Ad image

ಅಂಧರ ಬಾಳಿಗೆ ಬೆಳಕು ತೋರಿದ ವೀರೇಶ್ವರ ಪುಣ್ಯಾಶ್ರಮ :  ಶ್ರೀ ರಂಭಾಪುರಿ ಜಗದ್ಗುರುಗಳು

Vijayanagara Vani
ಅಂಧರ ಬಾಳಿಗೆ ಬೆಳಕು ತೋರಿದ ವೀರೇಶ್ವರ ಪುಣ್ಯಾಶ್ರಮ :  ಶ್ರೀ ರಂಭಾಪುರಿ ಜಗದ್ಗುರುಗಳು
oplus_2

 

ಶಿವಮೊಗ್ಗ-ಸಪ್ಟಂಬರ್-4

ಕಣ್ಣಿದ್ದವರು ಚೆನ್ನಾಗಿ ಬಾಳಲಾಗದ ಕಾಲದಲ್ಲಿ ಕಣ್ಣಿಲ್ಲದವರನ್ನು ಕಾಪಾಡುವುದು ತುಂಬಾ ಕಷ್ಟದ ಕೆಲಸ. ಆದರೆ ಲಿಂ. ಶ್ರೀ ಪಂಚಾಕ್ಷರಿ ಗವಾಯಿಗಳು ಗದಗ ನಗರದಲ್ಲಿ ವೀರೇಶ್ವರ ಪುಣ್ಯಾಶ್ರಮ ಕಟ್ಟಿ ಅಂಧರ ಬಾಳಿಗೆ ಬೆಳಕು ತೋರಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಘಟಿಸಿದ ಗುರು ಬೋಧಾಮೃತ  ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಎಲ್ಲರನ್ನು ಸೃಷ್ಠಿಸಿದ ಪರಮಾತ್ಮ ಒಬ್ಬನೇ ಆಗಿದ್ದರೂ ಒಬ್ಬರಂತೆ ಮತ್ತೊಬ್ಬರಿಲ್ಲ. ಕಣ್ಣಿದ್ದು ಗುರಿ ಕಾಣದ ಎಷ್ಟೋ ಜನರು ಇರುವಾಗ ಕಣ್ಣಿಲ್ಲದವರು ಮಾಡಿದ ಸಾಧನೆ ಅದ್ಭುತ. ಲಿಂ.ಹಾನಗಲ್ಲ ಕುಮಾರಸ್ವಾಮಿಗಳವರ ಆಶೀರ್ವಾದ ಬಲದಿಂದ ಲಿಂ.ಪoಡಿತ ಪಂಚಾಕ್ಷರ ಗವಾಯಿಗಳವರು ಸಂಗೀತ ಲೋಕದಲ್ಲಿ ಧೃವತಾರೆಯಾಗಿ ಬೆಳಗಿದರು. ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಯ ಮೂಲಕ ಲಕ್ಷಾಂತರ ಜನರ ಬಾಳ ಬದುಕಿನ ಉನ್ನತಿಗೆ ಕಾರಣರಾದರು. ಅದೇ ದಾರಿಯಲ್ಲಿ ಡಾ|| ಪುಟ್ಟರಾಜ ಕವಿ ಗವಾಯಿಗಳು ತಮ್ಮ ಕ್ರಿಯಾ ಕರ್ತೃತ್ವ ಶಕ್ತಿಯಿಂದ ಬಹು ದೊಡ್ಡ ಮಠವನ್ನಾಗಿ ಅಭಿವೃದ್ಧಿ ಪಡಿಸಿದರು. ಅವರಿಂದ ತೆರವಾದ ಸ್ಥಾನದಲ್ಲಿ ಇಂದು ಕಲ್ಲಯ್ಯ ಅಜ್ಜನವರು ವೀರೇಶ್ವರ ಪುಣ್ಯಾಶ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ದಾವಣಗೆರೆ ಮತ್ತು ಶಿವಮೊಗ್ಗ ನಗರದಲ್ಲಿ ವೀರೇಶ್ವರ ಪುಣ್ಯಾಶ್ರಮದ ಮತ್ತೆರಡು ಶಾಖೆ ಪ್ರಾರಂಭಗೊಳಿಸಿರುವುದು ಅವರ ಸಾಮಾಜಿಕ ಕಾರ್ಯಕ್ಕೆ ಸಾಕ್ಷಿಯಾಗಿದೆ. ಅಂಧ ಮಕ್ಕಳ ಅನ್ನ ದಾಸೋಹಕ್ಕಾಗಿ ಶ್ರೀ ಜಗದ್ಗುರು ರಂಭಾಪುರಿ ಪೀಠದಿಂದ 51000/-(ಐವತ್ತೊಂದು ಸಾವಿರ) ರೂಪಾಯಿಗಳನ್ನು ಕೊಡುವುದಾಗಿ ಶ್ರೀ ಜಗದ್ಗುರುಗಳು ಘೋಷಿಸಿದರು.

ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರು, ಲಿಂಗಸುಗೂರು ಮಾಣಿಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು, ಸಂಗಮೇಶ ಗವಾಯಿಗಳು, ಮಾಜಿ ಶಾಸಕ ಹೆಚ್.ಎಂ.ಚoದ್ರಶೇಖರಪ್ಪ ಉಪಸ್ಥಿತರಿದ್ದರು. ವೀರೇಶ್ವರ ಪುಣ್ಯಾಶ್ರಮದ ಸಂಗೀತ ಪಾಠಶಾಲೆಯ ಮಕ್ಕಳು ಮತ್ತು ಅಭಿಮಾನಿಗಳು ಪೂರ್ಣ ಕುಂಭದೊoದಿಗೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರಮಾಡಿಕೊಂಡರು. ಸಮಾರಂಭಕ್ಕೂ ಮುನ್ನ ಲಿಂ.ಡಾ. ಪುಟ್ಟರಾಜ ಗವಾಯಿಗಳ ಪುತ್ಥಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪುಷ್ಪಾರ್ಚನೆ ನೆರವೇರಿಸಿದರು.

Share This Article
error: Content is protected !!
";