Ad image

ಬೇಸಿಗೆ ಹೆಚ್ಚಳ, ಕಾಡ್ಗಿಚ್ಚು ಸಂಭವ, 1926 ಸಹಾಯವಾಣಿ

Vijayanagara Vani
ದಾವಣಗೆರೆ ಮಾ.28 ದಾವಣಗೆರೆ ಪ್ರಾದೇಶಿಕ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಂಡುಬಂದರೆ ಕೂಡಲೇ ಅರಣ್ಯ ಸಹಾಯವಾಣಿ 1926 ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ. ಅಜಾಗರೂಕತೆಯಿಂದ ಬೆಂಕಿಕಡ್ಡಿಗಳು, ಬೀಡಿ ಹಾಗೂ ಸಿಗರೇಟ್ ತುಂಡುಗಳು ಅರಣ್ಯ ಬೆಂಕಿಗೆ ಕಾರಣವಾಗಿ, ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಇದರಿಂದ ನೈಸರ್ಗಿಕವಾದ ಅರಣ್ಯ ಸಂಪತ್ತಿಗೆ ಹಾನಿ ಮಾಡುವುದರೊಂದಿಗೆ ನೆಲೆಸಿರುವ ಪ್ರಾಣಿ-ಪಕ್ಷಿ, ಸಸ್ಯ ಸಂಕುಲಗಳ ನಾಶಕ್ಕೆ ಕಾರಣವಾಗುತ್ತದೆ.
ಸಹಾಯವಾಣಿ ಜೊತೆಗೆ ರತ್ನಾಕರ್ ಓಬಣ್ಣವರ-ವಲಯ ಅರಣ್ಯಾಧಿಕಾರಿ ಮೊ.ಸಂ.9986230824, ರಾಮಚಂದ್ರಪ್ಪ- ಉಪ ವಲಯ ಅರಣ್ಯಾಧಿಕಾರಿ, ಹೆಬ್ಬಾಳ್ ಶಾಖೆ ಮೊ.ಸಂ: 9513474666, ಹಸನ್ ಬಾಷಾ- ಉಪವಲಯ ಅರಣ್ಯಾಧಿಕಾರಿ, ಮಲೇಬೆನ್ನೂರು ಶಾಖೆ ಮೊ.ಸಂ: 8971081044, ಖಾಲೀದ್ ಮುಜ್ತಾಬಾ- ಉಪ ವಲಯ ಅರಣ್ಯಾಧಿಕಾರಿ, ಹರಿಹರ ಶಾಖೆ ಮೊ.ಸಂ:8105559874, ದಿನೇಶ್ ಕುಮಾರ್ ಕೆ.- ಉಪ ವಲಯ ಅರಣ್ಯಾಧಿಕಾರಿ, ದಾವಣಗೆರೆ ನಗರ ಶಾಖೆ ಮೊ.ಸಂ: 9535852070. ಕರೆಮಾಡಬೇಕೆಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

Share This Article
error: Content is protected !!
";