ಸಿರುಗುಪ್ಪ:ವಿಶ್ವ ವಿಕಲಚೇತನರ ದಿನಾಚರಣೆಯನ್ನು
ತಾಲ್ಲೂಕು ಮಟ್ಟದ ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ತಾಲೂಕಿನ ಕೆಂಚನಗುಡ್ಡ ವಲಯದ ಸ ಹಿ ಪ್ರಾ ಶಾಲೆ ಕೆಂಚನಗುಡ್ಡದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ನೋಡಲ್ ಅಧಿಕಾರಿ ವಿರೇಶ ಉಚ್ಚಾಟನೆ ನಡೆಸಿದರು ನಂತರ ಮಾತನಾಡಿದ ಅವರುವ ವಿಶ್ವ ವಿಶೇಷಚೇತನರ ದಿನಾಚಾರಣೆಯ ದಿನದಂದು ವಿಶೇಷ ಚೇತನರು ಸಹ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ.
ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ವಿಕಲಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ, ಮನೋರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ. ಅದುವೇ ಡಿಸೆಂಬರ್ 3. ಇಂದು ಜಗತ್ತಿನೆಲ್ಲೆಡೆ ವಿಶ್ವ ವಿಶೇಷಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ.
ಮೂಲತಃ ಈ ದಿನವನ್ನು ಆರಂಭಿಸಿದ್ದು 1976-77ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ.
ಸಮಾನ ಅವಕಾಶ
ಪುನರ್ವಸತಿ ಸೌಲಭ್ಯ ವಿಕಲತೆಯನ್ನು ತಡೆಗಟ್ಟಲು
ಆದ್ಯತೆ ನೀಡುವ ದೃಷ್ಟಿಕೋನದಿಂದ ವಿಶೇಷ ಚೇತನರು ಸಾಮಾನ್ಯರಂತೆ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯಿಂದ ಸಂಪೂರ್ಣವಾಗಿ ಪಾಲ್ಗೊಳ್ಳುವುದಾಗಿತ್ತು.
ಜೊತೆಗೇ ನಾಗರಿಕ ಹಕ್ಕುಗಳೊಂದಿಗೆ ಜೀವಿಸಿ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕವಾಗಿ ಪ್ರಗತಿ ಹೊಂದುವುದು ಮೂಲ ಉದ್ದೇಶವಾಗಿತ್ತು.
ಈ ಗುರಿಯನ್ನು ಸಫಲತೆಗಾಗಿ ಮಹತ್ವವನ್ನು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ವಿಶ್ವ ವಿಶೇಷ ಚೇತನರ ದಿನವನ್ನಾಗಿ ಆಚರಿಸಲು ನಿಗದಿಪಡಿಸಲಾಗಿತ್ತು.
ನಂತರ 1981ರ ವರ್ಷವನ್ನು ವಿಶ್ವ ವಿಶೇಷ ಚೇತನ ವ್ಯಕ್ತಿಗಳ ವರ್ಷವೆಂದು ಘೋಷಿಸಿ, ವಿಶ್ವಸಂಸ್ಥೆಯು 1982 ರಿಂದ 1992 ರವರೆಗೆ 10 ವರ್ಷಗಳ ಕಾಲ ವಿಕಲಚೇತನರ ದಶಕ ವರ್ಷ ಎಂದು ಕರೆದು ಪ್ರಗತಿಗಾಗಿ ಮೇಲಿನ ಉದ್ದೇಶಗಳನ್ನು ಗುರಿ ಸಾಧಿಸುವುದಕ್ಕಾಗಿ ಸತತವಾಗಿ ಎಲ್ಲಾ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಿತು.
1992 ರಲ್ಲಿ ವಿಶ್ವಸಂಸ್ಥೆಯಲ್ಲಿ ನೆಡೆದ ಸಾಮಾನ್ಯ ಸಭೆಯ ನಿರ್ಣಯ 23/7 ಬಹುಮತದ ಸಂಖ್ಯೆಯ ಅನುಮೋದನೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಇದೇ ನಿರ್ದೇಶನದಂತೆ ಭಾರತವು ಅಧಿಕೃತವಾಗಿ 1992 ರಲ್ಲಿ ಆರಂಭಿಸಲಾದ ಈ ದಿನಾಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ.
