ಸರ್ಕಾರಿ ಸೇವೆಯ ಜೊತೆಗೆ ಸಮಾಜ ಸೇವೆಗೂ ನಿಂತ ತಹಶೀಲ್ದಾರ್ : ಅರಮನೆ ಸುಧಾ

Vijayanagara Vani
ಸರ್ಕಾರಿ ಸೇವೆಯ ಜೊತೆಗೆ ಸಮಾಜ ಸೇವೆಗೂ ನಿಂತ ತಹಶೀಲ್ದಾರ್ : ಅರಮನೆ ಸುಧಾ
ಮಸ್ಕಿ :   ಕಳೆದ 3 ವರ್ಷದಿಂದ ನಡೆದುಕೊಂಡು ಬರುತ್ತಿರುವ ಅನಾಥ, ವಿಕಲಚೇತನ ಹಾಗೂ ಬಡ ಮಕ್ಕಳ ಆಶ್ರಮ ಆಗಿರುವಂತಹ ಅಭಿನಂದನ್ ಸ್ಫೂರ್ತಿ ಧಾಮದಲ್ಲಿ ಪ್ರಸ್ತುತ 40 ಕ್ಕೂ ಹೆಚ್ಚು ಮಕ್ಕಳನ್ನು ಸಲಹುತ್ತಾ ಅವರಿಗೆ ಉಚಿತ ಊಟ ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಈ ಆಶ್ರಮದ ಮಕ್ಕಳ ವಾಸಕ್ಕಾಗಿ ಇರುವಂತಹ ಕಟ್ಟಡ ಪ್ರಸ್ತುತ ಇರುವಂತ ಸಂಖ್ಯೆಯ ಮಕ್ಕಳ ವಾಸಕ್ಕೆ ಚಿಕ್ಕದಾಗಿದೆ. ಅದಕ್ಕಾಗಿ ಅನ್ನ ಪ್ರಸಾದ ಭವನದ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ನಡೆದ ಭೂಮಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಮಸ್ಕಿ ತಹಶೀಲ್ದಾರ್ ಸುಧಾ ಅರಮನೆ ಅವರು ಮಸ್ಕಿಯ ಶೈಕ್ಷಣಿಕ ಕ್ರಾಂತಿಗೆ ಕಾರಣಗಳಲ್ಲಿ ಅಭಿನಂದನ್ ಸಂಸ್ಥೆಯು ಒಂದಾಗಿದೆ. ಸಾಮಾಜಿಕ, ಶೈಕ್ಷಣಿಕ, ಪರಸರ ಮತ್ತು ಸ್ವಚ್ಛತೆಯ ಕಾರ್ಯಗಳಲ್ಲಿ ಅವರು ಕೈಗೊಂಡ ಸೇವೆಗಳು ಅಮೋಘವಾಗಿವೆ. ಅವರು ಮಾಡುತ್ತಿರುವ ಈ ಮಕ್ಕಳ ಸೇವೆಗೆ ಮತ್ತೊಂದು ವಿಶೇಷ ಸೇವೆ ಆಗಿರುವ ಅಭಿನಂದನ್ ಸ್ಫೂರ್ತಿ ಧಾಮವು ನಮ್ಮ ಮಸ್ಕಿ ನಗರಕ್ಕೆ ಹೆಮ್ಮೆಯಾಗಿದೆ. ಇಂತಹ ಸಂಸ್ಥೆಯು ನಿರ್ಮಾಣ ಮಾಡಲು ಮುಂದಾಗಿರುವ ಅನ್ನ ಪ್ರಸಾದ ಭವನದ ಕಾರ್ಯಗಳಿಗೆ ಯಾವುದೇ ತೊಂದರೆ ಉಂಟಾಗದೆ ಯಶಸ್ವಿಯಾಗಿ ಮುಗಿಯಲಿ ಮಕ್ಕಳಿಗೆ ಒಳ್ಳೆಯದನ್ನು ಮಾಡುವ ಇವರ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿ ಅವರಿಗೆ ನಮ್ಮಿಂದ ಆದಷ್ಟು ಸಹಕಾರ ನೀಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಅಮರಪ್ಪ ಗುಡದೂರ, ಯಲ್ಲಪ್ಪ ಮಾಸ್ಟರ್ ,ಶರಣಬಸವ ವಕೀಲರು, ಬಸವರಾಜ್ ಮಿಟ್ಟಿಮನಿ, ಡಾಕ್ಟರ್ ನಾಗನಗೌಡ, ಶಿವಶಂಕರಪ್ಪ ಹಳ್ಳಿ , ಮಲ್ಲಿಕಾರ್ಜುನ ಕುಚ್ಚಾ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ,ಕಳಕಪ್ಪ ಹಾದಿಮನಿ, ಮಹಾಂತೇಶ ಜಾಫರಮಿಯಾ, ಅರುಣಕುಮಾರ ಶ್ರೇಷಿ, ಮಲ್ಲಿಕಾರ್ಜುನ ಬಡಿಗೇರ್ ಹಾಗೂ ಅಭಿನಂದನಾ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article
error: Content is protected !!