Ad image

ಶ್ರೀ ನೀಲಕಂಠೇಶ್ವರ ವಿನಾಯಕ ಗೆಳೆಯರ ಬಳಗದಿಂದ ಸಂಭ್ರಮದ ಗಣೇಶೋತ್ಸವ ಆಚರಣೆ

Vijayanagara Vani
ಶ್ರೀ ನೀಲಕಂಠೇಶ್ವರ ವಿನಾಯಕ ಗೆಳೆಯರ ಬಳಗದಿಂದ ಸಂಭ್ರಮದ ಗಣೇಶೋತ್ಸವ ಆಚರಣೆ

ಸಿರುಗುಪ್ಪ: ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರೀ ನೀಲಕಂಠೇಶ್ವರ ವಿನಾಯಕ ಗೆಳೆಯರ ಬಳಗದ ವತಿಯಿಂದ ಬುಧವಾರದಂದು ಬೆಳಿಗ್ಗೆ ಗಣೇಶ ಚತುರ್ಥಿ ಪ್ರಯುಕ್ತ ಮಣ್ಣಿನ ಬಣ್ಣದ ಗಣೇಶ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕೃತಗೊಳಿಸಿ ನಿರ್ದಿಷ್ಟ ಪೂಜಾ ವಿಧಿ ವಿಧಾನ ಗಳನ್ನು ನಡೆಸಿ ಪ್ರತಿಷ್ಠಾಪಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಕಂಡುಬಂದಿತು. ಮುಖ್ಯರಸ್ತೆಯಿಂದ ಶ್ರೀ ನೀಲಕಂಠೇಶ್ವರ ದೇವಸ್ಥಾನದವರೆಗೆ ಕನ್ನಡ ಬಾವುಟಗಳ ಬಣ್ಣದ ತೋರಣಗಳನ್ನು ಕಟ್ಟಲಾಗಿದೆ. ಕನ್ನಡ ನಾಡು, ನುಡಿ ಪ್ರತಿಬಿಂಬಿಸುವ ಮೈಸೂರಿನ ನಿರ್ಮಾಣದ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್,ಕದಂಬ ಅರಸ ಮಯೂರ ವರ್ಮ , ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಶ್ರೀ ಕೃಷ್ಣದೇವರಾಯ, ಚಾಲುಕ್ಯ ಅರಸ ಇಮ್ಮಡಿ ಪುಲಕೇಶಿ ಭಾವಚಿತ್ರಗಳನ್ನು ಕನ್ನಡದ ಮಹತ್ವವನ್ನು ಸಾರುವ ಸೂಕ್ತಿಗಳನ್ನು ವೇದಿಕೆ ಮುಂಭಾಗದಲ್ಲಿ ಅಳವಡಿಸಿ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಇಡೀ ದೇವಸ್ಥಾನವನ್ನು ದೀಪಾಲಂಕೃತಗೊಳಿಸಲಾಗಿತ್ತು. ಶುಕ್ರವಾರದಂದು ಗಣೇಶನ ವಿಗ್ರಹದ ವಿಸರ್ಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಕಲ ಸದ್ಭಕ್ತರಿಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂಘಟನಾಕಾರರು ತಿಳಿಸಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಅರ್ಚಕರಾದ ರಾಘವೇಂದ್ರ ಸ್ವಾಮಿ, ಕೊಪ್ರೇಶ್, ಚನ್ನಬಸವ ಸ್ವಾಮಿ, ದೇವಸ್ಥಾನದ ಅಧ್ಯಕ್ಷರಾದ ಬುಟ್ಟಾ ಶ್ರೀರಾಮುಲು, ವಿನಾಯಕ ಗೆಳೆಯರ ಬಳಗದ ಯುವಕರು ಸಕಲ ಸದ್ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜನೆಗೆ ಸಹಕಾರ ನೀಡಿದ ಎಲ್ಲಾ ಸದ್ಭಕ್ತರಿಗೆ ಸಂಘಟಕರು ಅಭಿನಂದನೆ ತಿಳಿಸಿದ್ದಾರೆ.

Share This Article
error: Content is protected !!
";