ಈ ದಿನದಂದು ಜಗತ್ತಿನಲ್ಲಿರುವ ಅನೇಕ ವಿಶೇಷಚೇತನರ ಯಶೋಗಾಥೆಗಳನ್ನು ಅರುಹಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ.
WHO 2020-21ರ ಪ್ರಕಾರ ಒಂದು ಶತಕೋಟಿಗಿಂತಲೂ ಹೆಚ್ಚು ವಿಕಲಚೇತನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಅಂದರೆ 100ರಕ್ಕೆ ಶೇಕಡ 15ರಷ್ಟು ವಿಶ್ವದಲ್ಲಿ ವಿಕಲಚೇತನರಿದ್ದಾರೆಂದು ಅರ್ಥ.
ಇವರಿಗೆ ಮೂಲಭೂತವಾಗಿ ವರ್ತನೆಯ ಸಮಸ್ಯೆಗಳು
ಭೌತಿಕ ಸಮಸ್ಯೆಗಳು
ಸಮೂಹನ ಸಮಸ್ಯೆಗಳು,ಹಣಕಾಸಿನ ಅಡಚಣೆಗಳು
ಈ ಪ್ರಮುಖ ಸಮಸ್ಯೆಗಳಿಂದ ವಿಶೇಷ ಚೇತನರು ತಮ್ಮ ಬದುಕನ್ನು ರೂಪಿಸಿಕೊಂಡು ಮುಖ್ಯ ವಾಹಿನಿಗೆ ಬರಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
1. ವಿಶೇಷ ಚೇತನರ ಹಕ್ಕುಗಳು ಕಾಯ್ದೆಗಳು
2. 2006ರಲ್ಲಿ ವಿಶೇಷ ಚೇತನರ ಕುರಿತಾದ ಹಕ್ಕುಗಳ ಸಮಾವೇಶದ ನಿರ್ಣಯಗಳು
3. 2009ರ RTE ಕಾಯಿದೆಗಳು ಶಿಕ್ಷಣ ಪಡೆಯಲು ಉತ್ತಮವಾಗಿ ಸಹಕಾರಿಯಾಗಿದೆ.
ಇಂಥವರಿಗೆ ಅನುಕಂಪ ಕರುಣೆ ಪೂರ್ವದ ಬದಲಾಗಿ ನಮ್ಮಿಂದ ಆದಷ್ಟು ಸಮಾನ ಅವಕಾಶಗಳನ್ನು ನೀಡಿ, ಸಹಾಯ ಮಾಡೋಣ. ಸರ್ಕಾರ ಕೂಡ ವಿಶೇಷ ಚೇತನರ ಕ್ಷೇಮಾಭಿವೃದ್ಧಿಗೆ ವಿಶೇಷ ಸವಲತ್ತುಗಳನ್ನು ಒದಗಿಸುತ್ತಿದೆ. ಇವನ್ನೆಲ್ಲ ಸದುಪಯೋಗ ಪಡಿಸಿಕೊಂಡು ವಿಶೇಷಚೇತನರು ಸಹ ಸಾಮಾನ್ಯರಂತೆ ಸುಖ ಸಂತೋಷ ನೆಮ್ಮದಿಯಿಂದ ಜೀವನ ಸಾಗಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ. ವಿಕಲಚೇತನರನ್ನು ಪ್ರೋತ್ಸಾಹಿಸುವುದರ ಸಲುವಾಗಿ ಅಶ್ವಿನಿ ಅಂಗಡಿಯವರನ್ನು ಮತ್ತು ಅರುಣೀಮಾ ಸಿನ್ನ ರವರ ಜೀವನ ಚರಿತ್ರೆಯನ್ನು ವಿವರಿಸಿದರು.
