Ad image

ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಪ್ರವರ್ಗಕ್ಕೆ ಅನ್ಯ ಸಮುದಾಯದವರನ್ನು ಸೇರಿಸದಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

Vijayanagara Vani
ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಪ್ರವರ್ಗಕ್ಕೆ ಅನ್ಯ ಸಮುದಾಯದವರನ್ನು ಸೇರಿಸದಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

 

ಬಳ್ಳಾರಿ: ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಪ್ರವರ್ಗಕ್ಕೆ ಅನ್ಯ ಸಮುದಾಯದವರನ್ನು ಸೇರಿಸುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧ ನೀತಿಯನ್ನು ಖಂಡಿಸಿ ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ವಾಲ್ಮೀಕಿಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಪ್ರವರ್ಗಕ್ಕೆ ಅನ್ಯ ಸಮುದಾಯದವರನ್ನು ನಾಯಕ ಮಹಾ ಸಭಾ ಮತ್ತು ನಾಯಕ ವಾಲ್ಮೀಕಿ ಸಮುದಾಯದವರು ಪ್ರತಿಭಟನೆ. ನಡೆಸಿದರು.ಸಿರುಗುಪ್ಪ ನಗರದ ಅಭಯಾಂಜನೇಯ ಸ್ವಾಮೀ ದೇವಸ್ಥಾನದಿಂದ ತಾಲ್ಲೂಕು ಆಡಳಿತ ಕಚೇರಿಯ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರ ವಿರುದ್ಧ ಧ್ವನಿ ಎತ್ತಿದರು.
ನಂತರ ತಹಶೀಲ್ದಾರ ಗೌಸಿಯ ಬೇಗಂ ಅವರಿಗೆ ನಾಯಕ ವಾಲ್ಮೀಕಿ ಸಮುದಾಯದ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಟಿ.ನರಸಿಂಹ ನಾಯಕ ಮಾತನಾಡಿ,

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ (ಎಸ್.ಟಿ.) ಕುರುಬ ಜಾತಿ ಸೇರಿದಂತೆ ಇತರೆ ಸಮುದಾಯಗಳನ್ನು ಸೇರಿಸುವ ಪ್ರಯತ್ನ ಮಾಡುತ್ತಿರುವುದು ಸಂವಿಧಾನ ವಿರೋಧವಾಗಿದೆ.

ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿವಾಗಿ ಸಾಕಷ್ಟು ಮುಂದುವರೆದಿರುವ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ, ತೀರಾ ಹಿಂದುಳಿದ ಸಮುದಾಯಗಳಾದ ನಾಯಕ, ಬೇಡ, ವಾಲ್ಮೀಕಿ, ಜಾತಿಗಳಿಗೆ ಅನ್ಯಾಯವಾಗುತ್ತದೆ. ಇಂತಹ ಸಂವಿಧಾನ ವಿರೋಧಿ ನೀತಿಯ ಸರ್ಕಾರವನ್ನು ನಾಯಕ ವಾಲ್ಮೀಕಿ ಸಮಾಜದ ಸಮುದಾಯವು ಖಂಡಿಸುತ್ತದೆ.
ಎಸ್.ಟಿ.ಸಮುದಾಯದಲ್ಲಿ ಅನ್ಯ ಸಮುದಾಯದವರನ್ನು ಸೇರಿಸುವ ಕಾರ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಗೆ ಕೈ ಬೀಡಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲು ಸಿದ್ದರಿದ್ದೆವೆ ಎಂದು ಆಕ್ರೋಶಿಸಿದರು.

ಎಸ್.ಸಿ, ಎಸ್.ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ವೆಂಕಟೇಶ, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಬಾಗೇವಾಡಿ ಮುದುಕಪ್ಪ, ಖಜಾಂಚಿ ಎಸ್.ನರೇಂದ್ರಸಿಂಹ, ನಿರ್ದೇಶಕರಾದ ಎಂ.ವೀರೇಶಪ್ಪ, ಬಸವರಾಜ, ವೀರುಪಾಕ್ಷಪ್ಪ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕಮಹಾಸಾಭಾದ ಉಪಾಧ್ಯಕ್ಷ ಎಚ್.ಬಿ.ಈರಣ್ಣ,ಗೌರವ ಅಧ್ಯಕ್ಷ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಗಾದಿಲಿಂಗ, ಸಂಘಟನೆ ಕಾರ್ಯದರ್ಶಿ ಟೋಬಿ.ಯಲ್ಲಪ್ಪ, ನಿವೃತ್ತ ಪ್ರಾಂಶುಪಾಲರಾದ ಎಂ.ವೀರೇಶಪ್ಪ, ಬಸವರಾಜ, ನಗರಸಭೆ ಮಾಜಿ ಅಧ್ಯಕ್ಷ ಈರಣ್ಣ,ತೆಕ್ಕಲಕೋಟೆ ಪಟ್ಟಣ ಪಂಚಾಯತಿ ಅಧ್ಯಕ್ಷ ಎಸ್.ಆನಂದ, ಮುಖಂಡರಾದ ಸಣ್ಣವೆಂಕಟೇಶ.ಎನ್. ಸೋಮಯ್ಯ, ಹರ್ಷನಾಯಕ, ಹೊನ್ನಪ್ಪ, ಬೆಳಗಲ್ ಬಸವರಾಜ, ಬೆಳಗಲ್ ಶಿವಪ್ಪ, ಶೇಷಾದ್ರಿ, ಸಿರಿಗೇರಿ ಈರಯ್ಯ, ನಾಡಂಗ ಹನುಮೇಶ, ಬಲಕುಂದಿ ಹೊನ್ನುರಪ್ಪ, ದೇವರಮನೆ ರುದ್ರಪ್ಪ, ಬಿ.ಕೆ.ನರಸಪ್ಪ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ನಾಯಕ ವಾಲ್ಮೀಕಿ ಸಮುದಾಯದವರು ಭಾಗವಹಿಸಿದ್ದರು.

Share This Article
error: Content is protected !!
";