞಾನದೀಪ ಕಾರ್ಯಕ್ರಮದಡಿ ರೂ. 8 ಕೋಟಿ ಮೊತ್ತ ಅನುದಾನ ಮಂಜೂರುಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)

Vijayanagara Vani
ಜ್ಞಾನದೀಪ ಕಾರ್ಯಕ್ರಮದಡಿ ರೂ. 8 ಕೋಟಿ ಮೊತ್ತ ಅನುದಾನ ಮಂಜೂರುಗೊಳಿಸಿದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಯೋಜನಾ ಕಛೇರಿಯಲ್ಲಿ ಗ್ರಾಮೀಣ ಭಾಗದ ಶಿಕ್ಷಕರ ಕೊರತೆ ಇರುವ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಜ್ಞಾನದೀಪ ಕಾರ್ಯಕ್ರಮದಡಿ ಜ್ಞಾನದೀಪ ಶಿಕ್ಷಕರ ನಿಯೋಜನೆಯ ಆದೇಶ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ರೋಹಿತಾಕ್ಷ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ನಂತರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಮಾಜ ನಿರ್ಮಾಣಕ್ಕೆ ಶಿಕ್ಷಣವು ಅತ್ಯಮೂಲ್ಯವಾದದು ಎಂಬುದನ್ನು ಅರಿತು ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಕೊರತೆ ಇರುವ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಕರ್ನಾಟಕ ರಾಜ್ಯದ್ಯಾಂತ ಜ್ಞಾನದೀಪ ಕಾರ್ಯಕ್ರಮದಡಿ 1000 ಶಿಕ್ಷಕರ ನಿಯೋಜನೆಗಾಗಿ ರೂ. 8 ಕೋಟಿ ಮೊತ್ತ ಅನುದಾನವನ್ನು ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ್ದು ಈ ದಿನ ಸಿರುಗುಪ್ಪ ತಾಲೂಕಿನ ವ್ಯಾಪ್ತಿಯ 3 ಸರಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನಿಯೋಜನೆಯ ಮಾಡಲು ರೂ. 2 ಲಕ್ಷ 40 ಸಾವಿರ ಮೊತ್ತ ಮೀಸಲಿರಿಸಿದ್ದು ಶಿಕ್ಷಕರ ನಿಯೋಜನೆಯ ಆದೇಶ ಪತ್ರವನ್ನು ವಿತರಣೆ ಮಾಡಿದ್ದು, ಸಂತಸವನ್ನುಂಟು ಮಾಡಿದೆ ಹಾಗೂ ಶಿಕ್ಷಣಕ್ಕಾಗಿ ಯೋಜನೆಯ ಪಾಲುದಾರ ಬಂಧುಗಳ ವೃತ್ತಿಪರ ಶಿಕ್ಷಣ ಪಡೆಯುವ ಮಕ್ಕಳಿಗೆ ಸುಜ್ಞಾನನಿಧಿ ಕಾರ್ಯಕ್ರಮದಡಿ ಶಿಷ್ಯವೇತನ ಒದಗಣೆ ಮಾಡುವುದು ಹಾಗೂ ತಾಲೂಕಿನಲ್ಲಿ ಆಯ್ದ 6 ಪ್ರೌಢಶಾಲೆಗಳಲ್ಲಿ ಹೆಚ್ಚಿನ ಜ್ಞಾನಾರ್ಜನೆಗೆ ಅನುಕೂಲವಾಗುವಂತೆ 10ನೇ ತರಗತಿ ಮಕ್ಕಳಿಗೆ ಟ್ಯೂಷನ್‌ ಕ್ಲಾಸ್‌ ಆಯೋಜನೆ ಮಾಡಲು ಈ ವರ್ಷದ ಕ್ರಿಯಾ ಯೋಜನೆಯಲ್ಲಿ ರೂ. 60 ಸಾವಿರ ಮೊತ್ತ ಕಾಯ್ದಿರಿಸಲಾಗಿದ್ದು ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಏಳಿಗೆಗೆ ಕೆರೆ ಹೂಳೆತ್ತುವುದು, ಜನಮಂಗಲ ಕಾರ್ಯಕ್ರಮದಡಿ ವಿಶೇಷ ಚೇತನರಿಗೆ ಉಪಕರಣಗಳ ವಿತರಣೆ ಮಾಡುವುದು, ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕರಿಗೆ ಮಾಸಾಶನ ಜೊತೆಗೆ ವಾತ್ಸಲ್ಯ ಕಿಟ್‌ ಒದಗಣೆ ಮಾಡುವಂತಹ ಅನೇಕ ಕಾರ್ಯಕ್ರಮಗಳ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಸುಧೀರ್‌ ಹಂಗಳೂರು, ಇಬ್ರಾಂಪುರ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಕಮಲ ಹಾಗೂ ನಿಯೋಜನೆಗೊಂಡ ಜ್ಞಾನದೀಪ ಶಿಕ್ಷಕರಾದ ಲಕ್ಷ್ಮಿ ಜೆ ಕೆ, ಅನುಷಾ, ಎಂ ಅಂಜುಬೇಗಂ, ವಲಯದ ಮೇಲ್ವಿಚಾರಕರಾದ ಶಿವಪ್ಪ, ರೂಪಾ, ಚಂದ್ರಕಲಾ, ರಾಧಿಕಾ ಹಾಗೂ ಯೋಜನೆಯ ಪಾಲುದಾರ ಬಂಧುಗಳು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article
error: Content is protected !!