ಕಾರ್ಯಕ್ರಮ ವನ್ನು ಅಧ್ಯಕ್ಷತೆಯನ್ನುಶ್ರೀಮತಿ ಎಂ. ಟಿ.ಶಾಂತ, ಸಮೂಹ ಸಂಪನ್ಮೂಲ ವಿಶೇಷ ಚೇತನರ ಮೂಲಭೂತ ಹಕ್ಕುಗಳನ್ನು ಮನವರಿಕೆ ಮಾಡಿ, ಸರ್ಕಾರಿ ಸೌಲಭ್ಯಗಳನ್ನು ಕೊಡಿಸುವುದು ಮತ್ತು ವಿಶೇಷ ಚೇತನರಿಗೆ ಅನುಕಂಪದ ಅವಶ್ಯಕತೆಗಿಂತ ಅವಕಾಶ ಮತ್ತು ಭರವಸೆಗಳು ಅವಶ್ಯಕತೆ ಇದೆ. ವಿಶೇಷ ಚೇತನರ ಹಾಗೂ ಸಾಮಾನ್ಯ ಮಕ್ಕಳಿಗೂ ಜೊತೆಗೆ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಮಕ್ಕಳಿಗೆ ಸಂತೋಷದ ಜೊತೆಗೆ ಒಳ್ಳೆಯ ಬಹುಮಾನಗಳನ್ನು ನೀಡಿ ಪ್ರೇರಣೆ ಪ್ರೋತ್ಸಾಹ ನೀಡುವುದು ಉದ್ದೇಶವಾಗಿದೆಂದು ಕಾರ್ಯಕ್ರಮದ ರೂವಾರಿಗಳಾದಅತಿಥಿಗಳಾದ ಬಿ ಆರ್ ಪಿ ಸದಾನಂದಚಾರ್ಯ,
ವಿಕಲಚೇತನ ಮಕ್ಕಳಿಗೆ ಮ್ಯೂಸಿಕಲ್ ಚೇರ್ ಓಟ, ಓಟದ ಸ್ಪರ್ಧೆ, ಸಾಮಾನ್ಯ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ,ಚಿತ್ರ ಬಿಡಿಸುವಿಕೆ, ವಿಕಲಚೇತನರ ಕುರಿತಾಗಿ ಭಾಷಣ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಿ ಆಕರ್ಷಕ ಬಹುಮಾನಗಳನ್ನು ಶ್ರೀಮತಿ ಸರೋಜ ನಿವೃತ್ತ ಗುರುಮಾತೆಯರು-ಕುರುಗೋಡು ಇವರ ಪ್ರಾಯೋಜಕತ್ವದ ಮೂಲಕ ವಿತರಿಸಲಾಯಿತು.
ಈ ದಿನದ ಅಂಗವಾಗಿ
ವಿಶೇಷ ಚೇತನರಾದ ಶ್ರೀ ಲಕ್ಷ್ಮಣ ನಾಯ್ಕ -ರೋಜಗಾರ್ ಮಿತ್ರ ಕೆಂಚನಗುಡ್ಡ ಗ್ರಾಮ ಪಂಚಾಯತ್ ಹಾಗೂ ಸಂತೋಷ ಎಂಬ ಮಗುವಿನ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿಶ್ವ ವಿಕಲಚೇತನರ
ದಿನಾಚರಣೆಯ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ ಯಾದವ್ ಫಿಜಿಯೋಥೆರಪಿ ವೈದ್ಯರು, ಶಿಕ್ಷಕರಾದ ಫಕ್ರುದ್ದೀನ್ ಸಾಹೇಬ್, ವೆಂಕಟೇಶ್ ಮಾಳಮ್ಮ,
ಹೆಚ್.ವಾದಿರಾಜರಾವ್ ಶಿಕ್ಷಕರು, ಲೋಕೇಶ್ ರೆಡ್ಡಿ, ವಸುದೇಂದ್ರ, ರಾವ್ .ಕೆ. ಬಿಐಇಆರ್ ಟಿ,
ಟಿ ಯಾದ ಸುಭಾಷ್
ಸದರಿ ಶೈಕ್ಷಣಿಕ ತಾಲ್ಲೂಕಿನ ವ್ಯಾಪ್ತಿಯ ಮತ್ತು ಸಹ ಶಿಕ್ಷಕರು ಹಾಗೂ ವಿವಿಧ 21 ನ್ಯೂನತೆಯುಳ್ಳ ಮಕ್ಕಳು ಉಪಸ್ಥಿತರಿದ್ದರು.