Ad image

ರೈತರಿಂದ ಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ದೂರು ಬಂದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ತಹಸಿಲ್ದಾರ್

Vijayanagara Vani
ರೈತರಿಂದ ಗೊಬ್ಬರ ಅಂಗಡಿ ಮಾಲೀಕರ ವಿರುದ್ಧ ದೂರು ಬಂದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ತಹಸಿಲ್ದಾರ್
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
ಕೊಟ್ಟೂರ:- ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ  ರೈತರಿಗೆ  ಬೀಜ ಮತ್ತು ಗೊಬ್ಬರ ಹಾಗೂ ಇನ್ನಿತರ ಕೃಷಿ ಪರಿಕರಗಳನ್ನು ನಿಯಮಾವಳಿ  ಅನುಸಾರ ಗೊಬ್ಬರ ಅಂಗಡಿ ಮಾಲೀಕರು ರಸೀದಿ ನೀಡಿ  ಮಾರಾಟ ಮಾಡದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ತಹಸಿಲ್ದಾರರಾದ ಅಮರೇಶ್ ಜಿ ಕೆ ನೀಡಿದರು.  ಬುಧವಾರದಂದು  ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಬೀಜ/ಗೊಬ್ಬರ ಮಾರಾಟಗಾರರ ಸಭೆಯನ್ನು ಉದ್ದೇಶಿಸಿ ರೈತರಿಗೆ ಅಗತ್ಯ ಕೃಷಿ ಪರಿಕರಗಳಾದ ಬೀಜ ಗೊಬ್ಬರ ಗಳ ನ್ನು ಕೃತಕ ಅಭಾವ ಸೃಷ್ಟಿಸದೆ ನಿಗದಿಪಡಿಸಿದ ದರಕ್ಕಿಂತ  ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ತಾಕಿತು ಮಾಡಿದರು ಕೃಷಿ ಸಹಾಯಕ ನಿರ್ದೇಶಕರಾದ ಸುನಿಲ್ ಕುಮಾರ್ ಎಂ ಟಿ ಮಾತನಾಡಿ ಡಿಎಪಿ ಮತ್ತು ಯೂರಿಯಾ ಸಹಿತಾ ಎಲ್ಲಾ ರಸಗೊಬ್ಬರಗಳು ಸಾಕಷ್ಟು ಪೂರೈಕೆ ಇದ್ದು, ರೈತರು ಯಾವುದೇ ಒಂದು ಕಂಪನಿ/ವಿಧದ ಬೀಜ/ರಸಗೊಬ್ಬರಗಳ ಮೇಲೆ ಅವಲಂಬನೆಯಾಗದೇ ಪರ್ಯಾಯ ಬೀಜ/ರಸಗೊಬ್ಬರಗಳನ್ನು ಬಳಸುವಂತೆ ಸಲಹೆ ನೀಡಿದರು. 
 ವೃತ್ತ ನಿರೀಕ್ಷಕ ವೆಂಕಟಸ್ವಾಮಿ  ಮಾತನಾಡಿ  ಹಳ್ಳಿಗಳಲ್ಲಾಗಲೀ ಎಲ್ಲಿಯಾದರೂ ಬಂದು ಕಡಿಮೆ ಧರಕ್ಕೆ ಯಾವುದೇ ಅನುಮಿತಿ ಇಲ್ಲದೇ ಅನಧಿಕೃತವಾಗಿ ಬೀಜ ಅಥವಾ ಗೊಬ್ಬರವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಿದಲ್ಲಿನಿಯಮಾನುಸಾರ ಪರಿಶೀಲಿಸಿ ಮುಂದೆ ರೈತರಿಗಾಗುವ ತೊಂದರೆ ತಪ್ಪಿಸಬಹುದು ಎಂದು ಸಲಹೆ ನೀಡಿದರು.
 ಇದೇ ವೇಳೆ ವ್ಯಾಪಾರಸ್ಥರು  ಸಂಗ್ರಹಮಾಡಿರುವ ಗೋದಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕವನ್ನು ಹಾಕಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ ಗೊಬ್ಬರದ ದಾಸ್ತಾನು ಹಾಗೂ ಧರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ತಾಲೂಕಿನಲ್ಲಿ ಯಾವುದೇ ರೀತಿಯ ದೂರುಗಳು ಬಾರದಂತೆ ವ್ಯಾಪಾರವನ್ನು ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
 ಸಭೆಯಲ್ಲಿ ಕು.ಅಶ್ವಿನಿ ಡಿ, ಎಹೆಚ್ಒ ತೋಟಗಾರಿಕೆ ಇಲಾಖೆ, ನೀಲಾನಾಯ್ಕ ಕೃಷಿ ಅಧಿಕಾರಿ(ತಾಂತ್ರಿಕ) ಕುಮಾರಸ್ವಾಮಿ ಕೆ ಜಾರಿದಳ, ಹೊಸಪೇಟೆ, ರೈತ ಮುಖಂಡರಾದ ಬರ್ಮಣ್ಣ  ರಾಮಪ್ಪ, ಶ್ರೀಧರ, ಜಯಪ್ರಕಾಶನಾಯ್ಕ, ಸುರೇಶನಾಯ್ಕ , ಬೀಜ ಗೊಬ್ಬರ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀಧರಶೆಟ್ಟಿ ಹಾಗೂ ಇತರೆ ವ್ಯಾಪಾರಸ್ತರು ಹಾಜರಿದ್ದರು. ಸಿ.ಮ.ಗುರುಬಸವರಾಜ ನಿರ್ವಹಿಸಿದರು.
Share This Article
error: Content is protected !!
";