Ad image

*ಗ್ರಾಮದಲ್ಲಿ ಚರಂಡಿ ಮತ್ತು ಶೌಚಾಲಯ ನಿರ್ಮಿಸದೆ ಸ್ವಚ್ಛ ಭಾರತ ಸಾಧ್ಯವಿಲ್ಲ*

Vijayanagara Vani
*ಗ್ರಾಮದಲ್ಲಿ ಚರಂಡಿ ಮತ್ತು ಶೌಚಾಲಯ ನಿರ್ಮಿಸದೆ ಸ್ವಚ್ಛ ಭಾರತ ಸಾಧ್ಯವಿಲ್ಲ*
ಕಲ್ಲುಕಂಬ ಗ್ರಾಮಕ್ಕೆ ಚರಂಡಿ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ಆಗ್ರಹಿಸಿ ಪಟ್ಟಣದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಕುರುಗೋಡು ಸ್ಥಳೀಯ ಸಮಿತಿ ವತಿಯಿಂದ ಗುರುವಾರ  ಬೃಹತ್ ಪ್ರತಿಭಟನೆ ನಡೆಸಿ, ಮಾನ್ಯ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕೆ.ವಿ ನಿರ್ಮಲ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ , ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು, ಜೊತೆಗೆ ಚರಂಡಿ ನಿರ್ಮಾಣವನ್ನು ಸಹ ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು ಎಂದರು. 
   ಈ  ಸಂಧರ್ಭದಲ್ಲಿ ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ಕಾ. ಗೋವಿಂದ್ ಅವರು ಮಾತನಾಡಿ ದೇಶದಲ್ಲಿ  ಸ್ವಚ್ಛ ಭಾರತ ಎಂಬ ಪರಿಕಲ್ಪನೆಯ ನಿರ್ಮಾಣಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಮಿಸಲಾಗಿಡಲಾಗುತ್ತಿದೆ, ಮತ್ತು ದೊಡ್ಡ ಮಟ್ಟದಲ್ಲಿ ಇದರ ಬಗ್ಗೆ ಪ್ರಚಾರವಾಗುತ್ತಿದೆ, ಆದರೆ ಇನ್ನೊಂದೆಡೆ ಹಳ್ಳಿಗಳಲ್ಲಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿ ನಿರ್ಮಾಣ ಆಗಿವೆ. ಇದಕ್ಕೆ ಉದಾಹರಣೆ ಎನ್ನುವಂತೆ ತಾಲೂಕಿನ ಪಕ್ಕದಲ್ಲಿರುವ ಕಲ್ಲುಕಂಬ ಗ್ರಾಮದಲ್ಲಿ ಒಂದೂ (ಓಣಿ) ಬಿದಿಯಲ್ಲಿಯೂ ಸಹ ಚರಂಡಿ  ವ್ಯವಸ್ಥೆ ಇಲ್ಲದಿರುವುದು ಈ ಗ್ರಾಮವನ್ನು ಸ್ವಚ್ಛತೆಯಿಂದ ನಿರ್ಲಕ್ಷಿಸಿದಂತೆ ಮಾಡಿದೆ.
ಇನ್ನೊಂದೆಡೆ ಇತ್ತೀಚೆಗೆ ಸಾಕಷ್ಟು ಸಾಕ್ರಮಿಕ ರೋಗಗಳು ಹಬ್ಬುತ್ತಿದ್ದು, ಇದನ್ನು ತಡೆಯಲು ಸರ್ಕಾರದ ವತಿಯಿಂದ ವಿವಿಧ ರೀತಿಯ ಪ್ರಚಾರ ಜಾಥಗಳನ್ನು ಮಾಡುವುದನ್ನು ನಾವು ನೋಡುತ್ತಿದ್ದೇವೆ, ಆದರೆ ಮೂಲಭೂತವಾಗಿ ಸ್ವಚ್ಛತೆಯನ್ನು ಕಾಪಾಡುವ ಚರಂಡಿಯನ್ನು ನಿರ್ಮಿಸಲು ಪ್ರಯತ್ನ ಮಾಡದೆ, ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಿಲ್ಲ.
ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ, ಒಂದೇ ಕುಟುಂಬದಂತೆ ಬದುಕುತ್ತಿದ್ದ ಜನರ ನಡುವೆ ಇಂದು ಹಲವಾರು ರೀತಿಯ ಘರ್ಷಣೆಗಳು ನಡೆಯಲು ಪ್ರಾರಂಭ ಆಗಿವೆ. ಜೊತೆಗೆ ಸೊಳ್ಳೆಗಳ ಕಾಟದಿಂದ ಹಲವಾರು ರೋಗಗಳು  ತಗಲುತ್ತಿವೆ, ಈ ಸಮಸ್ಯೆಯನ್ನು ಅಲ್ಲಿನ ಅಧಿಕಾರಿಗಳ ಗಮನಕ್ಕೆ ತಂದ್ದಿದ್ದರೂ ಸಹ , ಯಾವುದೇ ಪರಿಹಾರ ಕಂಡಿಲ್ಲ. ಹಾಗಾಗಿ ಅನಿವಾರ್ಯವಾಗಿ ಜನರು ಬಿದಿಗಿಳಿಯುವಂತಾಗಿದೆ, ಹಾಗಾಗಿ  ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ,   ಕೂಡಲೇ  ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯನ್ನು ನಿರ್ಮಿಸಬೇಕು.
ಈ ಸಂದರ್ಭದಲ್ಲಿ
ಸಮಿತಿ ಸದಸ್ಯರಾದ ಕೋಳೂರು ಪಂಪಾಪತಿ ಅವರು ಮಾತನಾಡುತ್ತಾ , ಈ ಗ್ರಾಮದಲ್ಲಿ ಮಹಿಳೆಯರ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಹಲವಾರು ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿವೆ. ಕೆಲವು ಪ್ರದೇಶಗಳಲ್ಲಿ  ಮಹಿಳೆಯರು ಶೌಚಕ್ಕೆ ಹೋದಾಗ ಹಲವಾರು ದುರ್ಗಟನೆಗಳು ನಡೆದಿರುವುದು ತಮ್ಮಗನಕ್ಕಿರುತ್ತದೆ, ಇಂದು ವೈಯಕ್ತಿಕ ಶೌಚಾಲಯ ಕಟ್ಟಿಸಲೂ ಸಹ ಸ್ಥಳದ ಕೊರತೆಯ ಕಾರಣದಿಂದ ದೊಡ್ಡ ಸಂಖ್ಯೆಯ ಮಹಿಳೆಯರು ಬಯಲನ್ನೇ ಅವಲಂಬಿಸುವಂತಾಗಿದೆ. ಇನ್ನೊಂದೆಡೆ ನೀರಿನ ಸಮಸ್ಯೆಯೂ ಇಲ್ಲಿ ಗಂಭೀರವಾಗಿದೆ. ನಮ್ಮ ದೇಶದಲ್ಲಿ ಹಲವಾರು ಹಬ್ಬ-ಹರಿದಿನಗಳು, ಮಧುವೆಗಳು ಹೆಚ್ಚಾಗಿ ನಡೆಯುವಂತ ಪ್ರದೇಶ, ಇಂತಾ ಕಾರ್ಯಕ್ರಮಗಳು ನಡೆಯುವ ಸಮಯದಲ್ಲೂ ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಬಹಳ ಬೇಕಾಗುತ್ತದೆ. ಹಾಗಾಗಿ, ಕೂಡಲೇ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು.
ಒಟ್ಟಾರೆ, ಸ್ವಾತಂತ್ರ್ಯ ದೇಶದಲ್ಲಿ  ನಾಗರಿಕರು ತಲೆ ಎತ್ತಿಕೊಂಡು  ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ  ಈ ಬೇಡಿಕೆಗಳನ್ನು ಹಿಡಿರುವಂತೆ ನೋಡಿಕೊಳ್ಳಲು ಒಂದು ಹೋರಾಟ ಸಮಿತಿಯನ್ನು ರಚಿಸಲಾಯಿತು.ಈ ಸಂಧರ್ಭದಲ್ಲಿ ಸಮಿತಿ ಸದಸ್ಯರಾದ ಗುರಳ್ಳಿ ರಾಜ ಈ ಹೋರಾಟದ ಅಧ್ಯಕ್ಷತೆ ವಹಿಸಿದ್ದರು,  ರೈತ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಸಮಿತಿ ಸದಸ್ಯರಾದ ಬಸವರಾಜ, ಕಾಸಿಂ ಸಾಬ್ ಲಿಂಗಪ್ಪ, ಗ್ರಾಮಸ್ತರಾದ  ತಿಪ್ಪೇಸ್ವಾಮಿ, ಮಾರೆಪ್ಪ,, ನಾಗರಾಜ,  ಕಾಗಿ ದೇವಣ್ಣ, ವೆಂಕಟೇಶ್, ಅಡವಿ ಕುಮಾರ, ಬಿ.ಮಾರೆಪ್ಪ, ಶಿವಕುಮಾರ,  ಹನುಮಂತಪ್ಪ, ಪಾಂಡುರಂಗ, ಗಾದಿಲಿಂಗಪ್ಪ, ನಾಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
Share This Article
error: Content is protected !!
";