ಆಲೂರುತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ….. ತಾಲ್ಲೂಕು ಮಟ್ಟದದೇಶಭಕ್ತಿಗೀತಗಾಯನ ಸ್ಪರ್ಧೆ ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ, ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಬೇಕಿದೆ : ಸುರೇಶ್‌ಗುರೂಜಿ.

Vijayanagara Vani
ಆಲೂರುತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ…..  ತಾಲ್ಲೂಕು ಮಟ್ಟದದೇಶಭಕ್ತಿಗೀತಗಾಯನ ಸ್ಪರ್ಧೆ  ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ, ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಬೇಕಿದೆ : ಸುರೇಶ್‌ಗುರೂಜಿ.

ಆಲೂರು : ಪ್ರಾಥಮಿಕ ಹಂತದಿ0ದಲೇಇ0ದು ಮಕ್ಕಳಲ್ಲಿ ದೇಶಾಭಿಮಾನ, ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಬೇಕಿದೆ. ಜಾತ್ಯಾತೀತವಾಗಿ, ಧರ್ಮಾತೀತವಾಗಿ ಸರ್ವರನ್ನೂ ಪ್ರೀತಿಸುವ, ಗೌರವಿಸುವ ಮನೋಭಾವವನ್ನು ಬೆಳೆಸುವ ತುರ್ತು ವರ್ತಮಾನದಲ್ಲಿದೆಎಂದು ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್‌ಗುರೂಜಿಅಭಿಪ್ರಾಯಪಟ್ಟರು.


ಅವರುಆಲೂರುತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಪಟ್ಟಣದಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದತಾಲ್ಲೂಕು ಮಟ್ಟದದೇಶಭಕ್ತಿಗೀತಗಾಯನ ಸ್ಪರ್ಧಾಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳಲ್ಲಿ ರಾಷ್ಟಿಯ ಸದ್ಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿದೇಶಭಕ್ತಿಗೀತಗಾಯನಮಹತ್ವದ ಪಾತ್ರ ವಹಿಸುತ್ತದೆ. ಸಾಮೂಹಿಕ ಗಾಯನದಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವ, ಸಮನ್ವಯತೆ, ಸಹೋದರತೆ, ಸಹಬಾಳ್ವೆ, ಸಂಯಮ ಮುಂತಾದ ಸಾಮಾಜಿಕ ಮೌಲ್ಯಗಳ ಜೊತೆಗೆ ಶಿಸ್ತು, ಸೇವೆ ಹಾಗೂ ದೇಶದ ಬಗೆಗಿನ ಗೌರವ ಭಾವನೆ ಮೂಡುತ್ತದೆಎಂದರು.
ರಾಜ್ಯ ಸಂಘಟನಾ ಸಹಾಯಕಆಯುಕ್ತೆ ಎಚ್.ಎಂ.ಪ್ರಿಯಾ0ಕ ಮಾತನಾಡಿಆಲೂರುತಾಲ್ಲೂಕು ಸ್ಥಳೀಯ ಸಂಸ್ಥೆ ವಿಭಿನ್ನವಾದ ಸ್ಕೌಟ್ಸ್, ಗೈಡ್ಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಈ ಸಂಸ್ಥೆಯಉನ್ನತಿಗೆ ಶ್ರಮಿಸುತ್ತಿದೆ. ಇಂದಿನ ಸ್ಪರ್ಧೆಗೆಉತ್ತಮ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡಿರುವುದುಅಭಿನ0ದನೀಯವಾದುದುಎoದರು.
ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್‌ಎಸ್. ಉಪ್ಪಾರ್ ಮಾತನಾಡಿ ಕಳೆದ ವರ್ಷನಮ್ಮತಾಲ್ಲೂಕಿನ ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಫ್ಲಾಕ್ ವಿಭಾಗದದೇಶಭಕ್ತಿಗೀತಗಾಯನ ಸ್ಪರ್ಧೆಯಲ್ಲಿತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದುರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಜಿಲ್ಲೆ ಹಾಗೂ ಆಲೂರುತಾಲ್ಲೂಕಿನಗೌರವ ಹೆಚ್ಚಿಸಿದ್ದರು.ಪ್ರಸಕ್ತ ಸಾಲಿನಲ್ಲಿ ನಾಲ್ಕೂ ವಿಭಾಗಗಳಲ್ಲಿಯೂ ಉತ್ತಮ ಸಾಧನೆಗೈದುತಾಲ್ಲೂಕಿನಕೀರ್ತಿ ಹೆಚ್ಚಿಸಲಿ ಎಂದರು.


