ಚಿತ್ರದುರ್ಗಜುಲೈ25:
ಚಿತ್ರದುರ್ಗ ನಗರದ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಹಾರಾಣಿ ಪ್ರೌಢಶಾಲೆ ಮತ್ತು ಭೀಮಪ್ಪ ನಾಯಕ ಪ್ರೌಢಶಾಲೆಯ 4ನೇ ತರಗತಿ ಮತ್ತು 10ನೇ ತರಗತಿ ಮಕ್ಕಳಿಗೆ ಗುರುವಾರ ಟಿಡಿ ಲಸಿಕೆ ನೀಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣ ನಾಯಕ್, ಟಿಡಿ ಎಂದರೆ ಟೆಟನಸ್ ಮತ್ತು ಡಿಪ್ತೀರಿಯಾ ವಿರುದ್ಧದ ಲಸಿಕೆ. ಇದು ಧನುರ್ವಾಯು, ನರಮಂಡಲ ಮೇಲೆ ಪರಿಣಾಮ ಬೀರುವ ಗಂಭೀರ ಬ್ಯಾಕ್ಟೀರಿಯಾ ಸೋಂಕು ಮತ್ತು ಗಂಟಲು-ಮೂಗಿನ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ಸೋಂಕು ವಿರುದ್ಧ ಟಿಡಿ ಲಸಿಕೆ ಹಾಕಲಾಗುವುದು. 10 ವರ್ಷದ ಮಕ್ಕಳಿಗೆ ಮತ್ತು 16 ವರ್ಷದ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 61 ಮಕ್ಕಳಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ವೈ.ಬೋರಪ್ಪ, ಚಂದ್ರಗೌಡ, ಉಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಏಕಾಂತಮ್ಮ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.