ಗಾಯನ ಸ್ಪರ್ಧೆಯಲ್ಲಿ ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಎಂ.ಎಲ್.ಎಲಿಜೆಬೆತ್ ಹಾಗೂ ಮಕ್ಕಳು, ಭೈರಾಪುರ ಬೆಥಸ್ಥ ಮಾಡೆಲ್ ಶಾಲೆಯಜಿ.ಕೆ.ಶಿಲ್ಪಕೃತಿಹಾಗೂ ಮಕ್ಕಳು, ಎಚ್.ಎನ್. ಸೌಮ್ಯ, ಚಂದ್ರು ಪಿ.ಹಾಗೂ ಮಕ್ಕಳು, ಇನಸ್ಪೆöÊರ್ ಶಾಲೆಯಅನೀಸ್ ಬಿ.ವಿಹಾಗೂ ಮಕ್ಕಳು, ಕೆ.ಪಿ.ಎಸ್.ರಾಯರಕೊಪ್ಪಲಿನ ಹಾಲಪ್ಪಹಾಗೂ ಮಕ್ಕಳು, ವಾಟೆಹೊಳೆ ಶಾಲೆಯ ಮಹೇರಾಬಾನುಹಾಗೂ ಮಕ್ಕಳು, ಹೊನ್ನೇನಹಳ್ಳಿ ಕೂಡಿಗೆ ಪ್ರೌಢ ಶಾಲೆಯರೇಷ್ಮಾಹಾಗೂ ಮಕ್ಕಳು, ಜಿ.ಎನ್.ಎಚ್.ಪಿ.ಎಸ್. ಆಲೂರಿನ ಕೆ.ಎಲ್.ವೆಂಕಟರ0ಗಯ್ಯಹಾಗೂ ಮಕ್ಕಳು, ಮಗ್ಗೆ ಸೇಂಟ್‌ಕ್ಸೇವಿಯರ್ ಶಾಲೆಯ ಪುಷ್ಪ ಕೆ.ಹಾಗೂ ಮಕ್ಕಳು, ಮರಸುಹೊಸಹಳ್ಳಿ ಎಂ.ಡಿ.ಆರ್.ಎಸ್. ಶಾಲೆಯಕಾವ್ಯಎನ್.ಜೆ.ಹಾಗೂ ಮಕ್ಕಳು, ಕಿತ್ತೂರುರಾಣಿಚೆನ್ನಮ್ಮ ವಸತಿ ಶಾಲೆಯ ಲತಾ ಪಿಹಾಗೂ ಮಕ್ಕಳು, ಭೈರಾಪುರಎಸ್.ವಿ.ಕಾನ್ವೆಂಟಿನದೇವರಾಜು ಹಾಗೂ ಜಯಂತಿಹಾಗೂ ಮಕ್ಕಳು, ರಾಯರಕೊಪ್ಪಲು ವಿವೇಕಾನಂದ ಶಾಲೆಯ ಎನ್.ಆರ್.ಶಿವಶಂಕರ್‌ಹಾಗೂ ಮಕ್ಕಳು, ಕಣತೂರು ಶಾಲೆಯ ನಯನ ಹಾಗೂ ಮಕ್ಕಳು ಮತ್ತು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆಮುoತಾದವರು ಭಾಗವಹಿಸಿದ್ದರು.
ಜಿಲ್ಲಾ ಹಂತಕ್ಕೆಆಯ್ಕೆ
ಕಬ್ (1-5 ನೇ ತರಗತಿ ಬಾಲಕರು) ವಿಭಾಗದಲ್ಲಿ ಕೆ.ಪಿ.ಎಸ್. ರಾಯರಕೊಪ್ಪಲು ಮಕ್ಕಳು; ಫ್ಲಾಕ್ (1-5 ನೇ ತರಗತಿ ಬಾಲಕಿಯರು) ವಿಭಾಗದಲ್ಲಿ ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು; ಸ್ಕೌಟ್ಸ್ (6-10 ನೇ ತರಗತಿ ಬಾಲಕರು) ವಿಭಾಗದಲ್ಲಿ ಭೈರಾಪುರದ ಬೆಥೆಸ್ಥಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು; ಗೈಡ್ಸ್(6-10 ನೇ ತರಗತಿ ಬಾಲಕಿಯರು) ವಿಭಾಗದಲ್ಲಿ ಮರಸು ಹೊಸಹಳ್ಳಿಯ ಮೊರಾರ್ಜಿದೇಸಾಯಿ ವಸತಿ ಶಾಲೆಯ ಮಕ್ಕಳುತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಜಿಲ್ಲಾಹಂತಕ್ಕೆಆಯ್ಕೆಯಾದರು.
ತೀರ್ಪುಗಾರರಾಗಿ ಎ.ಎಸ್.ಒ.ಸಿ. ಪ್ರಿಯಾಂಕಎಚ್.ಎ, ಸಾಹಿತಿ ಶಾಂತಅತ್ನಿ, ಬಿ.ಆರ್.ಪಿ. ಪ್ರಮೀಳಾ, ಜಿಲ್ಲಾ ಕಾರ್ಯದರ್ಶಿ ಸುರೇಶ್‌ಗುರೂಜಿ, ಹಿರಿಯಗೈಡರ್‌ಎಚ್.ಜಿ.ಕಾಂಚನಮಾಲ, ಕಬ್ ಮಾಸ್ಟರ್ ಕೆ.ಎಲ್.ವೆಂಕಟರoಗಯ್ಯ, ಸ್ಕೌಟ್ ಮಾಸ್ಟರ್ ಪಿ.ಚಂದ್ರು, ಗೈಡ್‌ಕ್ಯಾಪ್ಟನ್ ಮಹೇರಾಬಾನು, ಫ್ಲಾಕ್ ಲೀಡರ್‌ಎಂ.ಎಲ್.ಎಲಿಜೆಬೆತ್‌ಕಾರ್ಯ ನಿರ್ವಹಿಸಿದರು.

WhatsApp Group Join Now
Telegram Group Join Now
Share This Article
error: Content is protected !!